ನವದೆಹಲಿ: ಅಂತಾರಾಷ್ಟ್ರೀಯ ಹಣಕಾಸು ನಿಧಿ (IMF) ಭಾರತದ ಆರ್ಥಿಕತೆಯನ್ನು ಭವಿಷ್ಯದ ಆಶಾಕಿರಣ ಎಂದು ಕರೆದಿದೆ. ಇಡೀ ವಿಶ್ವವೇ ಆರ್ಥಿಕ ಕತ್ತಲೆಯತ್ತ ಸಾಗುತ್ತಿರುವಾಗ, ಕತ್ತಲಲ್ಲಿ ಬೆಳಕು ಗೋಚರಿಸಿದಂತೆ ಭಾರತದ ಆರ್ಥಕತೆ ವಿಶ್ವದ ಹಾಗೂ ಭವಿಷ್ಯದ ಆಶಾಕಿರಣವಾಗಿ ಕಂಗೊಳಿಸುತ್ತಿದೆ. ಈ ನಡುವೆ ಭಾರತ ಎಚ್ಚರಿಕೆಯ ಹೆಜ್ಜೆಯನ್ನು ಇರಿಸಬೇಕಾಗಿದೆ. ಈಗ ಭಾರತದ ಮುಂದೆ ಹೆಚ್ಚಿನ ಸವಾಲುಗಳಿವೆ.
ಸತ್ಯ ಏನೆಂದರೆ ಪಿಎಂ ಮೋದಿ ಮತ್ತು ಅವರ ತಂಡವು ಜಾಗತಿಕ ಸಾಂಕ್ರಾಮಿಕದ ನಂತರ ಕೈಗೊಂಡ ಆರ್ಥಿಕ ಚಟುವಟಿಕೆಗಳು ಫಲ ನೀಡಿವೆ. ಎಚ್ಚರಿಕೆಯ ಹಣಕಾಸಿನ ನಿರ್ಧಾರಗಳನ್ನು ಕೈಗೊಂಡು ದೇಶ ಕೋವಿಡ್ ನಂತರ ಎಡವಿ ಬೀಳದಂತೆ ನೋಡಿಕೊಂಡಿದ್ದಾರೆ. ಮೋದಿ ಹಾಗೂ ಅವರ ತಂಡ ಆರ್ಥಿಕತೆಗೆ ಚೇತರಿಕೆ ನೀಡುವಲ್ಲಿ ಯಶಸ್ವಿಯಾಗಿದ್ದು, ವಿಶ್ವಕ್ಕೆ ಮಾದರಿಯಾಗಿದೆ.
ಇತ್ತೀಚಿಗೆ ಬಿಡುಗಡೆಯಾದ ಭಾರತದ GDP ಅಂಕಿ- ಅಂಶಗಳು ದೇಶದ ಆರ್ಥಿಕ ಸ್ಥಿರತೆ ಹಾಗೂ ಬೆಳವಣಿಗೆಯನ್ನು ಸೂಚಿಸುವಂತಿದೆ. ಸ್ವತಃ ಆರ್ಬಿಐ 7 ಹಾಗೂ ಅದಕ್ಕಿಂತ ಕಡಿಮೆ ಅಂದಾಜು ಮಾಡಿತ್ತು. ಆದರೆ ದೇಶದ ಜಿಡಿಪಿ ನಿರೀಕ್ಷೆಯನ್ನು ಮೀರಿ 7.2ಕ್ಕೆ ಏರಿಕೆ ಕಂಡಿದೆ. ಈ ಮೂಲಕ ಭಾರತ ವೇಗವಾಗಿ ಬೆಳೆಯುತ್ತಿರುವ ಉದಯೋನ್ಮುಖ ಆರ್ಥಿಕತೆಗಳಲ್ಲಿ ಒಂದಾಗಿದೆ.
ಮತ್ತೊಂದು ಕಡೆ ಕೋವಿಡ್ನ ಮೂಲವಾಗಿರುವ ಚೀನಾ, ಕೋವಿಡ್ ನಂತರ ಮೊದಲಿನ ಆರ್ಥಿಕ ಚೇತರಿಕೆ ಕಾಣುವಲ್ಲಿ ಮುಗ್ಗರಿಸಿದೆ. ಆದರೂ ಚೀನಾ ಜಿಡಿಪಿ ಬೆಳವಣಿಗೆ ಆಶಾದಾಯಕವಾಗಿಯೇ ಇದೆ. ಏಕೆಂದರೆ ಅಮೆರಿಕ, ಯುರೋಪ್ ರಾಷ್ಟ್ರಗಳಿಗೆ ಹೋಲಿಸಿದರೆ ಇದು ಉತ್ತಮ ಎಂಬಂತೆ ಬಿಂಬಿತವಾಗಿದೆ.
