ETV Bharat / international

ಎಲಾನ್​ ಮಸ್ಕ್​ ತೆಕ್ಕೆಗೆ ಟ್ವಿಟರ್​.. ಮತ್ತೆ ಟ್ವಿಟರ್​​ಗೆ ಮರಳಲ್ಲ ಎಂದ ಟ್ರಂಪ್​ - ಮತ್ತೆ ಟ್ವಿಟರ್​​ಗೆ ಮರಳಲ್ಲ ಎಂದ ಟ್ರಂಪ್

ನಾನು ಟ್ವಿಟರ್​​​ಗೆ ಮರಳುತ್ತಿಲ್ಲ. ನಾನು ಸತ್ಯದ ದಾರಿಯಲ್ಲೇ ಉಳಿಯಲಿದ್ದೇನೆ ಎಂದು ಟ್ರಂಪ್ ಹೇಳಿದ್ದಾರೆ. ಇದೇ ವೇಳೆ ಮಾತನಾಡಿರುವ ಮಾಜಿ ಅಧ್ಯಕ್ಷ ಟ್ರಂಪ್​, ಎಲಾನ್​ ಟ್ವಿಟರ್​​ ಅನ್ನು ಖರೀದಿಸುತ್ತಾರೆ ಎಂದು ನಾನು ಭಾವಿಸುತ್ತೇನೆ ಏಕೆಂದರೆ ಅವರು ಅದನ್ನು ಸುಧಾರಿಸುತ್ತಾರೆ ಮತ್ತು ಅವರು ಒಳ್ಳೆಯ ವ್ಯಕ್ತಿ, ಆದರೆ ನಾನು ಸತ್ಯದ ಮಾರ್ಗದಲ್ಲೇ ಉಳಿಯುತ್ತೇನೆ ಎಂದಿದ್ದಾರೆ.

Trump says he has no plans to rejoin Twitter after Musk deal
ಎಲಾನ್​ ಮಸ್ಕ್​ ತೆಕ್ಕೆಗೆ ಟ್ವಿಟರ್​.. ಮತ್ತೆ ಟ್ವಿಟರ್​​ಗೆ ಮರಳಲ್ಲ ಎಂದ ಟ್ರಂಪ್​
author img

By

Published : Apr 26, 2022, 10:24 AM IST

ನ್ಯೂಯಾರ್ಕ್: ಟ್ವಿಟರ್​, ಉದ್ಯಮಿ ಎಲಾನ್​ ಮಸ್ಕ್​ ಅವರ ಒಡೆತನಕ್ಕೆ ಬಂದಿದೆ. ಆದರೆ ಅಮೆರಿಕದ ಮಾಜಿ ಅಧ್ಯಕ್ಷ ಡೊನಾಲ್ಡ್​ ಟ್ರಂಪ್​​ ತಮ್ಮ ಟ್ವಿಟರ್ ಖಾತೆಯನ್ನು ಮರು ಚಾಲನೆಗೊಳಿಸುವ ಉದ್ದೇಶ ಹೊಂದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ಟ್ರಂಪ್​ ಅವರ ಖಾತೆಯನ್ನು ಟ್ವಿಟರ್​​​ ಬ್ಯಾನ್​ ಮಾಡಿತ್ತು. ಟ್ವಿಟರ್​ಗೆ ಸೆಡ್ಡು ಹೊಡೆದಿದ್ದ ಡೊನಾಲ್ಡ್​ ಟ್ರಂಪ್​, ತಮ್ಮದೇ ವೇದಿಕೆಯಾದ ಟ್ರೂತ್ ಸೋಶಿಯಲ್ ಆರಂಭಿಸಿದ್ದರು. ಈ ವೇದಿಕೆ ಮೇಲೆಯೇ ಹೆಚ್ಚು ಗಮನ ಹರಿಸುವುದಾಗಿ ಟ್ರಂಪ್ ಫಾಕ್ಸ್ ನ್ಯೂಸ್‌ಗೆ ಸ್ಪಷ್ಟಪಡಿಸಿದ್ದಾರೆ.

ನಾನು ಟ್ವಿಟರ್​​​ಗೆ ಮರಳುತ್ತಿಲ್ಲ. ನಾನು ಸತ್ಯದ ದಾರಿಯಲ್ಲೇ ಉಳಿಯಲಿದ್ದೇನೆ ಎಂದು ಟ್ರಂಪ್ ಹೇಳಿದ್ದಾರೆ. ಇದೇ ವೇಳೆ ಮಾತನಾಡಿರುವ ಮಾಜಿ ಅಧ್ಯಕ್ಷ ಟ್ರಂಪ್​, ಎಲಾನ್​​​ ಟ್ವಿಟರ್​​ ಅನ್ನು ಖರೀದಿಸುತ್ತಾರೆ ಎಂದು ನಾನು ಭಾವಿಸುತ್ತೇನೆ ಏಕೆಂದರೆ ಅವರು ಅದನ್ನು ಸುಧಾರಿಸುತ್ತಾರೆ ಮತ್ತು ಅವರು ಒಳ್ಳೆಯ ವ್ಯಕ್ತಿ, ಆದರೆ ನಾನು ಸತ್ಯದ ಮಾರ್ಗದಲ್ಲೇ ಉಳಿಯುತ್ತೇನೆ ಎಂದಿದ್ದಾರೆ.

ಅಮೆರಿಕ ಅಧ್ಯಕ್ಷೀಯ ಚುನಾವಣೆ ಬಳಿಕ ನಡೆದ ಜನವರಿ 6 ದಂಗೆ ವೇಳೆ, ಟ್ವಿಟರ್​ ಆಗ ಅಮೆರಿಕ ಅಧ್ಯಕ್ಷರಾಗಿದ್ದ ಡೊನಾಲ್ಡ್​ ಟ್ರಂಪ್ ಅವರ ಖಾತೆಯನ್ನು ನಿರ್ಬಂಧಿಸಿತ್ತು. ಟ್ರಂಪ್​ ರಾಜಕೀಯ ಬೆಳವಣಿಗೆಗೆ ಕಾರಣವಾಗಿದ್ದ ಟ್ವಿಟರ್​​​​​​​​​​ ನಂತರ ಅವರ ಮೇಲೆ ನಿರ್ಬಂಧ ವಿಧಿಸಿತ್ತು. ಆ ಸಮಯದಲ್ಲಿ, ಟ್ರಂಪ್​​ ಸರಿಸುಮಾರು 89 ಮಿಲಿಯನ್ ಅನುಯಾಯಿಗಳನ್ನು ಹೊಂದಿದ್ದರು.

ಇದನ್ನು ಓದಿ:$44 ಬಿಲಿಯನ್​ಗೆ ಟ್ವಿಟರ್​ ಖರೀದಿಗೆ ಎಲಾನ್ ಮಸ್ಕ್ ಒಪ್ಪಂದ: ಟ್ವಿಟರ್​ ಷೇರು ಮೌಲ್ಯದಲ್ಲಿ ಜಿಗಿತ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.