ಬರ್ಲಿನ್(ಜರ್ಮನಿ): ಫ್ರಾನ್ಸ್ ಮತ್ತು ಜರ್ಮನಿಗಳು ಖಾಸಗಿ ನೆಟ್‌ವರ್ಕ್‌ಗಳ 5ಜಿ ಅಪ್ಲಿಕೇಷನ್ಗಳಿಗೆ ಸಂಬಂಧಿಸಿದಂತೆ ನಾಲ್ಕು ಯೋಜನೆಗಳಿಗೆ ಪರಸ್ಪರ ಸಹಕಾರ ನೀಡಲಿವೆ. ಇದರಿಂದಾಗಿ ಸುಮಾರು 20.1 ಮಿಲಿಯನ್ ಅಮೆರಿಕನ್ ಡಾಲರ್ನಷ್ಟು ಹಣವನ್ನು ವ್ಯಯಿಸಲಾಗುತ್ತದೆ ಎಂದು ಎರಡೂ ರಾಷ್ಟ್ರಗಳ ಆರ್ಥಿಕ ವ್ಯವಹಾರಗಳ ಇಲಾಖೆ ಮಾಹಿತಿ ನೀಡಿದೆ.
5ಜಿ ದೂರಸಂಪರ್ಕ ಕ್ಷೇತ್ರದಲ್ಲಿ ಯೂರೋಪಿನ ಖಾಸಗಿ ನೆಟ್‌ವರ್ಕ್‌ಗಳ ಬಲಪಡಿಸಲು ಹೊಸ ಸಂಶೋಧನೆಗಳನ್ನು ನಡೆಸಲು ಎರಡೂ ರಾಷ್ಟ್ರಗಳು ಬೆಂಬಲ ನೀಡುತ್ತವೆ ಎಂದು ಅಧಿಕೃತ ಹೇಳಿಕೆ ನೀಡಲಾಗಿದೆ.
ಜರ್ಮನಿ ಮತ್ತು ಫ್ರಾನ್ಸ್ ಎರಡೂ ರಾಷ್ಟ್ರಗಳ ನಡುವೆ ಬಲವಾದ ಸಹಕಾರಕ್ಕೆ ಎದುರು ನೋಡುತ್ತಿದ್ದೇವೆ ಎಂದು ಜರ್ಮನಿಯ ಆರ್ಥಿಕ ವ್ಯವಹಾರಗಳ ಸಚಿವ ರಾಬರ್ಟ್ ಹೆಬೆಕ್ ಹೇಳಿದ್ದಾರೆ. 2020ರಲ್ಲೇ ಫ್ರಾನ್ಸ್ ಮತ್ತು ಜರ್ಮನಿ ಎರಡೂ ರಾಷ್ಟ್ರಗಳು 5ಜಿ ಅಪ್ಲಿಕೇಷನ್ಗಳಿಗೆ ಸಂಬಂಧಿಸಿದಂತೆ ಸಹಕಾರ ನೀಡಲು ಒಪ್ಪಂದ ಮಾಡಿಕೊಂಡಿದ್ದವು. ಇದರ ನಂತರ 2021ರ ಆರಂಭದಲ್ಲಿ ಕೆಲವೊಂದು ಯೋಜನೆಗಳನ್ನು ಅನಾವರಣಗಳಿಸಲಾಗಿತ್ತು ಎಂದು ಕ್ಸಿನುವಾ ನ್ಯೂಸ್ ಏಜೆನ್ಸಿ ವರದಿ ಮಾಡಿದೆ.
ನಿಮ್ಮ ಸೂಕ್ತ ಸಂಗಾತಿ ಹುಡುಕುತ್ತಿರುವಿರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ ನೋಂದಣಿ ಉಚಿತ
ಈಗ ಉದ್ದೇಶಿಸಲಾಗಿರುವ ನಾಲ್ಕು ಯೋಜನೆಗಳಲ್ಲಿ 16 ಮಂದಿ ಜರ್ಮನ್ನರು ಮತ್ತು 14 ಮಂದಿ ಫ್ರೆಂಚರು ಇರಲಿದ್ದು, ನಾಲ್ಕನೇ ಕೈಗಾರಿಕಾ ಕ್ರಾಂತಿಗೆ (ಇಂಡಸ್ಟ್ರಿ 4.0) ಯಾವ ರೀತಿ 5ಜಿ ತಂತ್ರಜ್ಞಾನ ಬಳಸಿಕೊಳ್ಳಬಹುದು ಎಂಬ ಬಗ್ಗೆ ಸಂಶೋಧನೆಗಳನ್ನು ನಡೆಸಲಾಗುತ್ತದೆ ಎಂದು ಸರ್ಕಾರದ ಹೇಳಿಕೆಯಲ್ಲಿ ಉಲ್ಲೇಖಿಸಲಾಗಿದೆ.
ಇದನ್ನೂ ಓದಿ: 6ಜಿ ಸಂಶೋಧನೆಗಾಗಿ ಔಲು ವಿಶ್ವವಿದ್ಯಾಲಯದೊಂದಿಗೆ ಜಿಯೋ ಒಪ್ಪಂದ