ಹೈದರಾಬಾದ್: ಬಾಲಿವುಡ್ ತಾರೆಗಳಾದ ದೀಪಿಕಾ ಪಡುಕೋಣೆ ಮತ್ತು ಹೃತಿಕ್ ರೋಷನ್ ಜೋಡಿಯನ್ನು ತೆರೆಯ ಮೇಲೆ ನೋಡಬೇಕೆಂದು ಅಭಿಮಾನಿಗಳು ಎಷ್ಟೋ ವರ್ಷದಿಂದ ಕಾಯುತ್ತಿದ್ದಾರೆ. ಫ್ಯಾನ್ಸ್ ಉತ್ಸುಕತೆಗೆ ಇದೀಗ ದೀಪಿಕಾರ ಟ್ವೀಟ್ ಪುಷ್ಠಿ ನೀಡಿದೆ.
ಜನವರಿ 5 ರಂದು ಪಡುಕೋಣೆ ತಮ್ಮ 35ನೇ ಜನ್ಮದಿನವನ್ನು ಆಚರಿಸಿಕೊಂಡಿದ್ದಾರೆ. ಇವರ ಹುಟ್ಟುಹಬ್ಬಕ್ಕೆ ಸೆಲೆಬ್ರಿಟಿಗಳಿಂದ ಶುಭಾಶಯಗಳ ಮಹಾಪೂರವೇ ಹರಿದುಬಂದಿತ್ತು. ಆದರೆ ಹೃತಿಕ್ ರೋಷನ್ ಮಾಡಿದ ವಿಶ್ಗೆ ದೀಪಿಕಾ ಪ್ರತಿಕ್ರಿಯೆ ಮಾತ್ರ ಎಲ್ಲರ ಗಮನ ಸೆಳೆದಿದೆ.
-
Thank You so much HR!❤️
— Deepika Padukone (@deepikapadukone) January 7, 2021 " class="align-text-top noRightClick twitterSection" data="
Now for another big celebration coming up in a couple of days...!🍰🍾🥂@iHrithik https://t.co/oD2belXkVi
">Thank You so much HR!❤️
— Deepika Padukone (@deepikapadukone) January 7, 2021
Now for another big celebration coming up in a couple of days...!🍰🍾🥂@iHrithik https://t.co/oD2belXkViThank You so much HR!❤️
— Deepika Padukone (@deepikapadukone) January 7, 2021
Now for another big celebration coming up in a couple of days...!🍰🍾🥂@iHrithik https://t.co/oD2belXkVi
ಇದನ್ನೂ ಓದಿ: ‘What a great teaser’ ಎಂದು ಯಶ್ಗೆ ಬರ್ತ್ಡೇ ವಿಶ್ ಕೋರಿದ ಹೃತಿಕ್!
"ನನ್ನ ಪ್ರೀತಿಯ ದೀಪಿಕಾ ಪಡುಕೋಣೆಗೆ ಜನ್ಮದಿನದ ಶುಭಾಶಯಗಳು. ನಿಮ್ಮಂತೆಯೇ ಜಗತ್ತನ್ನು ಬೆಳಗಿಸಿ ಮತ್ತು ಬೆರಗುಗೊಳಿಸಿ. ಯಾವಾಗಲೂ ನನ್ನ ಕಡೆಯಿಂದ ಬೆಸ್ಟ್ ವಿಶ್ ಇರುವುದು" ಎಂದು ಕ್ರಿಶ್ ನಟ ಟ್ವೀಟ್ ಮಾಡಿದ್ದರು. ಇದಕ್ಕೆ ದೀಪಿಕಾ, "ತುಂಬಾ ಧನ್ಯವಾದಗಳು.. ಕೆಲ ದಿನಗಳಲ್ಲೇ ಮತ್ತೊಂದು ದೊಡ್ಡ ಆಚರಣೆಯಿದೆ" ಎಂದು ರಿಟ್ವೀಟ್ ಮಾಡಿರುವುದು ಶೀಘ್ರದಲ್ಲೇ ಇಬ್ಬರೂ ಸ್ಕ್ರೀನ್ ಶೇರ್ ಮಾಡುವ ಸಿಹಿ ಸುದ್ದಿ ನೀಡುತ್ತಾರೆಂದು ಅಭಿಮಾನಿಗಳು ನಿರೀಕ್ಷೆ ಇಟ್ಟುಕೊಂಡಿದ್ದಾರೆ.
ಆದರೆ ಜನವರಿ 10 ರಂದು ಹೃತಿಕ್ ರೋಷನ್ ಹುಟ್ಟುಹಬ್ಬವಾಗಿದ್ದು, ಈ ದೃಷ್ಟಿಯಲ್ಲಿ ದೀಪಿಕಾ 'ಕೆಲ ದಿನಗಳಲ್ಲೇ ಮತ್ತೊಂದು ದೊಡ್ಡ ಆಚರಣೆಯಿದೆ' ಎಂದು ಕೂಡ ಹೇಳಿರಬಹುದು.