ಹೈದರಾಬಾದ್ : ಬಾಲಿವುಡ್ ನಟ ಅರ್ಜುನ್ ಕಪೂರ್ ಮತ್ತು ಅವರ ಸಹೋದರಿ ಜಾಹ್ನವಿ ಕಪೂರ್ ಇತ್ತೀಚಿಗೆ ಮ್ಯಾಗ್ಜಿನ್ವೊಂದರ ಕವರ್ ಫೋಟೋದಲ್ಲಿ ಒಟ್ಟಿಗೆ ಕಾಣಿಸಿಕೊಂಡು ಅಭಿಮಾನಿಗಳಿಗೆ ಖುಷಿ ನೀಡಿದ್ರು. ಇದೀಗ ಇವರಿಬ್ಬರ ಬಗ್ಗೆ ಯಾರಿಗೂ ತಿಳಿದಿರದ ಕೆಲವು ಇಂಟರೆಸ್ಟಿಂಗ್ ಸುದ್ದಿಗಳನ್ನೊಳಗೊಂಡ ವಿಡಿಯೋವೊಂದನ್ನು ಶೇರ್ ಮಾಡಿ ಅಭಿಮಾನಿಗಳಿಗೆ ಮತ್ತಷ್ಟು ಖುಷಿ ನೀಡಿದ್ದಾರೆ.
- " class="align-text-top noRightClick twitterSection" data="
">
ಮಂಗಳವಾರ, ಅರ್ಜುನ್ ಒಂದು ವಿಡಿಯೋವನ್ನು ಹಂಚಿಕೊಂಡಿದ್ದಾರೆ, ಇದರಲ್ಲಿ ಅವರು ಜಾಹ್ನವಿಯೊಂದಿಗೆ ಕಾಣಿಸಿಕೊಂಡಿದ್ದು, ಅಲ್ಲಿ ಇಬ್ಬರಿಗೂ ಪರಸ್ಪರ ಪ್ರಶ್ನೆಗಳನ್ನು ಕೇಳಿಕೊಂಡಿದ್ದಾರೆ. ಅವರ ನೆಚ್ಚಿನ ಬಣ್ಣದಿಂದ ಹಿಡಿದು ಇಬ್ಬರಲ್ಲಿ ಯಾರು ಹೆಚ್ಚು ಕಿರಿಕಿರಿ ಉಂಟುಮಾಡುತ್ತಾರೆ ಎಂಬುದರವರೆಗೆ ಕೆಲವು ಮೋಜಿನ ಪ್ರಶ್ನೆ ಹಾಗೂ ಉತ್ತರಗಳನ್ನು ನೀಡಿದ್ದಾರೆ.
- " class="align-text-top noRightClick twitterSection" data="
">
ಜಾಹ್ನವಿಯ ವಿಚಿತ್ರ ಅಭ್ಯಾಸವೊಂದನ್ನು ಹೇಳಿ ಎಂಬ ಪ್ರಶ್ನೆಗೆ ಉತ್ತರಿಸಿದ ಅಣ್ಣ ಅರ್ಜುನ್ " ಸೂಟ್‌ಕೇಸ್ ಮತ್ತು ಶವರ್ ಇದ್ದರೆ ಸಾಕು, ಅವಳು ಪ್ರಪಂಚದಲ್ಲಿ ಎಲ್ಲಿಯಾದರೂ ತಿರುಗಾಡುತ್ತಾಳೆ ಎಂದು ಹೇಳಿದ್ದಾರೆ. ಇದು ತುಂಬಾ ವಿಚಿತ್ರವಾದ ಅವಳ ಬಗ್ಗೆ ಯಾರಿಗೂ ತಿಳಿದಿರದ ವಿಷಯ, ಜಾಹ್ನವಿ" ಆಪ್ಕೆ ಘರ್ ಬಾತ್ರೂಮ್ ಹೈ? " ಮೇ ಆ ರಾಹಿ ಹುನ್ ಶವರ್ ಕರ್ನೆ, ' ಎಂದು ಕೇಳುತ್ತಾಳೆ ಎಂದಿದ್ದಾರೆ ಅರ್ಜುನ್.
ಇಬ್ಬರಲ್ಲಿ "ಬಾಸ್ಸಿ" ಅಥವಾ ಮಾಲೀಕನ ರೀತಿ ವರ್ತಿಸುವವರು ಎಂದು ಕೇಳಿದಾಗ, ಜಾಹ್ನವಿ "ಖಚಿತವಾಗಿ ಅರ್ಜುನ್ ಭಯ್ಯಾ" ಎಂದು ಉತ್ತರಿಸಿದ್ದಾರೆ. ಇದಕ್ಕೆ ಅರ್ಜುನ್ ಇಲ್ಲ ಎನ್ನುವ ರೀತಿ ಎಕ್ಸ್ಪ್ರೆಶನ್ ಕೊಟ್ಟಾಗ, ನಾನು ನನ್ನ ಜೀವನದಲ್ಲಿ ಯಾರೊಂದಿಗೆ ಬಾಸ್ ತರ ವರ್ತಿಸಿದ್ದೀನಿ? ಅಜೀಂ ಜೀ ಮತ್ತು ಮಹೇಶ್ ಜೀ(ಜಾಹ್ನವಿಯ ಸಿಬ್ಬಂದಿ) ಜೊತೆ ಕೂಡ ಇಲ್ಲ ಎಂದಿದ್ದಾರೆ. ನಂತರ ಇದನ್ನು ಒಪ್ಪಿದ ಅರ್ಜುನ್ ,ಹೌದು ಮೂವರು ಸಹೋದರಿಯರಿಗೆ ನಾನೆ ಬಾಸ್ ಎಂದಿದ್ದಾರೆ. ಕೊನೆಯಲ್ಲಿ ಸಹೋದರಿ ಅನ್ಷುಲಾಗೆ ನಾವಿಬ್ಬರೂ ಬಾಸ್ ಎಂದು ಒಪ್ಪಿಕೊಂಡಿದ್ದಾರೆ ಈ ಸ್ಟಾರ್ ಅಣ್ಣ-ತಂಗಿ.