ಬೆಂಗಳೂರು: ಲಾಕ್ಡೌನ್ ಹಿನ್ನೆಲೆ ಪೊಲೀಸರು ವಾಹನ ತಪಾಸಣೆ ಮಾಡುವಾಗ ಅತಿ ವೇಗವಾಗಿ ಬೈಕ್ನಲ್ಲಿ ಬಂದ ಸವಾರನೊಬ್ಬ ರಾಜಾಜಿನಗರ ಸಂಚಾರಿ ಮುಖ್ಯ ಪೇದೆಗೆ ಡಿಕ್ಕಿ ಹೊಡೆದಿರುವ ಘಟನೆ ನಡೆದಿದೆ.
ಇಂದು ವಾಹನಗಳ ತಪಾಸಣೆ ಕಾರ್ಯವನ್ನ ರಾಜಾಜಿನಗರ ಸಂಚಾರಿ ಠಾಣೆಯ ಮುಖ್ಯ ಪೇದೆ ಗೋಪಾಲ್ ನಡೆಸುತ್ತಿದ್ದರು. ಇದೇ ವೇಳೆ ಬೈಕ್ನಲ್ಲಿ ಅತಿ ವೇಗವಾಗಿ ಬಂದ ಬೈಕ್ ಸವಾರ ರಸ್ತೆಯಲ್ಲಿದ್ದ ಸಂಚಾರಿ ಮುಖ್ಯ ಪೇದೆಗೆ ಡಿಕ್ಕಿ ಹೊಡೆದಿದ್ದಾನೆ. ಪರಿಣಾಮ ಗೋಪಾಲ್ ಅವರ ಬಲಗಾಲಿಗೆ ಗಂಭೀರ ಗಾಯವಾಗಿದೆ.
ಗಾಯಗೊಂಡ ಅವರಿಗೆ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗಿದ್ದು, ರಾಜಾಜಿನಗರ ಸಂಚಾರಿ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಲಾಗಿದೆ. ಆರೋಪಿ ಪರಾರಿಯಾಗಿದ್ದು, ಆತನ ಬಂಧನಕ್ಕೆ ಶೋಧ ಮುಂದುವರೆದಿದೆ.