ಬೆಂಗಳೂರು: ಚಂದ್ರನ ಶಿವಶಕ್ತಿ ಪಾಯಿಂಟ್ ಸುತ್ತಲೂ ಅಧ್ಯಯನ ಆರಂಭಿಸಿರುವ ಪ್ರಜ್ಞಾನ್ ರೋವರ್ ದೊಡ್ಡ ಕುಳಿಯನ್ನು ಗುರುತಿಸಿದೆ. 8 ಮೀಟರ್ ದೂರದ ಸಂಚಾರದಲ್ಲಿ ಮಾರ್ಗ ಮಧ್ಯೆ ಕುಳಿಯೊಂದು ಬಂದಿದ್ದು, ನೇರವಾಗಿ ಚಲಿಸುವ ಬದಲು ಅಲ್ಲಿಂದ ಪಕ್ಕಕ್ಕೆ ಸರಿದು ಪ್ರಯೋಗ ಮುಂದುವರಿಸಿದೆ. ಶಶಿಯ ಈ ಕುಳಿ 3x4 ವ್ಯಾಸ ಹೊಂದಿದೆ ಎಂದು ಇಸ್ರೋ ತಿಳಿಸಿದೆ. ಆಗಸ್ಟ್ 27 ರಂದು ರೋವರ್ ಈ ಕುಳಿಯ ಸಮೀಪ ಸಾಗಿದೆ. ಬಳಿಕ ಹೊಸ ಮಾರ್ಗವನ್ನು ಆಯ್ದುಕೊಂಡು ಸುರಕ್ಷಿತವಾಗಿ ಮುಂದೆ ಸಾಗುತ್ತಿದೆ ಎಂದು ವಿಜ್ಞಾನಿಗಳು ಮಾಹಿತಿ ನೀಡಿದ್ದಾರೆ.
ರೋವರ್ ಸಾಗಿರುವ ಹಾದಿಯಲ್ಲಿ ಮೂಡಿರುವ ಗುರುತು ಮತ್ತು ದೊಡ್ಡ ಕುಳಿಯನ್ನು ಅದರಲ್ಲಿರುವ ನ್ಯಾವಿಗೇಷನ್ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಅದರ ಎರಡು ಚಿತ್ರಗಳನ್ನು ಇಸ್ರೋ ಸಾಮಾಜಿಕ ಮಾಧ್ಯಮವಾದ ಎಕ್ಸ್ನಲ್ಲಿ (ಹಿಂದಿನ ಟ್ವಿಟರ್) ಹಂಚಿಕೊಂಡಿದೆ.
-
Chandrayaan-3 Mission:
— ISRO (@isro) August 28, 2023 " class="align-text-top noRightClick twitterSection" data="
On August 27, 2023, the Rover came across a 4-meter diameter crater positioned 3 meters ahead of its location.
The Rover was commanded to retrace the path.
It's now safely heading on a new path.#Chandrayaan_3#Ch3 pic.twitter.com/QfOmqDYvSF
">Chandrayaan-3 Mission:
— ISRO (@isro) August 28, 2023
On August 27, 2023, the Rover came across a 4-meter diameter crater positioned 3 meters ahead of its location.
The Rover was commanded to retrace the path.
It's now safely heading on a new path.#Chandrayaan_3#Ch3 pic.twitter.com/QfOmqDYvSFChandrayaan-3 Mission:
— ISRO (@isro) August 28, 2023
On August 27, 2023, the Rover came across a 4-meter diameter crater positioned 3 meters ahead of its location.
The Rover was commanded to retrace the path.
It's now safely heading on a new path.#Chandrayaan_3#Ch3 pic.twitter.com/QfOmqDYvSF
ತಾಪಮಾನ ಅಳೆದ ರೋವರ್: ನಿನ್ನೆ(ಆಗಸ್ಟ್ 27) ಯಷ್ಟೇ ಚಂದ್ರನ ಮೇಲ್ಮೈ ಮತ್ತು ಮಣ್ಣಿನ ಆಳದಲ್ಲಿನ ತಾಪಮಾನವನ್ನು ಅಳೆದು ಭೂಮಿಗೆ ರವಾನಿಸಿತ್ತು. ಚಂದ್ರನ ಮಣ್ಣಿನ 10 ಸೆಂ.ಮೀ ಆಳದಲ್ಲಿ -10 ಡಿಗ್ರಿ ಸೆಲ್ಸಿಯಸ್ ತಾಪ ಇದೆ ಎಂದು ಗುಣಿಸಿ ಹೇಳಿತ್ತು. ಈ ಮೂಲಕ ಚಂದ್ರಯಾನ-3 ಯೋಜನೆಯ ಮೂರನೇ ಉದ್ದೇಶವೂ ಸಫಲತೆ ಕಂಡಿತ್ತು.
