ಜಾಗತಿಕ ಐಕಾನ್ ಪ್ರಿಯಾಂಕಾ ಚೋಪ್ರಾ 2022ನ್ನು ಅದ್ದೂರಿಯಾಗಿ ಸ್ವಾಗತಿಸಲು ಸಿದ್ಧರಾಗಿದ್ದಾರೆ. ಈ ಸಂತೋಷದ ಕ್ಷಣಗಳನ್ನು ನಟಿ ಸಾಮಾಜಿಕ ಜಾಲಾತಾಣಗಳಲ್ಲಿ ಅವರು ಹಂಚಿಕೊಂಡಿದ್ದಾರೆ.
ಇನ್‌ಸ್ಟಾಗ್ರಾಮ್‌ನಲ್ಲಿ ಫೋಟೋ ಹಂಚಿಕೊಂಡಿರುವ ಪ್ರಿಯಾಂಕಾ, '2022ಕ್ಕೆ ಬರಲು ಸಿದ್ಧ' ಎಂದು ಬರೆದಿದ್ದಾರೆ. ಗುರುವಾರ ತನ್ನ ಲಾಸ್ ಏಂಜಲೀಸ್ ಮನೆಯಲ್ಲಿ ಜೋಕಾಲಿ ಮೇಲೆ ಕುಳಿತಿರುವ ಫೋಟೋವನ್ನು ಹಂಚಿಕೊಂಡಿದ್ದಾರೆ. ಗುಲಾಬಿ ಬಣ್ಣದ ಉಡುಪನ್ನು ಧರಿಸಿರುವ ಅವರು, ಅದಕ್ಕೆ ಹೊಂದಿಕೆಯಾಗುವ ಶೂ ಧರಿಸಿದ್ದಾರೆ.
ನಟಿ ಓಘೆನೆಕಾರೊ ಇಟೆನೆ ಅವರು ಪ್ರಿಯಾಂಕಾ ಅವರ ಪೋಸ್ಟ್‌ಗೆ ಕಾಮೆಂಟ್ ಮಾಡಿದ್ದಾರೆ. ಫೋಟೋ ಅದ್ಭುತವಾಗಿದೆ. ಹೊಸ ವರ್ಷದ ಶುಭಾಶಯಗಳು ಎಂದು ಹೇಳಿದ್ದಾರೆ.
ಇನ್ನು ಪ್ರಿಯಾಂಕ ಪತಿ ಯುಎಸ್ ಗಾಯಕ ನಿಕ್ ಜೋನಾಸ್ ಕ್ಯಾಲಿಫೋರ್ನಿಯಾದ ವೆಸ್ಟ್ ಹಾಲಿವುಡ್‌ನಲ್ಲಿರುವ ದಿ ವೈಪರ್ ರೂಮ್‌ನಲ್ಲಿ ತನ್ನ ಸಂಗೀತ ಕಚೇರಿಯಲ್ಲಿ ನಿರತರಾಗಿದ್ದರು. ಕಳೆದ ವಾರ, ಪ್ರಿಯಾಂಕಾ ಮತ್ತು ನಿಕ್ ಲಾಸ್ ಏಂಜಲೀಸ್‌ನಲ್ಲಿ ಒಟ್ಟಿಗೆ ಕ್ರಿಸ್ಮಸ್ ಆಚರಿಸಿಕೊಂಡಿದ್ದರು.
ಇದನ್ನೂ ಓದಿ: ತನ್ನ ಹೆಸರಿನ ಬದಲು 'ನಿಕ್ ಜೋನಾಸ್ ಪತ್ನಿ' ಎಂದು ಉಲ್ಲೇಖಿಸಿದ ವರದಿ ವಿರುದ್ಧ ಪ್ರಿಯಾಂಕಾ ಕಿಡಿ