ಇನ್ನು ಭಾರತವು ತನ್ನ ಪ್ರತಿಸ್ಪರ್ಧಿಗಳಿಗೆ ಹೋಲಿಸಿದರೆ ವೇಗವಾಗಿ ಬೆಳೆಯಲು ಸಿದ್ಧವಾಗಿದೆ. ಆ ವಿಶ್ವಾಸವನ್ನು ತನ್ನ ಅಂಕಿ- ಅಂಶಗಳಿಂದಲೇ ನಿರೂಪಿಸಿದೆ. US ಹಣಕಾಸು ಸೇವಾ ಸಂಸ್ಥೆಯಾದ ಮೋರ್ಗಾನ್ ಸ್ಟಾನ್ಲಿ ಈ ಸಂಬಂಧ ಸಮಗ್ರ ವರದಿಯನ್ನ ಬಿಡುಗಡೆ ಮಾಡಿದೆ. 'ಭಾರತವು ಒಂದು ದಶಕಕ್ಕಿಂತ ಕಡಿಮೆ ಅವಧಿಯಲ್ಲಿ ಹೇಗೆ ರೂಪಾಂತರಗೊಂಡಿದೆ' ಎಂಬುದನ್ನು ತನ್ನ ವರದಿಯಲ್ಲಿ ತೋರಿಸಿದೆ. ಭಾರತೀಯ ಆರ್ಥಿಕತೆಯ ಸೂಕ್ಷ್ಮ ವಿಶ್ಲೇಷಣೆ ಮಾಡಿ, ಈ ಅಂಶವನ್ನು ನಿರೂಪಿಸಿದೆ. ಭವಿಷ್ಯದಲ್ಲಿ ಭಾರತವು ಅತ್ಯುತ್ತಮವಾಗಿ ಕಾರ್ಯನಿರ್ವಹಿಸುವ ಸಾಮರ್ಥ್ಯವನ್ನು ಬೆಳಸಿಕೊಂಡಿದೆ ಎಂಬುದನ್ನು ತನ್ನ ವರದಿಯಲ್ಲಿ ಒತ್ತಿ ಹೇಳಿದೆ.
ಅಭೂತಪೂರ್ವ ಆದಾಯ ಸಂಗ್ರಹಣೆ ಮತ್ತು ವಿವೇಚನಾಶೀಲ ಖರ್ಚು, ರಫ್ತು ಮತ್ತು ವಿದೇಶಿ ನೇರ ಹೂಡಿಕೆಯಲ್ಲಿ (ಎಫ್‌ಡಿಐ) ದಾಖಲೆಯ ಏರಿಕೆಗಳಿಂದಾಗಿ ಆರ್ಥಿಕತೆ ಸದೃಢವಾಗಿ ಮುಂದುವರೆದಿದೆ. ಇನ್ನು ಸರಿ ಸಾಟಿಯಿಲ್ಲದ ಮೂಲ-ಅಭಿವೃದ್ಧಿ ವೇಗವನ್ನು ಸಾಧಿಸುವುದರಿಂದ ಹಣದುಬ್ಬರ ಸೂಚ್ಯಂಕಗಳಲ್ಲಿನ ನಿರಂತರ ಇಳಿಕೆಯೂ ಭಾರತದ ಆರ್ಥಿಕತೆ ಹಳಿ ತಪ್ಪದಂತೆ ನೋಡಿಕೊಳ್ಳಲಾಗಿದೆ. ಭಾರತವು ಈಗ ತನ್ನ ಪ್ರತಿಯೊಂದು ನಿಖರವಾದ ಮಾಪನಾಂಕ ನಿರ್ಣಯದ ಪ್ರಯೋಜನಗಳನ್ನು ಪಡೆಯುತ್ತಿದೆ ಮೋರ್ಗನ್ ಸ್ಟಾನ್ಲಿ ತನ್ನ ವರದಿಯಲ್ಲಿ ಹೇಳಿದೆ.
