ಲಾಸ್ ಏಂಜಲೀಸ್( ಅಮೆರಿಕ): ಕ್ಯಾಲಿಫೋರ್ನಿಯಾ ಕರಾವಳಿಯ ನೆಲೆಯಿಂದ ಏಳು ಸಣ್ಣ ಉಪಗ್ರಹಗಳನ್ನು ಹೊತ್ತು ವರ್ಜಿನ್ ಆರ್ಬಿಟ್ನ ರಾಕೆಟ್ ಬಾಹ್ಯಾಕಾಶಕ್ಕೆ ನೆಗೆಯಿತು. ಈ ಮೂಲಕ ಕಂಪನಿ 2022 ವರ್ಷವನ್ನು ಆರಂಭಿಸಿದೆ.
ವರ್ಜಿ ಆರ್ಬಿಟ್ನ ಸುಧಾರಿತ ಬೋಯಿಂಗ್ 747 ರಾಕೆಟ್ ದಕ್ಷಿಣ ಕ್ಯಾಲಿಫೋರ್ನಿಯಾ ಮರಭೂಮಿಯಲ್ಲಿರುವ ಮೊಜೇವ್ ಬಾಹ್ಯಾಕಾಶ ನಿಲ್ದಾಣದಿಂದ ಲಾಂಚರ್ ಒನ್ ರಾಕೆಟ್ ಪೆಸಿಫಿಕ್ ಸಾಗರ ಮೇಲಿಂದ ಉಡ್ಡಯನಗೊಂಡಿದೆ. ವರ್ಜಿನ್ ಆರ್ಬಿಟ್ ಉಡ್ಡಯನದ ಬಗ್ಗೆ ಟ್ವೀಟ್ ಮಾಡಿದ್ದು, ನಮ್ಮ ಗ್ರಾಹಕರಿಗೆ ಧನ್ಯವಾದ.. ಬಾಹ್ಯಾಕಾಶಕ್ಕೆ ನಿಮಗೆಲ್ಲ ಸ್ವಾಗತ ಎಂದು ಕಂಪನಿ ಶುಭ ಕೋರಿದೆ.
ಗ್ರಾಹಕರಿಗಾಗಿ ವರ್ಜಿನ್ ಆರ್ಬಿಟ್ ಉಪಗ್ರಹಗಳನ್ನು ನಭಕ್ಕೆ ಕಳುಹಿಸುತ್ತಿರುವುದು ಇದು ಮೂರನೇ ಬಾರಿಯಾಗಿದೆ. ಇದಕ್ಕಿಂತ ಮುಂಚಿತವಾಗಿ ವರ್ಜಿನ್ 2021ರ ಜನವರಿ ಮತ್ತು ಜುಲೈನಲ್ಲಿ ಬಹು ಉಪಗ್ರಹಗಳನ್ನ ಏಕಕಾಲಕ್ಕೆ ನಭೋಮಂಡಲಕ್ಕೆ ರವಾನಿಸಿತ್ತು. ಈ ಮೊದಲು ಕಂಪನಿ ಡೆಮೋನ್ಸ್ಟ್ರೇಷನ್ ಫ್ಲೈಟ್ ಉಡ್ಡಯನ ಮಾಡಿ ಪರೀಕ್ಷೆ ಮಾಡಿತ್ತು. ಆದರೆ, ಈ ಯೋಜನೆ ಫೇಲ್ ಆಗಿತ್ತು.
ಬ್ರಿಟನ್ನ ಬಿಲೆನಿಯರ್ ರಿಚರ್ಡ್ ಬ್ರಾನ್ಸನ್ 2007 ರಲ್ಲಿ ವರ್ಜಿನ್ ಆರ್ಬಿಟ್ ಸಂಸ್ಥೆಯನ್ನು ಹುಟ್ಟು ಹಾಕಿದ್ದರು. ಈ ಕಂಪನಿ ಸಣ್ಣ ಉಪಗ್ರಹಗಳನ್ನ ಹಾರಿಸುವ ಉದ್ದೇಶ ಮತ್ತು ಗುರಿಯನ್ನು ಹೊಂದಿದೆ. ವರ್ಜಿನ್ ವಾಣೀಜ್ಯ ಬಳಕೆ ಉಪಗ್ರಹಗಳನ್ನ ಬಾಹ್ಯಾಕಾಶಕ್ಕೆ ಕಳುಹಿಸುವ ಕೆಲಸ ಮಾಡುತ್ತಿದೆ.
ಇದನ್ನು ಓದಿ:ಗಗನಯಾನ್ಗೆ ಸಿದ್ಧತೆ, ಕ್ರಯೋಜನಿಕ್ ಎಂಜಿನ್ ಅರ್ಹತಾ ಪರೀಕ್ಷೆ ಯಶಸ್ವಿ: ಇಸ್ರೋ