ETV Bharat / international

ಗಾಜಾದಲ್ಲಿ ಇಸ್ರೇಲ್ ರಾಕೆಟ್ ಸುರಿಮಳೆ: ಜೀವ ಉಳಿಸಿಕೊಳ್ಳಲು ಸುರಕ್ಷಿತ ಸ್ಥಳಕ್ಕೆ ಜನರ ವಲಸೆ

ಗಾಜಾ ನಗರವನ್ನು ಇಸ್ರೇಲ್​ ರಾಕೆಟ್‌​ಗಳು ಧ್ವಂಸ ಮಾಡುತ್ತಿವೆ. ಈಜಿಪ್ಟ್​ ಗಡಿಗೆ ತೆರಳಲು ಜನರಿಗೆ ಅಧಿಕಾರಿಗಳು ಸಲಹೆ ನೀಡಿದ್ದಾರೆ.

ಗಾಜಾದಲ್ಲಿ ರಾಕೆಟ್​ ಮಳೆ
ಗಾಜಾದಲ್ಲಿ ರಾಕೆಟ್​ ಮಳೆ
author img

By ETV Bharat Karnataka Team

Published : Oct 10, 2023, 3:37 PM IST

ಗಾಜಾ ನಗರ: ಹಮಾಸ್​ ಉಗ್ರರ ಆಳ್ವಿಕೆಯಲ್ಲಿರುವ ಗಾಜಾ ನಗರ ಇಸ್ರೇಲ್​ನ ಸೇಡಿನ ರಾಕೆಟ್​ ದಾಳಿಗೆ ಛಿದ್ರವಾಗುತ್ತಿದೆ. ಇದು ಗಾಜಾ ಪಟ್ಟಿಯಲ್ಲಿ ವಾಸಿಸುತ್ತಿರುವ 20 ಲಕ್ಷ ಪ್ಯಾಲಿಸ್ಟೀನಿಯನ್ನರ ನಿದ್ದೆಗೆಡಿಸಿದೆ. ವಿಶ್ವಸಂಸ್ಥೆ ನಿರ್ಮಿಸಿಕೊಟ್ಟಿರುವ ಆಶ್ರಯ ತಾಣಗಳ ಮೇಲೂ ಬಾಂಬ್​ಗಳು ಬೀಳುತ್ತಿದ್ದು, ಅಲ್ಲಿನ ಜನರನ್ನು ಕಂಗೆಡಿಸಿದೆ. ಇದರಿಂದ ಜನರು ರಾಕೆಟ್ ಬಿದ್ದ ಪ್ರತಿ ಬಾರಿಯೂ ಜಾಗ ಬದಲಿಸಿ ಜೀವ ಉಳಿಸಿಕೊಳ್ಳಬೇಕಾಗಿದೆ.

ಅಕ್ಟೋಬರ್​ 7 ರಂದು ಹಮಾಸ್​ ಉಗ್ರರು ಇಸ್ರೇಲ್​ನೊಳಕ್ಕೆ ನುಗ್ಗಿ ರಕ್ತಚರಿತ್ರೆ ಸೃಷ್ಟಿಸಿದ ಬಳಿಕ ಸಿಡಿದೆದ್ದಿರುವ ಇಸ್ರೇಲ್​ ಪಡೆಗಳು ಗಾಜಾ ಪಟ್ಟಿಯನ್ನು ಪುಡಿಗಟ್ಟುತ್ತಿವೆ. ಸತತವಾಗಿ ರಾಕೆಟ್​, ಬಾಂಬ್​, ಗುಂಡಿನ ಸುರಿಮಳೆ ಸುರಿಸುತ್ತಿದ್ದು, ಅಕ್ಷರಶಃ ನರಕಸದೃಶ ವಾತಾವರಣ ನಿರ್ಮಾಣವಾಗಿದೆ. ಹಮಾಸ್​ ಉಗ್ರರ ನಾಮಾವಶೇಷದ ಶಪಥ ಮಾಡಿರುವ ಇಸ್ರೇಲ್​, ಗಾಜಾ ನಗರವನ್ನು ತೊರೆಯಲು ಜನರಿಗೆ ಕರೆ ನೀಡಿದೆ.

