ಸ್ಯಾನ್ ಫ್ರಾನ್ಸಿಸ್ಕೋ: ಒಟಿಟಿ ಪ್ಲಾರ್ಟ್ಫಾರ್ಮ್ ನೆಟ್ಫ್ಲಿಕ್ಸ್ ತನ್ನ ಚಂದಾದಾರರಿಗೆ ಆಕ್ಸೆನ್ಫ್ರೀ ಗೇಮ್ ಅನ್ನು ಉಚಿತವಾಗಿ ನೀಡಿದೆ. 6 ವರ್ಷಗಳಿಂದ ಹಿಂದೆ ಪರಿಚಯಿಸಲಾದ ಈ ಗೇಮ್ 5 ವರ್ಷಗಳ ಬಳಿಕ ಮೊಬೈಲ್ ಬಳಕೆದಾರರಿಗೂ ಉಚಿತವಾಗಿ ಲಭ್ಯವಾಗಿದೆ.
ನೆಟ್ಫ್ಲಿಕ್ಸ್ ಬಳಕೆದಾರರು ಹೊಸದಾದ ಅಪ್ಲಿಕೇಶನ್ ಡೌನ್ಲೋಡ್ ಮಾಡಿಕೊಂಡಲ್ಲಿ ಆಕ್ಸೆನ್ಫ್ರೀ ಗೇಮ್ ಉಚಿತವಾಗಿ ಸಿಗಲಿದೆ. ಬಳಕೆದಾರರು ಈಗ 30 ಕ್ಕೂ ಹೆಚ್ಚು ಭಾಷೆಗಳಲ್ಲಿ ಜನಪ್ರಿಯ ಗೇಮ್ ಅನ್ನು ಆಡಬಹುದಾಗಿದೆ.
ಜನಪ್ರಿಯ ಆಟವನ್ನು ನೆಟ್ಫ್ಲಿಕ್ಸ್ನ ಗೇಮ್ಗಳ ಕ್ಯಾಟಲಾಗ್ಗೆ ಸೇರಿಸಲಾಗಿದೆ. ಕಳೆದ ವರ್ಷ ಆಕ್ಸೆನ್ಫ್ರೀ ಡೆವಲಪರ್ ನೈಟ್ ಸ್ಕೂಲ್ ಸ್ಟುಡಿಯೊವನ್ನು ನೆಟ್ಫ್ಲಿಕ್ಸ್ ತನ್ನ ಸ್ವಾಧೀನಕ್ಕೆ ಪಡೆದುಕೊಂಡಿತ್ತು.