ETV Bharat / science-and-technology

ಅತ್ಯಂತ ದುರ್ಬಲ ಬ್ರೌಸರ್ ಕ್ರೋಮ್.. ಒಪೆರಾ ಬೆಸ್ಟ್​

ಮೊಜಿಲ್ಲಾದ ಫೈರ್‌ಫಾಕ್ಸ್ ಬ್ರೌಸರ್ ದೋಷಗಳಲ್ಲಿ ಎರಡನೇ ಸ್ಥಾನದಲ್ಲಿದೆ. ಇದರಲ್ಲಿ 117 ದೋಷಗಳು ಕಂಡು ಬಂದಿವೆ. ಮೈಕ್ರೋಸಾಫ್ಟ್ ಎಡ್ಜ್ ಅಕ್ಟೋಬರ್ 5 ರ ಹೊತ್ತಿಗೆ 103 ದೋಷಗಳನ್ನು ಹೊಂದಿತ್ತು. ಇದು 2021 ರ ಸಂಪೂರ್ಣ ವರ್ಷಕ್ಕಿಂತ 61 ಪ್ರತಿಶತ ಹೆಚ್ಚು. ಒಟ್ಟಾರೆಯಾಗಿ, ಇದು ಬಿಡುಗಡೆಯಾದಾಗಿನಿಂದ 806 ದೋಷಗಳನ್ನು ಹೊಂದಿದೆ.

ಅತ್ಯಂತ ದುರ್ಬಲ ಬ್ರೌಸರ್ ಕ್ರೋಮ್: ಒಪೆರಾ ಬೆಸ್ಟ್​
google-chrome-most-vulnerable-browser-in-2022-report
author img

By

Published : Oct 6, 2022, 5:31 PM IST

ಸ್ಯಾನ್ ಫ್ರಾನ್ಸಿಸ್ಕೋ: 2022 ರಲ್ಲಿ 303 ದೋಷಗಳು ಮತ್ತು ಒಟ್ಟಾರೆ 3,159 ದೋಷಗಳೊಂದಿಗೆ ಗೂಗಲ್ ಕ್ರೋಮ್ ಸದ್ಯ ಬಳಕೆಯಲ್ಲಿರುವ ಅತ್ಯಂತ ದುರ್ಬಲ ಬ್ರೌಸರ್ ಎಂದು ಹೊಸ ವರದಿ ಹೇಳಿದೆ. ಅಟ್ಲಾಸ್ ವಿಪಿಎನ್​​ನ ವರದಿಯ ಪ್ರಕಾರ, ಈ ಅಂಕಿ-ಅಂಶಗಳು ಜನವರಿ 1, 2022 ರಿಂದ ಅಕ್ಟೋಬರ್ 5, 2022 ರವರೆಗಿನ VulDB ದೋಷದ ಡೇಟಾಬೇಸ್‌ ಡೇಟಾವನ್ನು ಆಧರಿಸಿವೆ.

ಅಕ್ಟೋಬರ್‌ನಲ್ಲಿ ಐದು ದಿನಗಳಲ್ಲಿ ಹೊಸ ದೋಷಗಳು ಪತ್ತೆಯಾಗಿರುವ ಏಕೈಕ ಬ್ರೌಸರ್ Google Chrome ಆಗಿದೆ. ಇತ್ತೀಚಿನ ದುರ್ಬಲತೆಗಳೆಂದರೆ: CVE-2022-3318, CVE-2022-3314, CVE-2022-3311, CVE-2022-3309, ಮತ್ತು CVE-2022-3307.

CVE ಪ್ರೋಗ್ರಾಂ ಅನೇಕ ಪ್ಲಾಟ್‌ಫಾರ್ಮ್‌ಗಳಲ್ಲಿ ಭದ್ರತಾ ನ್ಯೂನತೆಗಳು ಮತ್ತು ದೋಷಗಳನ್ನು ಟ್ರ್ಯಾಕ್ ಮಾಡುತ್ತದೆ. ಆದರೆ, ಇದು ಈ ನ್ಯೂನತೆಗಳ ವಿವರಗಳನ್ನು ಇನ್ನೂ ಪಟ್ಟಿ ಮಾಡಿಲ್ಲ. ಈ ಭದ್ರತಾ ನ್ಯೂನತೆಗಳು ಕಂಪ್ಯೂಟರ್‌ನಲ್ಲಿ ಮೆಮೊರಿ ಹಾಳಾಗಲು ಕಾರಣವಾಗಬಹುದು ಎಂದು ವರದಿ ಹೇಳಿದೆ. ಬಳಕೆದಾರರು Google Chrome ಆವೃತ್ತಿ 106.0.5249.61 ಗೆ ನವೀಕರಿಸುವ ಮೂಲಕ ಇವುಗಳನ್ನು ಸರಿಪಡಿಸಬಹುದು.

