ETV Bharat / sitara

'ಫೈಂಡಿಂಗ್​ ಅನಾಮಿಕಾ' ಮೂಲಕ ಡಿಜಿಟಲ್​​ ಜಗತ್ತಿಗೆ ಎಂಟ್ರಿ ಕೊಟ್ಟ ಧಕ್ ​ಧಕ್​ ನಟಿ ಮಾಧುರಿ ದೀಕ್ಷಿತ್

author img

By

Published : Mar 4, 2021, 10:29 AM IST

ಬಾಲಿವುಡ್​ ಬೆಡಗಿ ಮಾಧುರಿ ದೀಕ್ಷಿತ್ 'ಫೈಂಡಿಂಗ್​​ ಅನಾಮಿಕಾ' ಎಂಬ ವೆಬ್​ ಸಿರೀಸ್​ನಲ್ಲಿ ನಟಿಸುತ್ತಿದ್ದಾರೆ. ಈ ಮೂಲಕ ಡಿಜಿಟಲ್​ ಜಗತ್ತಿಗೆ ಪದಾರ್ಪಣೆ ಮಾಡುತ್ತಿದ್ದಾರೆ. ಈ ಕುರಿತಂತೆ ತಮ್ಮ ಇನ್​ಸ್ಟಾಗ್ರಾಮ್​ ಖಾತೆಯಲ್ಲಿ ಫೋಟೋ ಶೇರ್ ಮಾಡಿ ಅಭಿಮಾನಿಗಳಿಗೆ ತಿಳಿಸಿದ್ದಾರೆ. ​

ಮಾಧುರಿ ದೀಕ್ಷಿತ್
Madhuri Dixit

ಬಾಲಿವುಡ್ ಧಕ್ ​ಧಕ್​ ನಟಿ ಮಾಧುರಿ ದೀಕ್ಷಿತ್ ಫೈಂಡಿಂಗ್​​ ಅನಾಮಿಕಾ ಎಂಬ ವೆಬ್​ ಸಿರೀಸ್​ನಲ್ಲಿ ನಟಿಸುತ್ತಿದ್ದು, ಅದರಲ್ಲಿ ಅವರು ಅಭಿನಯಿಸಿರುವ ಪಾತ್ರವನ್ನು ಅಭಿಮಾನಿಗಳಿಗೆ ಪರಿಚಯಿಸಿದ್ದಾರೆ.

ಫೈಂಡಿಂಗ್ ಅನಾಮಿಕಾ ಎಂಬ ಸೆನ್ಸೆಷನಲ್​ ಡ್ರಾಮಾ ವೆಬ್​ ಸರಣಿಯಲ್ಲಿ ಮಾಧುರಿ ದೀಕ್ಷಿತ್​ ನಟಿಸುವ ಮೂಲಕ ಡಿಜಿಟಲ್​ ಜಗತ್ತಿಗೆ ಪದಾರ್ಪಣೆ ಮಾಡುತ್ತಿದ್ದಾರೆ. ತಮ್ಮ ಇನ್​ಸ್ಟಾಗ್ರಾಮ್​ ಖಾತೆಯಲ್ಲಿ ಫೋಟೋ ಶೇರ್​ ಮಾಡುವ ಮೂಲಕ ತನ್ನ ಪಾತ್ರವನ್ನು ಅಭಿಮಾನಿಗಳಿಗೆ ಪರಿಚಯಿಸಿದ್ದಾರೆ. ಫೈಂಡಿಂಗ್ ಅನಾಮಿಕಾ ಸಿರೀಸ್ ಮೂಲಕ ನಾನು ನೆಟ್‌ಫ್ಲಿಕ್ಸ್​ನ ಒಂದು ಭಾಗವಾಗುತ್ತಿರುವುದು ಸಂತಸ ತಂದಿದೆ ಎಂದು ಬರೆದುಕೊಂಡಿದ್ದಾರೆ.

Madhuri Dixit
​ ನಟಿ ಮಾಧುರಿ ದೀಕ್ಷಿತ್

ಫೈಂಡಿಂಗ್ ಅನಾಮಿಕಾ ಕರಣ್ ಜೋಹರ್, ಅಪೂರ್ವಾ ಮೆಹ್ತಾ, ಸೊಮೆನ್ ಮಿಶ್ರಾ ಅವರು ಧರ್ಮಟಿಕ್ ಎಂಟರ್ಟೈನ್ಮೆಂಟ್ ಬ್ಯಾನರ್ ಅಡಿ ನಿರ್ಮಾಣಗೊಂಡಿದ್ದು, ಇದೊಂದು ಫ್ಯಾಮಿಲಿ ಡ್ರಾಮಾ ವೆಬ್​ ಸಿರೀಸ್​ ಆಗಿದೆ. ಇದರಲ್ಲಿ 53 ವರ್ಷದ ಮಾಧುರಿ ದೀಕ್ಷಿತ್​​ ಮನಮೋಹಕ ಅವತಾರದಲ್ಲಿ ಕಾಣಿಸಿಕೊಂಡಿದ್ದಾರೆ. ಈ ವೆಬ್​ ಸಿರೀಸ್​ ನೆಟ್‌ಫ್ಲಿಕ್ಸ್​ನಲ್ಲಿ ಪ್ರಸಾರವಾಗಲಿದೆ.

ಈ ವೆಬ್ ಸಿರೀಸ್​ನಲ್ಲಿ ಸಂಜಯ್ ಕಪೂರ್, ಮಾನವ್ ಕೌಲ್, ಲಕ್ಷ್ವೀರ್ ಸರನ್, ಸುಹಸಿನಿ ಮುಲೇ, ಮತ್ತು ಮುಸ್ಕನ್ ಜಾಫೆರಿ, ಕರಿಷ್ಮಾ ಕೊಹ್ಲಿ, ಬೆಜಾಯ್ ನಂಬಿಯಾರ್ ಮೊದಲಾದವರು ಅಭಿನಯಿಸಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.