ಆಗಸ್ಟ್ 23 ರಂದು ಲ್ಯಾಂಡರ್ ಚಂದ್ರನ ಮೇಲೆ ಇಳಿದು ಮೊದಲ ಉದ್ದೇಶ ಪೂರ್ಣಗೊಂಡಿತ್ತು. ಬಳಿಕ ಅದರಲ್ಲಿನ ಪ್ರಜ್ಞಾನ್ ರೋವರ್ ಸಂಚಾರ ಆರಂಭಿಸಿ ಎರಡನೇ ಉದ್ದೇಶವೂ ಸಾಕಾರವಾಗಿತ್ತು. ಮೂರನೇ ಮತ್ತು ಮುಖ್ಯ ಉದ್ದೇಶವಾದ ಅಲ್ಲಿನ ವಾತಾವರಣ ಅಧ್ಯಯನದ ಬಗ್ಗೆಯೂ ರೋವರ್ ಕೆಲಸ ಮಾಡಿ, ವಿಜ್ಞಾನಿಗಳು ಅಂದುಕೊಂಡಂತೆ ಎಲ್ಲ ಕಾರ್ಯಗಳನ್ನೂ ಪೂರೈಸುತ್ತಿದೆ.
ಚಂದ್ರನ ಮೇಲ್ಮೈಯ 10 ಸೆಂಟಿ ಮೀಟರ್ ಆಳದಲ್ಲಿ ತಾಪಮಾನ ಏರಿಳಿತಗಳನ್ನು ತಿಳಿಸುವ ಗ್ರಾಫ್ ಅನ್ನು ಇಸ್ರೋ ಹಂಚಿಕೊಂಡಿದೆ. 'ChaSTE' ಎಂಬ ಪೆಲೋಡ್ (ಚಂದ್ರನ ಮೇಲ್ಮೈ ಥರ್ಮೋಫಿಸಿಕಲ್ ಅಧ್ಯಯನ) ಪ್ರಯೋಗ ನಡೆಸಿದ್ದು, ಧ್ರುವದಲ್ಲಿ ಚಂದ್ರನ ಮೇಲ್ಮಣ್ಣಿನ ತಾಪಮಾನವನ್ನು ಅಳೆದಿದೆ. ಇದರಿಂದಾಗಿ ಭೂಮಿಗಿಂತಲೂ ಚಂದ್ರಲೋಕ ಹೆಚ್ಚಿನ ಉಷ್ಣ ಹೊಂದಿದೆ ಎಂದು ಇಸ್ರೋ ವಿಜ್ಞಾನಿಗಳು ಹೇಳಿದ್ದಾರೆ.
ಪ್ರಧಾನಿ ಮೋದಿ ಘೋಷಣೆ: ಚಂದ್ರಯಾನ ಯೋಜನೆ ಯಶಸ್ವಿಯಾದ ಬಳಿಕ ಇಸ್ರೋ ವಿಜ್ಞಾನಿಗಳನ್ನು ಭೇಟಿ ಮಾಡಿ ಅಭಿನಂದಿಸಿದ ಪ್ರಧಾನಿ ಮೋದಿ ಅವರು, ಲ್ಯಾಂಡರ್ ಇಳಿದ ಪ್ರದೇಶಕ್ಕೆ ಶಿವಶಕ್ತಿ ಪಾಯಿಂಟ್ ಎಂದು ಹೆಸರು ಸೂಚಿಸಿದ್ದರು. ಅಲ್ಲದೇ, ಆಗಸ್ಟ್ 23 ಅನ್ನು ರಾಷ್ಟ್ರೀಯ ಬಾಹ್ಯಾಕಾಶ ದಿನವೆಂದು, 2019 ರಲ್ಲಿ ಕೈಗೊಂಡಿದ್ದ ಚಂದ್ರಯಾನ -2 ಯೋಜನೆಯ ನೌಕೆ ಪತನವಾದ ಸ್ಥಳಕ್ಕೆ ತಿರಂಗಾ ಎಂದು ಘೋಷಿಸಿದ್ದಾರೆ. ಇದಕ್ಕೆ ವಿಜ್ಞಾನಿಗಳೂ ಬೆಂಬಲ ನೀಡಿದ್ದಾರೆ.
ಇದನ್ನೂ ಓದಿ: ಇಸ್ರೋ ಮಹತ್ವದ ಘೋಷಣೆ: ಸೂರ್ಯನ ಅಧ್ಯಯನಕ್ಕೆ ಬಾಹ್ಯಾಕಾಶದಲ್ಲಿ ಆದಿತ್ಯ-L1 ವೀಕ್ಷಣಾಲಯ; ಸೆ.2ರಂದು ಉಡ್ಡಯನ