ವಿಶ್ವಸಂಸ್ಥೆಯ ಆಶ್ರಯತಾಣಗಳ ಮೇಲೂ ಬಿದ್ದ ರಾಕೆಟ್​: ಗಾಜಾ ನಗರದಲ್ಲಿ ಪ್ಯಾಲೆಸ್ಟೀನಿಯನ್ ನಿರಾಶ್ರಿತರಿಗಾಗಿ ಆಶ್ರಯತಾಣಗಳನ್ನು ನಿರ್ಮಿಸಿಕೊಟ್ಟಿದ್ದು, ಅದರ ಮೇಲೂ ಬಾಂಬ್​ಗಳು ಬಂದು ಬೀಳುತ್ತಿವೆ. ಗಾಜಾ ನಗರದ ಸುತ್ತಲೂ ದಿಗ್ಬಂಧನ ಹೇರಿರುವ ಇಸ್ರೇಲ್​ ಅಲ್ಲಿಗೆ ಆಹಾರ, ನೀರು, ವಿದ್ಯುತ್​ ಸರಬರಾಜು ತಡೆದಿದೆ.

16 ವರ್ಷಗಳ ಹಿಂದೆ ಇಸ್ರೇಲ್ ಮತ್ತು ಈಜಿಪ್ಟ್‌ನಿಂದ ದಿಗ್ಬಂಧನಕ್ಕೀಡಾಗಿದ್ದ ಗಾಜಾ ಅನ್ನ, ನೀರಿಲ್ಲದೇ ಸಾವಿನ ಕದ ತಟ್ಟಿತ್ತು. 2007 ರಲ್ಲಿ ಹಮಾಸ್ ಉಗ್ರಗಾಮಿ ಗುಂಪು ಈ ಪ್ರದೇಶವನ್ನು ವಶಕ್ಕೆ ಪಡೆದು, ಇಸ್ರೇಲ್​ ವಿರುದ್ಧ ನಾಲ್ಕು ಬಾರಿ ಯುದ್ಧ ಮಾಡಿದೆ. ಹೀಗಾಗಿ ವಿಶ್ವಸಂಸ್ಥೆ ಸುರಕ್ಷಿತ ವಲಯವನ್ನು ಗುರುತಿಸಿ ನಿರಾಶ್ರಿತರಿಗೆ ಕೆಲ ಸೌಲಭ್ಯಗಳನ್ನು ನೀಡಿ ಸಂಘರ್ಷದಿಂದ ಪಾರು ಮಾಡಿತ್ತು. ಈಗ ಆ ಜಾಗವೂ ದಾಳಿಗೆ ಒಳಗಾಗುತ್ತಿದೆ.

ಇಲ್ಲಿ ಐದು ಶಾಲೆಗಳು ಸಿಡಿತಲೆಗೆ ಧ್ವಂಸವಾಗಿವೆ. ಸದ್ಯಕ್ಕೆ ಯಾವುದೇ ಸಾವು ನೋವುಗಳ ಬಗ್ಗೆ ವರದಿ ಸಿಕ್ಕಿಲ್ಲ. ನಗರದ ಗಡಿ ಮತ್ತು ಜನನಿಬಿಡ ನಿರಾಶ್ರಿತರ ಶಿಬಿರಗ ಮೇಲೆ ದಾಳಿ ನಡೆಸುವುದು ಇಸ್ರೇಲಿಗರ ಗುರಿಯಾಗಿಲ್ಲವಾದರೂ, ಸೇನೆಯ ಕ್ಷಿಪ್ರ ವಾಯುದಾಳಿಯು ನಗರದ ಹಲವು ಭಾಗಗಳನ್ನು ಆಕ್ರಮಿಸಿದೆ.

