ETV Bharat / science-and-technology

ನೈಸರ್ಗಿಕ ಇಂಧನ ವಿಮಾನ ತಯಾರಿಕೆ: ಬೋಯಿಂಗ್​ ಜೊತೆ ನಾಸಾ ಒಪ್ಪಂದ - ಬಾಹ್ಯಾಕಾಶ ಕಾಯಿದೆ ಒಪ್ಪಂದ

ನೈಸರ್ಗಿಕ ಇಂಧನ ಬಳಕೆ ವಿಮಾನಗಳು - ನೈಸರ್ಗಿಕ ಇಂಧನ ವಿಮಾನ ತಯಾರಿಕೆ - ಬೋಯಿಂಗ್​ ಜೊತೆ ನಾಸಾ ಒಪ್ಪಂದ - ನೈಸರ್ಗಿಕ ಇಂಧನ ಆಧಾರಿತ ವಿಮಾನಗಳು

nasa-boeing
ಬೋಯಿಂಗ್​ ಜೊತೆ ನಾಸಾ ಒಪ್ಪಂದ
author img

By

Published : Jan 19, 2023, 7:45 PM IST

ಸ್ಯಾನ್ ಫ್ರಾನ್ಸಿಸ್ಕೋ( ಅಮೆರಿಕ): ಮಂಗಳ, ಸೂರ್ಯನ ಕಕ್ಷೆಗಳಿಗೆ ತನ್ನ ಉಪಗ್ರಹಗಳನ್ನು ಕಳುಹಿಸಿ ಬಾಹ್ಯಾಕಾಶ ಕ್ಷೇತ್ರದಲ್ಲಿ ಅಪ್ರತಿಮ ಸಾಧನೆ ಮಾಡಿರುವ ನಾಸಾ ಇಂಧನ ಆಧಾರಿತ ವಿಮಾನಗಳ ಸಾಮರ್ಥ್ಯವನ್ನು ಹೆಚ್ಚಿಸಲು ಯುದ್ಧ ವಿಮಾನ ತಯಾರಿಕಾ ಕಂಪನಿಯಾದ ಬೋಯಿಂಗ್​ ಜೊತೆ ಕೈಜೋಡಿಸಿದೆ. ನೈಸರ್ಗಿಕ ಇಂಧನ ಆಧಾರಿತ ವಿಮಾನಗಳನ್ನು ತಯಾರಿಸುವಲ್ಲಿ ಉಭಯ ಸಂಸ್ಥೆಗಳು ಒಪ್ಪಂದ ಮಾಡಿಕೊಂಡಿವೆ.

ಈ ಬಗ್ಗೆ ಮಾಹಿತಿ ನೀಡಿರುವ ಬೋಯಿಂಗ್​ ವಿಮಾನಸಂಸ್ಥೆ, ಬಾಹ್ಯಾಕಾಶ ಕಾಯಿದೆ ಒಪ್ಪಂದದ ಅಡಿ ಪೂರ್ಣ ಪ್ರಮಾಣದ ನೈಸರ್ಗಿಕ ಇಂಧನ ಚಾಲಿತ ವಿಮಾನವನ್ನು ರೂಪಿಸಲು, ಪರೀಕ್ಷಿಸಲು, ಹಾರಲು ಮತ್ತು ಇಂಗಾಲ ಹೊರಸೂಸುವಿಕೆ ಕಡಿಮೆ ಮಾಡುವ ತಂತ್ರಜ್ಞಾನವನ್ನು ಅಳವಡಿಸಿಕೊಳ್ಳುವ ನಿಟ್ಟಿನಲ್ಲಿ ನಾಸಾದೊಂದಿಗೆ ಮುಂದುವರಿಯಲಾಗುವುದು ಎಂದು ಬೋಯಿಂಗ್​ ತಿಳಿಸಿದೆ.

