ತಿರುವನಂತಪುರಂ: ಕೋವಿಡ್ ನಿಯಮ ಉಲ್ಲಂಘಿಸಿ ಕ್ರಿಸ್‌ಮಸ್ ಪ್ರಯುಕ್ತ ಆಯೋಜಿಸಲಾಗಿದ್ದ ಡಿಜೆ ಪಾರ್ಟಿಯಲ್ಲಿ ಭಾಗಿಯಾಗಿದ್ದ 1,000 ಜನರ ವಿರುದ್ಧ ಕೇರಳ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.
ತಿರುವನಂತಪುರಂನಲ್ಲಿ ನಿನ್ನೆ ರಾತ್ರಿ 'ದಿ ಯೂತ್ ಕಲೆಕ್ಟಿವ್' ಕ್ರಿಸ್‌ಮಸ್ ಪಾರ್ಟಿಯನ್ನು ಆಯೋಜಿಸಿತ್ತು. ಪಾರ್ಟಿಯ ಸ್ಥಳದಿಂದ ಮೈಕ್ ಸೆಟ್ ಸೇರಿದಂತೆ ಎಲ್ಲಾ ಸಂಗೀತ ಸಾಧನಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ನಾವು ಪೊಲೀಸರಿಂದ ಅನುಮತಿ ಪಡೆದಿದ್ದೆವು ಎಂದು ಆಯೋಜಕರು ಹೇಳಿದ್ದು, ಇದನ್ನು ಪೊಲೀಸರು ನಿರಾಕರಿಸಿದ್ದಾರೆ.
ಓದಿ: ವಿಶೇಷ ಪಾರ್ಟಿ-ಡಿಜೆ ಡಾನ್ಸ್ ನಿಷೇಧ, ಉಲ್ಲಂಘಿಸಿದರೆ ಕಠಿಣ ಕ್ರಮ: ಧಾರವಾಡ ಡಿಸಿ
ಇನ್ನು ಇಂಗ್ಲೆಂಡ್ನಿಂದ ಕೇರಳಕ್ಕೆ ಬಂದ ಎಂಟು ಜನರ ಕೋವಿಡ್ ವರದಿ ಪಾಸಿಟಿವ್ ಬಂದಿದ್ದು, ರಾಜ್ಯದೆಲ್ಲೆಡೆ ಹೆಚ್ಚಿನ ಎಚ್ಚರಿಕೆ ವಹಿಸಲಾಗಿದೆ. ಸೋಂಕಿತರ ಮಾದರಿಗಳನ್ನು ಪುಣೆಯ ನ್ಯಾಷನಲ್ ಇನ್‌ಸ್ಟಿಟ್ಯೂಟ್ ಆಫ್ ವೈರಾಲಜಿಗೆ ಕಳುಹಿಸಲಾಗಿದೆ ಎಂದು ಆರೋಗ್ಯ ಸಚಿವೆ ಕೆ.ಕೆ.ಶೈಲಾಜಾ ಹೇಳಿದ್ದಾರೆ.