ಮೊಜಿಲ್ಲಾದ ಫೈರ್‌ಫಾಕ್ಸ್ ಬ್ರೌಸರ್ ದೋಷಗಳಲ್ಲಿ ಎರಡನೇ ಸ್ಥಾನದಲ್ಲಿದೆ. ಇದರಲ್ಲಿ 117 ದೋಷಗಳು ಕಂಡುಬಂದಿವೆ. ಮೈಕ್ರೋಸಾಫ್ಟ್ ಎಡ್ಜ್ ಅಕ್ಟೋಬರ್ 5 ರ ಹೊತ್ತಿಗೆ 103 ದೋಷಗಳನ್ನು ಹೊಂದಿತ್ತು. ಇದು 2021 ರ ಸಂಪೂರ್ಣ ವರ್ಷಕ್ಕಿಂತ 61 ಪ್ರತಿಶತ ಹೆಚ್ಚು. ಒಟ್ಟಾರೆಯಾಗಿ, ಇದು ಬಿಡುಗಡೆಯಾದಾಗಿನಿಂದ 806 ದೋಷಗಳನ್ನು ಹೊಂದಿದೆ. ಇನ್ನು ಸಫಾರಿ ಬ್ರೌಸರ್​ ಬಗ್ಗೆ ನೋಡುವುದಾದರೆ, ಇದು ಒಂದಿಷ್ಟು ಕಡಿಮೆ ಪ್ರಮಾಣದ ದೋಷಗಳನ್ನು ಹೊಂದಿದೆ. ಉದಾಹರಣೆಗೆ, 2022 ರ ಮೊದಲ ಮೂರು ತ್ರೈಮಾಸಿಕಗಳಲ್ಲಿ ಇದು 26 ದೋಷಗಳನ್ನು ಹೊಂದಿತ್ತು ಮತ್ತು ನಂತರ ಒಟ್ಟಾರೆ ದೋಷಗಳ ಸಂಖ್ಯೆ 1,139 ಎಂದು ವರದಿ ಹೇಳಿದೆ.

ಏತನ್ಮಧ್ಯೆ, Opera ಬ್ರೌಸರ್ 2022 ರಲ್ಲಿ ಇಲ್ಲಿಯವರೆಗೆ ಯಾವುದೇ ದಾಖಲಿತ ದೋಷಗಳನ್ನು ಹೊಂದಿಲ್ಲ ಮತ್ತು ಒಟ್ಟು 344 ದೋಷಗಳನ್ನು ಮಾತ್ರ ಹೊಂದಿದೆ. ಮೇ 2022 ರ ಹೊತ್ತಿಗೆ, ಸಫಾರಿ ಒಂದು ಬಿಲಿಯನ್ ಬಳಕೆದಾರರನ್ನು ತಲುಪಿದೆ ಮತ್ತು ಆಪಲ್ ತನ್ನ ಬ್ರೌಸರ್ ಸುರಕ್ಷಿತವಾಗಿದೆ ಮತ್ತು ಬಳಸಲು ಸುರಕ್ಷಿತವಾಗಿದೆ ಎಂದು ಖಚಿತಪಡಿಸಿಕೊಳ್ಳಲು ಶ್ರಮಿಸುತ್ತಿದೆ.

ಇದನ್ನೂ ಓದಿ: 'Incognito' ಮೋಡ್‌ನಲ್ಲಿ ಬ್ರೌಸ್ ಮಾಡಿದ್ರೂ ಮಾಹಿತಿ ಸಂಗ್ರಹಿಸುತ್ತಾ ಗೂಗಲ್ ಕ್ರೋಮ್?

ETV Bharat Logo

Copyright © 2024 Ushodaya Enterprises Pvt. Ltd., All Rights Reserved.