ಬಾಂಬ್​ ಬಿದ್ದಂತೆ ಜಾಗದಿಂದ ಜೂಟ್​: ಇಸ್ರೇಲ್​ನ ರಕ್ಕಸ ದಾಳಿಗೆ ಗಾಜಾ ಸಾವಿನ ಮನೆಯಾಗುತ್ತಿದ್ದು, ಬಾಂಬ್​ ಬಿದ್ದ ಪ್ರತಿ ಬಾರಿಯೂ ಜನರು ಆ ಸ್ಥಳವನ್ನು ತೊರೆದು ಬೇರೆ ಸುರಕ್ಷಿತ ಪ್ರದೇಶಕ್ಕೆ ತೆರಳುತ್ತಿದ್ದಾರೆ. ಪ್ರತಿ ಬಾರಿಯೂ ಬಾಂಬ್​ ದಾಳಿಗೆ ತುತ್ತಾದ ಪ್ರದೇಶವನ್ನು ತೊರೆದು ಜೀವ ಉಳಿಸಿಕೊಳ್ಳಬೇಕಿದೆ. ಗಾಜಾದ ಸರ್ಕಾರಿ ಕಟ್ಟಡಗಳು ಮತ್ತು ಎತ್ತರದ ಕಟ್ಟಡಗಳನ್ನು ಇಸ್ರೇಲಿ ಬಾಂಬ್‌ಗಳು ನೆಲಸಮ ಮಾಡಿವೆ.

ಈಜಿಪ್ಟ್​ಗೆ ತೆರಳಲು ಸೂಚನೆ: ಗಾಜಾ ಪಟ್ಟಿಯಲ್ಲಿ ಬಾಂಬ್​ ಮಳೆ ಸುರಿಯುತ್ತಿರುವ ಕಾರಣ ಜನರು ಈಜಿಪ್ಟ್​ ಗಡಿಯ ಕಡೆಗೆ ತೆರಳು ಅಲ್ಲಿನ ಅಧಿಕಾರಿಗಳು ಜನರಿಗೆ ಸಲಹೆ ನೀಡುತ್ತಿದ್ದಾರೆ. ಮಂಗಳವಾರ ನೀಡಿದ ಸೂಚನೆಯಲ್ಲಿ ಇಸ್ರೇಲಿ ಸೇನೆಯ ವಕ್ತಾರ, ಲೆಫ್ಟಿನೆಂಟ್ ಕರ್ನಲ್ ರಿಚರ್ಡ್ ಹೆಕ್ಟ್, ಪ್ಯಾಲೆಸ್ಟೀನಿಯನ್ನರು ತಕ್ಷಣವೇ ಪ್ರಾಣ ಉಳಿಸಿಕೊಳ್ಳಲು ಈಜಿಪ್ಟ್‌ನ ಗಡಿಗೆ ತೆರಳಿ ಎಂದು ಹೇಳಿದ್ದಾರೆ.

ಭೀಕರ ಸಂಘರ್ಷದಲ್ಲಿ ಇಲ್ಲಿಯವರೆಗೆ ಗಾಜಾದಲ್ಲಿ ಸುಮಾರು 700 ಮಂದಿ ಪ್ರಾಣ ಕಳೆದುಕೊಂಡು, ಸಾವಿರಾರು ಮಂದಿ ಗಾಯಗೊಂಡಿದ್ದಾರೆ. 900 ಕ್ಕೂ ಹೆಚ್ಚು ಇಸ್ರೇಲಿಗಳೂ ಹಮಾಸ್​ ದಾಳಿಗೆ ಹತರಾಗಿದ್ದಾರೆ. 150ಕ್ಕೂ ಹೆಚ್ಚು ಇಸ್ರೇಲಿ ನಾಗರಿಕರು ಮತ್ತು ಸೈನಿಕರನ್ನು ಹಮಾಸ್​ ವಶದಲ್ಲಿಟ್ಟುಕೊಂಡಿದೆ ಎಂದು ತಿಳಿದುಬಂದಿದೆ.

ಇದನ್ನೂ ಓದಿ: ಇಸ್ರೇಲ್ ನಿರ್ನಾಮ ಮಾಡಲು ಪ್ರತಿಜ್ಞೆ ಮಾಡಿರುವ ಹಮಾಸ್​.. ಏನಿದು Hamas

ETV Bharat Logo

Copyright © 2024 Ushodaya Enterprises Pvt. Ltd., All Rights Reserved.