ಇಂದೋರ್: ಮಹಿಳೆವೋರ್ವಳ ಕತ್ತಿಗೆ ಹಗ್ಗದಿಂದ ಬಿಗಿದು ಕೊಲೆ ಮಾಡಿರುವ ಘಟನೆ ನಗರದ ಸಿಯೋಗಿತಾಗಂಜ್ನಲ್ಲಿ ನಡೆದಿತ್ತು. ಈ ಕೊಲೆಯ ದೃಶ್ಯ ಸ್ಥಳೀಯ ಸಿಸಿಟಿವಿಯಲ್ಲಿ ಸೆರೆಯಾಗಿದ್ದು, ಈಗ ನಗರದ ಜನತೆಯನ್ನು ಬೆಚ್ಚಿಬೀಳಿಸಿದೆ.
ಪಾದಚಾರಿ ಸೋಗಿನಲ್ಲಿ ಬಂದ ವ್ಯಕ್ತಿವೋರ್ವ ಆಸ್ಪತ್ರೆ ಮುಂಭಾಗ ಹೊಂಚು ಹಾಕಿ ಮಹಿಳೆಗಾಗಿ ಕಾಯುತ್ತಿದ್ದ. ಮಹಿಳೆ ಬಂದ ತಕ್ಷಣವೇ ತನ್ನಲ್ಲಿದ್ದ ಹಗ್ಗದಿಂದ ಆಕೆಯ ಕತ್ತಿಗೆ ಹಾಕಿ ಬಿಗಿದಿದ್ದಾನೆ. ಮಹಿಳೆ ಆತನಿಂದ ತಪ್ಪಿಸಿಕೊಳ್ಳಲು ಎಷ್ಟೇ ಪ್ರಯತ್ನಿಸಿದ್ರೂ ಸಹ ಪ್ರಯೋಜನವಾಗಿಲ್ಲ. ಸುಮಾರು 2.30 ನಿಮಿಷಗಳ ಕಾಲ ಆರೋಪಿಯೊಂದಿಗೆ ಹೋರಾಡಿ ಕೊನೆಗೂ ಪ್ರಾಣತೆತ್ತಿದ್ದಾಳೆ ಮಹಿಳೆ.
ಈ ದೃಶ್ಯ ಅಲ್ಲಿದ್ದ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಸಿಸಿಟಿವಿ ಆಧಾರದ ಮೇಲೆ ಪೊಲೀಸರು ತನಿಖೆ ಆರಂಭಿಸಿದ್ದಾರೆ. ಈ ಹಿಂದೆ ಇಂತಹ ಘಟನೆಯೊಂದು ನಗರದಲ್ಲಿ ನಡೆದಿತ್ತು. ಅದರ ಆಧಾರದ ಮೇಲೆ ಪೊಲೀಸರು ಆರೋಪಿವೋರ್ವನನ್ನು ಬಂಧಿಸಿ ವಿಚಾರಣೆಗೊಳಪಡಿಸಿದ್ದಾರೆ. ಕೊಲೆಗೆ ಕಾರಣ, ಮಹಿಳೆಗೂ ಮತ್ತು ಆರೋಪಿಗೆ ಇರುವ ಸಂಬಂಧದ ಕುರಿತು ಯಾವುದೇ ಮಾಹಿತಿ ಈವರೆಗೆ ಲಭ್ಯವಾಗಿಲ್ಲ.