ಮೋರ್ಗನ್ ಸ್ಟಾನ್ಲಿ ಬಣ್ಣನೆ ಹೀಗಿದೆ: ಮೋರ್ಗನ್ ಸ್ಟಾನ್ಲಿ ತನ್ನ ಶೀರ್ಷಿಕೆಯಲ್ಲಿ ' ಇಂದಿನ ಭಾರತವು 2013 ರಲ್ಲಿದ್ದಕ್ಕಿಂತ ಭಿನ್ನವಾಗಿದೆ' ಎಂದು ಬರೆದುಕೊಂಡಿದೆ. ಭಾರತ ಇಂದು ಇರುವ ಸ್ಥಿತಿಗೆ ತಲುಪಲು ಇತರರು ಮಾಡದ ಕೆಲಸವನ್ನು ಏನು ಮಾಡಿದೆ? 'ಅತ್ಯಂತ ವೇಗವಾಗಿ ಬೆಳೆಯುತ್ತಿರುವ ವಿಶ್ವದ ಐದು ಆರ್ಥಿಕತೆಗಳಲ್ಲಿ ಭಾರತ ಒಂದು' ಎಂಬ ಶಿರೋನಾಮೆಗಳಿಂದ ಭಾರತದ ಆರ್ಥಿಕತೆಯನ್ನು ಬಣ್ಣಿಸಿದೆ.
ಅತ್ಯಂತ ಸರಳವಾದ ಉತ್ತರವೆಂದರೆ ಬಹುತೇಕ ಎಲ್ಲವೂ ದೀರ್ಘಕಾಲೀನ ಆರ್ಥಿಕ ಗುರಿಗಳ ಕಾರ್ಯತಂತ್ರದಿಂದ ಸುಧಾರಣಾ ಕ್ರಮಗಳನ್ನು ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸುವವರೆಗೆ ಭಾರತ ಕಟ್ಟುನಿಟ್ಟಿನ ಕ್ರಮಗಳನ್ನು ಕೈಗೊಂಡು ಅನುಷ್ಠಾನ ಮಾಡಿದೆ. ಅತ್ಯುತ್ತಮ ಫಲಿತಾಂಶಗಳಿಗಾಗಿ ಹಲವಾರು ಚೌಕಟ್ಟುಗಳ ಹಾಕಿಕೊಂಡಿದ್ದು, ಎಲ್ಲ ನಿರ್ಧಾರಗಳನ್ನು ಸಂಪೂರ್ಣ ಕೂಲಂಕುಷ ಪರೀಕ್ಷೆಗೆ ಒಳಪಡಿಸಿದೆ. ಭಾರತೀಯ ಆರ್ಥಿಕತೆಯ ಹಿಂದಿನ ಮಿದುಳುಗಳು ವೈಯಕ್ತಿಕ ಆಕಾಂಕ್ಷೆಗಳು ಮತ್ತು ರಾಷ್ಟ್ರದ ಪ್ರಗತಿ ಎರಡನ್ನೂ ಯಶಸ್ವಿಯಾಗಿ ಜಾರಿಗೆ ತರುವಲ್ಲಿ ಸಫಲವಾಗಿದೆ ಎಂದು ಮೋರ್ಗನ್ ಸ್ಟ್ಯಾನ್ಲಿ ತನ್ನ ವರದಿಯಲ್ಲಿ ಉಲ್ಲೇಖಿಸಿದೆ.
ಚರಣ್ ಸಿಂಗ್ ಹೇಳುವುದಿಷ್ಟು: ಸ್ವತಂತ್ರ, ಉನ್ನತ-ಗುಣಮಟ್ಟದ ಸಂಶೋಧನೆಯಲ್ಲಿ ತೊಡಗಿರುವ ಲಾಭರಹಿತ, ಬಹು-ಶಿಸ್ತಿನ ಸಾರ್ವಜನಿಕ ನೀತಿ ಸಂಸ್ಥೆಯಾದ EGROW ಫೌಂಡೇಶನ್‌ನ ಸಹವರ್ತಿ ಚರಣ್ ಸಿಂಗ್ ಮಾತನಾಡಿ, "ನೀವು ಭಾರತದ ವಾರ್ಷಿಕ ಅಂಕಿ - ಅಂಶಗಳನ್ನು ನೋಡಿದರೆ, ನಾವು ಶೇಕಡಾ 7.2 ರಷ್ಟು ಬೆಳೆದಿದ್ದೇವೆ. ಆರ್ಬಿಐ ಶೇಕಡಾ 6.8 ರಷ್ಟು ಜಿಡಿಪಿ ಬೆಳವಣಿಗೆಯನ್ನು ನಿರೀಕ್ಷೆ ಮಾಡಿತ್ತು. ನಾವು ಮತ್ತೊಮ್ಮೆ ನಮ್ಮದೇ ಪ್ರೊಜೆಕ್ಷನ್ ಅನ್ನು ಮೀರಿದ್ದೇವೆ. ಅದು ತುಂಬಾ ಧನಾತ್ಮಕ ಸಂಗತಿಯಾಗಿದೆ. ನಾವು ರಫ್ತುಗಳಲ್ಲಿ ಉತ್ತಮ ಬೆಳವಣಿಗೆ ಕಂಡಿದ್ದೇವೆ. ಆದರೆ, ನಾವು ಉತ್ತಮವಾಗಿ ಮಾಡಿದ ಪ್ರಮುಖ ವಿಷಯವೆಂದರೆ ಒಟ್ಟು ಸ್ಥಿರ ಬಂಡವಾಳ ರಚನೆ" ಆಗಿದೆ ಎಂದು ಅವರು ಬಣ್ಣಿಸಿದ್ದಾರೆ.
