ಬಾಲಿವುಡ್ ನಟಿ ಕೃತಿ ಸನೊನ್ ಮದುಮಗಳಂತೆ ಸಿಂಗರಿಸಿಕೊಂಡಿರುವ ಫೋಟೋಗಳು ಎಲ್ಲರ ಮನ ಸೆಳೆದಿವೆ. ಕೃತಿ, ಹವ್ಯಾಸಿ ವಸ್ತ್ರ ವಿನ್ಯಾಸಗಾರ ಮನೀಶ್ ಮಲ್ಹೋತ್ರಾ ತಯಾರಿಸಿರುವ ಲೆಹೆಂಗಾ ಧರಿಸಿದ್ದಾರೆ.
ಈ ಲೆಹೆಂಗಾದಲ್ಲಿ ಚಿನ್ನದ ಕಸೂತಿ ಇದ್ದು, ಭಾರವಾದ ಜರಿಯನ್ನೊಳಗೊಂಡಿದೆ. ಈ ಡ್ರೆಸ್ಗೆ ಹೋಲಿಕೆಯಾಗುವಂತೆ, ಬಳೆ, ಹೂ, ಬಿಂದಿ, ಮೂಗುತಿ ಧರಿಸಿದ್ದು, ಅಭಿಮಾನಿಗಳ ಮನ ಸೆಳೆದಿದ್ದಾರೆ.
ಕೃತಿ ಸನೊನ್ ಅಭಿನಯದ ಬಾಡಿಗೆ ತಾಯ್ತನ ವಿಷಯಾಧಾರಿತ ಚಿತ್ರ ಮಿಮಿಯು ವ್ಯಾಪಕ ಮೆಚ್ಚುಗೆ ಪಡೆದಿದೆ. ಸದ್ಯ ಅವರು ಸೂಪರ್ ಸ್ಟಾರ್ ಅಕ್ಷಯ್ ಕುಮಾರ್ ಜೊತೆ ಔಟ್ ಅಂಡ್ ಔಟ್ ಆ್ಯಕ್ಷನ್ ಎಂಟರ್‌ಟೈನರ್‌ನಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಅಲ್ಲದೆ, ಪ್ರಭಾಸ್ ಅಭಿನಯದ ಆದಿಪುರುಷ ಚಿತ್ರದಲ್ಲಿ ಸೀತಾ ಪಾತ್ರ ನಿರ್ವಹಿಸಲಿದ್ದಾರೆ.