ಬಾಲಿವುಡ್ ನಟಿ ಜಾಹ್ನವಿ ಕಪೂರ್ ಸೋಷಿಯಲ್ ಮೀಡಿಯಾದಲ್ಲಿ ಆ್ಯಕ್ಟಿವ್ ಇದ್ದು ಆಗ್ಗಾಗ್ಗೆ ತಮ್ಮ ಫೋಟೋ, ವಿಡಿಯೋಗಳನ್ನು ಹಂಚಿಕೊಳ್ಳುತ್ತಿರುತ್ತಾರೆ. ಇತ್ತೀಚೆಗೆ ಜಾಹ್ನವಿ ತಾವು ಡ್ಯಾನ್ಸ್ ಮಾಡುತ್ತಿರುವ ವಿಡಿಯೋವೊಂದನ್ನು ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದು ಈ ವಿಡಿಯೋದಲ್ಲಿ ಜಾಹ್ನವಿ ಹಿಂದೆ ಕುಳಿತಿರುವ ತಂಗಿ ಖುಷಿ ಕಪೂರ್, ಅಕ್ಕನನ್ನು ಕಣ್ಣೆತ್ತಿ ಕೂಡಾ ನೋಡದೆ ತಮ್ಮ ಪಾಡಿಗೆ ವಿಡಿಯೋ ನೋಡುವಲ್ಲಿ ನಿರತರಾಗಿದ್ದಾರೆ.
- " class="align-text-top noRightClick twitterSection" data="
">
'ಶುಭ ಮಂಗಳ್ ಸಾವ್ಧಾನ್' ಚಿತ್ರದ ಹಾಡೊಂದಕ್ಕೆ ಜಾಹ್ನವಿ ಕಪೂರ್ ಡ್ಯಾನ್ಸ್ ಮಾಡುತ್ತಿರುವ ವಿಡಿಯೋ ಇದು. ಹಸಿರು ಬಣ್ಣದ ಡ್ರೆಸ್ ಧರಿಸಿರುವ ಜಾಹ್ನವಿ ಕಪೂರ್ ಹಾಡಿಗೆ ತಕ್ಕಂತೆ ಹೆಜ್ಜೆ ಹಾಕುತ್ತಿದ್ದರೆ ಹಿಂದೆಯೇ ಸೋಫಾದಲ್ಲಿ ಕುಳಿತಿರುವ ತಂಗಿ ಖುಷಿ ಕಪೂರ್ ಒಮ್ಮೆಯೂ ಅಕ್ಕನ ಕಡೆ ತಿರುಗಿ ನೋಡದೆ ತಮ್ಮ ಪಾಡಿಗೆ ತಾವು ಮೊಬೈಲ್ ನೋಡುತ್ತಾ ಕುಳಿತಿದ್ದಾರೆ. ಈ ವಿಡಿಯೋವನ್ನು ತಮ್ಮ ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿರುವ ಜಾಹ್ನವಿ ಕಪೂರ್ 'ನನ್ನ ತಂಗಿಗಿಂತ ನೀವೇ ಈ ವಿಡಿಯೋವನ್ನು ಎಂಜಾಯ್ ಮಾಡಿದ್ದೀರೆಂದು ನಂಬಿರುವುದಾಗಿ' ಪೋಸ್ಟ್ ಹಾಕಿಕೊಂಡಿದ್ದಾರೆ.
ಜಾಹ್ನವಿ ಸಿನಿಮಾ ವಿಚಾರಕ್ಕೆ ಬರುವುದಾದರೆ, ರಾಜ್ಕುಮಾರ್ ರಾವ್ ಜೊತೆ 'ರೂಹಿ ಅಫ್ಜಾನ' ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಕೊಲಿನ್ ಡಿ ಚುನ್ಹ ನಿರ್ದೇಶನದ 'ದೋಸ್ತಾನ 2' ಚಿತ್ರದಲ್ಲಿ ಕಾರ್ತಿಕ್ ಆರ್ಯನ್ ಜೊತೆ ಕೂಡಾ ಜಾಹ್ನವಿ ಕಪೂರ್ ನಟಿಸುತ್ತಿದ್ದಾರೆ.