'ಮಾಮ್-ಅಂಡ್-ಪಾಪ್' ಮಳಿಗೆಗಳನ್ನು ಸರ್ಕಾರದ ವ್ಯಾಪ್ತಿಗೆ ತರುವುದರಿಂದ, ಆರ್ಥಿಕತೆಯ ಔಪಚಾರಿಕತೆಯ ಯಶಸ್ಸಿನ ಪ್ರಯತ್ನಗಳಿಗೆ ಅನುಗುಣವಾಗಿ, ಮೋದಿ ಸರ್ಕಾರವು ದೇಶದ ತೆರಿಗೆ ಮೂಲವನ್ನು ವಿಸ್ತರಿಸುವ ಗುರಿಯನ್ನು ಹೊಂದಿದೆ ಮತ್ತು ಜನರು ಕೆಳಮಟ್ಟದ ಆರ್ಥಿಕ ಏಣಿಯು ಮೇಲ್ಮುಖವಾಗಿ ಆರ್ಥಿಕ ಚಲನೆಗೆ ಸಾಕಷ್ಟು ಅವಕಾಶಗಳನ್ನು ಪಡೆಯಿತು.
ಇಂಟರ್‌ನ್ಯಾಶನಲ್ ಕಾರ್ಪೊರೇಟ್ ಸಿಸ್ಟಮ್ಸ್‌ನ ಇಂಟಿಗ್ರೇಟೆಡ್ ಫೈನಾನ್ಷಿಯಲ್ ಓಮ್ನಿಬಸ್ ಮೆಟ್ರಿಕ್ಸ್ ರಿಸರ್ಚ್‌ನ ಅರ್ಥಶಾಸ್ತ್ರಜ್ಞ ಮನೋರಂಜನ್ ಶರ್ಮಾ ಮಾತನಾಡಿ, " ಮೋರ್ಗನ್ ಸ್ಟಾನ್ಲಿ ವರದಿ, ಪೂರೈಕೆ - ಆರ್ಥಿಕ ಸುಧಾರಣೆಗಳಂತಹ ಕೆಲವು ಪ್ರಮುಖ ಅಂಶಗಳನ್ನು ಎತ್ತಿ ತೋರಿಸಿದೆ. ಸುಮಾರು 26 ಪ್ರತಿಶತದಷ್ಟು ಮಟ್ಟಕ್ಕೆ ಬೆಳೆದಿರುವ ಕಾರ್ಪೊರೇಟ್ ತೆರಿಗೆಗಳು, ಆರ್ಥಿಕತೆಯ ಔಪಚಾರಿಕೀಕರಣ, ಜಿಎಸ್ಟಿ ಸಂಗ್ರಹಣೆ ಸ್ಥಿರತೆ, ಪ್ರತಿ ತಿಂಗಳು 1.5 ಲಕ್ಷ ರೂಪಾಯಿಗಳ ವರೆಗಿನ ಜಿಎಸ್ಟಿ ಸಂಗ್ರಹ ಹಾಗೂ ರಿಯಲ್ ಎಸ್ಟೇಟ್ ಗಮನಾರ್ಹ ಬದಲಾವಣೆಗಳಿಂದ ದೇಶದ ಆರ್ಥಿಕತೆ ಸ್ಥಿರತೆಯನ್ನು ಕಾಪಾಡಿಕೊಂಡು ಹೋಗಲು ನೆರವಾಗಿದೆ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.
ಇದನ್ನು ಓದಿ: 500 ರೂ ನೋಟುಗಳನ್ನ ವಾಪಸ್ ಪಡೆಯುವ ಮಾತೇ ಇಲ್ಲ..1000 ರೂ ನೋಟುಗಳ ಜಾರಿಯೂ ಇಲ್ಲ: ಆರ್ಬಿಐ