ETV Bharat / international

ಉಕ್ರೇನ್​ ಆಹಾರ ಕೊರತೆ ನೀಗಿಸಲು ಹಲವು ದೇಶಗಳ ನೆರವು - many countries helping to Ukraine

ರಷ್ಯಾ ದಾಳಿಗೀಡಾದ ಉಕ್ರೇನ್​ ಉಕ್ರೇನ್​ನಲ್ಲಿ ತೀವ್ರ ಆಹಾರ ಕೊರತೆ ಇಸ್ತಾನ್​ಬುಲ್​ನಲ್ಲಿ ವರ್ಚುಯಲ್​ ಮಾತುಕತೆ ಉಕ್ರೇನ್​ಗೆ ಹಲವು ದೇಶಗಳಿಂದ ಆಹಾರ ಧಾನ್ಯಗಳ ನೆರವು

many-countries-helping-to-ukraine
ಉಕ್ರೇನ್​ ಆಹಾರ ಕೊರತೆ ನೀಗಿಸಲು ಹಲವು ದೇಶಗಳ ನೆರವು
author img

By

Published : Aug 11, 2022, 6:53 AM IST

ವಿಶ್ವಸಂಸ್ಥೆ: ರಷ್ಯಾ ದಾಳಿಯಿಂದ ನಲುಗಿರುವ, ತೀವ್ರ ಆಹಾರ ಕೊರತೆ ಎದುರಿಸುತ್ತಿರುವ ಉಕ್ರೇನ್​ಗೆ ವಿವಿಧ ದೇಶಗಳು ಬೆನ್ನಿಗೆ ನಿಂತಿವೆ. ಇಸ್ತಾನ್​ಬುಲ್​ನಲ್ಲಿ ನಿನ್ನೆ ನಡೆದ ವರ್ಚುಯಲ್​ ಮಾತುಕತೆಯಲ್ಲಿ ಆ ದೇಶಕ್ಕೆ ಆಹಾರ ಸರಕುಗಳನ್ನು ಸಾಗಿಸಲು ಕೆಲ ದೇಶಗಳು ಮುಂದಾಗಿವೆ. ಇದರಿಂದ ಉಕ್ರೇನ್​ ಆಹಾರ ಘಟಕದಲ್ಲಿ ಆಹಾರ ಸಂಗ್ರಹಣೆ ಹೆಚ್ಚಳ ಕಾಣಲಿದೆ.

ಅಗತ್ಯ ಧಾನ್ಯಗಳ ಸಾಗಣೆಯು ಮುಂದಿನ ದಿನಗಳಲ್ಲಿ ಉಕ್ರೇನ್​ ಬಂದರಿಗೆ ಬರಲಿದೆ. ಸರಕುಗಳ ಆಗಮನದಿಂದ ಅಲ್ಪಮಟ್ಟಿನ ಕೊರತೆ ನೀಗಲಿದೆ ಎಂದು ಊಹಿಸಲಾಗಿದೆ. ರಷ್ಯಾ ದಾಳಿಗೀಡಾದ ಉಕ್ರೇನ್​ ಹಲವು ಬಾರಿ ಆಹಾರ ಸಾಮಗ್ರಿಗಳನ್ನು ರಫ್ತು ಮಾಡಲು ಪರಿಪರಿಯಾಗಿ ಕೇಳಿಕೊಂಡಿತ್ತು. ಇದೀಗ ಒಪ್ಪಂದದ ಅಡಿಯಲ್ಲಿ ವಿಶ್ವದ ಪ್ರಮುಖ ರಾಷ್ಟ್ರಗಳು ನೆರವಿಗೆ ಧಾವಿಸಿದ್ದು, ಸಹಾಯಹಸ್ತ ಚಾಚಿವೆ.

ಮೂರು ಉಕ್ರೇನಿಯನ್​ ಬಂದರಿಗೆ ಆಹಾರ ಸಾಮಗ್ರಿಗಳನ್ನು ಸಾಗಿಸುವ ಜವಾಬ್ದಾರಿಯನ್ನು ವಿಶ್ವಸಂಸ್ಥೆ ವಹಿಸಿಕೊಂಡಿದೆ. ಶಿಪ್ಪಿಂಗ್ ಮತ್ತು ತಪಾಸಣೆಗಳ ಕುರಿತು ವಿವರವಾದ ಕಾರ್ಯವಿಧಾನಗಳನ್ನು ಮುಗಿಸಲಾಗಿದೆ. 22 ಮಿಲಿಯನ್ ಟನ್ ಮೆಕ್ಕೆಜೋಳ ಮತ್ತು ಇತರ ಧಾನ್ಯಗಳ ರಫ್ತು ಮಾಡಲು ಜುಲೈ 22 ರಂದು ಟರ್ಕಿ ಮತ್ತು ವಿಶ್ವಸಂಸ್ಥೆಯ ಜೊತೆಗೆ ಉಕ್ರೇನ್ ಒಪ್ಪಂದ ಪತ್ರಕ್ಕೆ ಸಹಿ ಹಾಕಿತ್ತು.

ಅಮೆರಿಕ ನೇತೃತ್ವದ ನ್ಯಾಟೋ ಪಡೆಗೆ ಸೇರಲು ಬಯಸಿದ ಉಕ್ರೇನ್​ ವಿರುದ್ಧ ರಷ್ಯಾ ಫೆಬ್ರವರಿ 24 ರಂದು ಯುದ್ಧ ಘೋಷಿಸಿ ಅಂದಿನಿಂದ ನಿರಂತರ ದಾಳಿ ನಡೆಸುತ್ತಲೇ ಇದೆ. ಇದು ಆ ದೇಶದ ಮೇಲೆ ಭೀಕರ ಪರಿಣಾಮಗಳನ್ನು ಉಂಟು ಮಾಡಿದೆ. ಅದರಲ್ಲೂ ಆಹಾರದ ಕೊರತೆ ತೀವ್ರಗತಿಯಲ್ಲಿದೆ.

ಓದಿ: ಚೀನಾದ ಜನರಿಗೆ ಲಂಗ್ಯಾ ಹೆನಿಪವೈರಸ್ ಎಂಬ ಹೊಸ ಸೋಂಕು ಬಾಧೆ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.