ಮುಂದಿನ ಏಳು ವರ್ಷಗಳಲ್ಲಿ ನಾಸಾ 425 ಮಿಲಿಯನ್ ಅಮೆರಿಕನ್​ ಡಾಲರ್​ ಹೂಡಿಕೆ ಮಾಡುತ್ತದೆ. ಕಂಪನಿ ಮತ್ತು ಅದರ ಪಾಲುದಾರರ ಒಪ್ಪಂದದ ನಿಧಿಯನ್ನು 725 ಮಿಲಿಯನ್ ಡಾಲರ್​ ಎಂದು ಅಂದಾಜಿಸಲಾಗಿದೆ. ಒಪ್ಪಂದದ ಭಾಗವಾಗಿ ನಾಸಾ ಮತ್ತು ಬೋಯಿಂಗ್​ ಪರಸ್ಪರ ತಾಂತ್ರಿಕ ನೆರವು ಮತ್ತು ಸೌಲಭ್ಯಗಳನ್ನು ಹಂಚಿಕೊಳ್ಳಲಿವೆ. ಬೋಯಿಂಗ್‌ ಸಂಸ್ಥೆಯೊಂದಿಗೆ ಪೂರ್ಣ ಪ್ರಮಾಣದ ಮತ್ತು ನೈಸರ್ಗಿಕ ಇಂಧನ ಚಾಲಿತ ವಿಮಾನಗಳ ತಯಾರಿಕೆ, ಪರೀಕ್ಷೆ ನಡೆಸಲಾಗುವುದು. ನಾಸಾದ ಪಾಲುದಾರಿಕೆಯು ಭವಿಷ್ಯದ ವಾಣಿಜ್ಯ ವಿಮಾನಯಾನಗಳಿಗೆ ಹೆಚ್ಚು ಇಂಧನ ದಕ್ಷತೆಯನ್ನು ನೀಡುತ್ತದೆ. ವಾಣಿಜ್ಯ ಮತ್ತು ಸಾರ್ವಜನಿಕರ ವಿಮಾಗಳಿಗೂ ಇದು ನೆರವು ನೀಡಲಿದೆ ಎಂದು ನಾಸಾದ ನಿರ್ವಾಹಕರಾದ ಬಿಲ್ ನೆಲ್ಸನ್ ಅಭಿಪ್ರಾಯಪಟ್ಟಿದ್ದಾರೆ.

ನಾವು ಇದರಲ್ಲಿ ಯಶಸ್ವಿಯಾದರೆ, 2030 ರ ವೇಳೆಗೆ ಪ್ರಯಾಣಿಕ ವಿಮಾನದಲ್ಲೂ ಈ ತಂತ್ರಜ್ಞಾನವನ್ನು ಅಳವಡಿಸಲಾಗುವುದು. ಇದನ್ನು 2020 ರಲ್ಲೇ ಮುಗಿಸುವ ಯೋಜನೆ ರೂಪಿಸಲಾಗಿತ್ತು. ಆದರೆ, ಕಾರಣಾಂತಗಳಿಂದ ಇದು ಮುಂದೂಡಲಾಗಿತ್ತು. ನೈಸರ್ಗಿಕ ಇಂಧನ ಯೋಜನೆಯು ಬೋಯಿಂಗ್ ಮತ್ತು ಅದರ ಪಾಲುದಾರ ಉದ್ಯಮಗಳಿಗೆ ಪೂರ್ಣ ಪ್ರಮಾಣದ ಟ್ರಾನ್ಸಾನಿಕ್ ಟ್ರಸ್ ಬ್ರೇಸ್ಡ್ ವಿಂಗ್ ಡೆಮಾನ್‌ಸ್ಟ್ರೇಟರ್ ವಿಮಾನಗಳನ್ನು ಅಭಿವೃದ್ಧಿಪಡಿಸಲು ನಾಸಾ ಪಾಲುದಾರಿಕೆ ನೀಡಲಾಗುವುದು ಎಂದು ಬಾಹ್ಯಾಕಾಶ ಸಂಸ್ಥೆ ಹೇಳಿದೆ.

ಟ್ರಾನ್ಸಾನಿಕ್ ಟ್ರಸ್ ಬ್ರೇಸ್ಡ್ ವಿಂಗ್ ಪರಿಕಲ್ಪನೆಯು ಉದ್ದ, ತೆಳ್ಳಗಿನ ರೆಕ್ಕೆಗಳನ್ನು ಹೊಂದಿರುವ ವಿಮಾನವನ್ನು ರೂಪುಗೊಳಿಸುವುದಾಗಿದೆ. ಈ ವಿನ್ಯಾಸವು ಈಗಿನ ವಿಮಾನಗಳಿಗಿಂತ ಹೆಚ್ಚು ದಕ್ಷ ಮತ್ತು ಕಡಿಮೆ ಇಂಧನ ಬಳಕೆಯಿಂದ ಕೂಡಿರುತ್ತದೆ. ಇವುಗಳ ವಿನ್ಯಾಸದಿಂದಲೇ ಇಂಧನ ಸುಡುವಿಕೆ ಕಡಿತಗೊಳ್ಳುತ್ತದೆ. ಈಗಿರುವ ವಿಮಾನಗಳಿಗಿಂತ ಇವುಗಳು ಶೇಕಡಾ 30 ರಷ್ಟು ಇಂಧನ ಕಡಿಮೆ ಸುಡುವಿಕೆ ಹೊಂದಲಿವೆ ಎಂದು ನಾಸಾ ಹೇಳಿದೆ.

ಓದಿ: ಭೂಮಿಯಂತಿರುವ ಎಕ್ಸೋಪ್ಲಾನೆಟ್​ ಕಂಡು ಹಿಡಿದ ನಾಸಾದ ವೆಬ್ ದೂರದರ್ಶಕ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.