ಬೆಂಗಳೂರು: ಯುವತಿಯರೊಂದಿಗೆ ಡೇಟಿಂಗ್ ಆಸೆಗಾಗಿ ವ್ಯಕ್ತಿವೋರ್ವ ಲಕ್ಷ ಲಕ್ಷ ಹಣ ಕಳೆದುಕೊಂಡಿರುವ ಘಟನೆ ನಗರದಲ್ಲಿ ಬೆಳಕಿಗೆ ಬಂದಿದೆ.
ಕೋಡಿ ಚಿಕ್ಕನಹಳ್ಳಿಯ ಪ್ರಭಾಕರ್ ಶೆಣೈ ಹಣ ಕಳೆದುಕೊಂಡವರು. ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುವ ಪ್ರಭಾಕರ್ ಅವರಿಗೆ ಡೇಟಿಂಗ್ ಫ್ರೆಂಡ್ಶಿಫ್ ಹಾಗೂ ಟೆಲಿ ಮಾರ್ಕೆಟಿಂಗ್ ಕಂಪನಿಯಿಂದ ಡೇಟಿಂಗ್ ಕುರಿತಂತೆ ಪ್ರಭಾಕರ್ ಮೊಬೈಲ್‌ಗೆ ಮೆಸ್ಸೇಜ್ ಬಂದಿತ್ತು. ಇದಕ್ಕೆ ರಿಪ್ಲೈ ಮಾಡುತ್ತಿದ್ದಂತೆ ಕಂಪನಿ ಕಡೆಯಿಂದ ಕರೆ ಮಾಡಿ ಯುವತಿಯೊಂದಿಗೆ ಭೇಟಿಯಾಗಬೇಕಾದರೆ ಹಣ ಕಟ್ಟಿ ನೋಂದಣಿ ಮಾಡಿಸಿಕೊಳ್ಳಬೇಕು ಎಂದು ಹೇಳಲಾಗಿತ್ತು.
ಇದರಂತೆ ಪ್ರಭಾಕರ್ 2 ಸಾವಿರ ರೂ.ಗಳನ್ನು ಆನ್ಲೈನ್ ಮೂಲಕ ಪಾವತಿಸಿ ನೋಂದಣಿ ಮಾಡಿಕೊಂಡಿದ್ದರು. ಇದರಂತೆ ಕಂಪನಿಯವರು ನಂಬರ್ ಕೊಟ್ಟಿದ್ದರು. ಇದರಂತೆ ಯುವತಿವೋರ್ವಳು ಕರೆ ಮಾಡಿ ಗ್ರೀನ್ ಕಾರ್ಡ್ ನೀಡಲು ಹಾಗೂ ಹೊಟೇಲ್ ಬುಕ್ ಮಾಡಲು ಹಣ ಪಡೆದುಕೊಂಡು ಸಂಪರ್ಕ ಸ್ಥಗಿತಗೊಳಿಸಿದ್ದಳಂತೆ.
ಇದೇ ರೀತಿ ನಿಶಾ ಗುಪ್ತಾ ಎಂಬ ಯುವತಿ ಕರೆ ಮಾಡಿ ಇಲ್ಲದ ಸುಳ್ಳುಗಳನ್ನು ಪೋಣಿಸಿ ಮತ್ತೆ ಹಣ ತೆಗೆದುಕೊಂಡು ಸ್ವಿಚ್ ಆಫ್ ಮಾಡಿದ್ದಳು. ಒಟ್ಟು 4,18,900 ರೂ. ಹಣ ಪಡೆದು ಮೋಸ ಮಾಡಿದ್ದಾರೆ. ಇದಾದ ಬಳಿಕ ಮತ್ತೆ ಕಂಪನಿಯು ಪ್ರಭಾಕರ್ ಗೆ ಕರೆ ಮಾಡಿ ಒಂದು ಲಕ್ಷ ರೂ. ಹಣ ಕಟ್ಟಬೇಕೆಂದು ಹೇಳಿದೆಯಂತೆ. ಇದರಿಂದ ಅನುಮಾನಗೊಂಡು ಕಂಪನಿ ಹಾಗೂ ಇಬ್ಬರು ಯುವತಿಯರ ವಿರುದ್ಧ ಬೊಮ್ಮನಹಳ್ಳಿ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ ಪ್ರಭಾಕರ್ ಶೆಣೈ.
ಪ್ರಭಾಕರ್ ನೀಡಿದ ದೂರಿನ್ವನಯ ಆರೋಪಿಗಳ ವಿರುದ್ಧ ಮಾಹಿತಿ ತಂತ್ರಜ್ಞಾನ ಕಾಯ್ದೆಯಡಿ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಆರೋಪಿಗಳ ಪತ್ತೆಗೆ ಬಲೆ ಬೀಸಿದ್ದಾರೆ.