ಹೈದರಾಬಾದ್: ದೇಶದಾದ್ಯಂತ ಇಂದು ಮಹಾಶಿವರಾತ್ರಿ ಹಬ್ಬವನ್ನು ಅತ್ಯಂತ ಸಡಗರದಿಂದ ಆಚರಿಸಲಾಗುತ್ತಿದೆ. ಬಾಲಿವುಡ್ ತಾರೆಯರೂ ಕೂಡ ಹಬ್ಬವನ್ನು ಸಂಭ್ರಮಿಸುತ್ತಿದ್ದು, ಅಭಿಮಾನಿಗಳಿಗೆ ಹಬ್ಬದ ಶುಭಾಶಯಗಳನ್ನು ತಿಳಿಸಿದ್ದಾರೆ.
ನಟರಾದ ಅಜಯ್ ದೇವಗನ್, ಸಂಜಯ್ ದತ್ ಶಿವನ ಪರಮ ಭಕ್ತರು. ಈ ಶುಭ ಸಂದರ್ಭದಲ್ಲಿ ಅಜಯ್ ದೇವಗನ್ ಅಭಿಮಾನಿಗಳಿಗೆ ಮಹಾಶಿವರಾತ್ರಿಯ ಶುಭಾಶಯಗಳನ್ನು ಕೋರಿದ್ದಾರೆ. ತಮ್ಮ ಇನ್‌ಸ್ಟಾಗ್ರಾಮ್‌ನಲ್ಲಿ ಭೋಲೆನಾಥ್ ಚಿತ್ರವನ್ನು ಹಂಚಿಕೊಂಡಿದ್ದಾರೆ.
ಟಿವಿಯ ಜನಪ್ರಿಯ ನಟಿ ಮೌನಿ ರಾಯ್ ಕೂಡ ಮಹಾಶಿವರಾತ್ರಿಯಂದು ತಮ್ಮ ಅಭಿಮಾನಿಗಳಿಗೆ ಶುಭಾಶಯಗಳನ್ನು ಕೋರಿದ್ದಾರೆ. ಮೌನಿ ರಾಯ್ ತಮ್ಮ ಇನ್‌ಸ್ಟಾದಲ್ಲಿ ಹಲವು ಚಿತ್ರಗಳನ್ನು ಹಂಚಿಕೊಂಡಿದ್ದಾರೆ. ನೀಲಿ ದಿರಿಸಿನಲ್ಲಿ ಮೌನಿ ಎಲ್ಲರನ್ನು ಬೆರಗುಗೊಳಿಸಿದ್ದಾರೆ.
- " class="align-text-top noRightClick twitterSection" data="
">
ನಟ ಕುನಾಲ್ ಖೇಮು 'ಹೇರತ್ ಮುಬಾರಕ್, ನಿಮಗೆಲ್ಲರಿಗೂ ಮಹಾಶಿವರಾತ್ರಿಯ ಶುಭಾಶಯಗಳು, ನಿಮಗೆ ಶಾಂತಿ, ಸಂತೋಷ, ಪ್ರೀತಿ ಮತ್ತು ಬೆಳಕನ್ನು ದೇವರು ಹಾರೈಸಲಿ. ಓಂ ನಾಮಃ ಶಿವಾಯ ಎಂದು ಸಾಮಾಜಿಕ ಜಾಲತಾಣದಲ್ಲಿ ಬರೆದಿದ್ದಾರೆ. ಬಾಲಿವುಡ್‌ನ ವಿವಾದಾತ್ಮಕ ನಟಿ ಕಂಗನಾ ರನಾವತ್ ಕೂಡ ತಮ್ಮ ಅಭಿಮಾನಿಗಳಿಗೆ ಹಬ್ಬದ ಶುಭಾಶಯ ತಿಳಿಸಿದ್ದಾರೆ.
ಇದನ್ನೂ ಓದಿ: ಶ್ರಿವರಾತ್ರಿ ಹಬ್ಬದ ನಿಮಿತ್ತ ಫ್ಯಾನ್ಸ್‌ಗೆ ಮೆಗಾಸ್ಟಾರ್ ಚಿರಂಜೀವಿ ಸಿಹಿ ಸುದ್ದಿ; 'ಭೋಲಾ ಶಂಕರ್' ಫಸ್ಟ್ ಲುಕ್ ಬಿಡುಗಡೆ