ETV Bharat / international

ಬಕಿಂಗ್​​​​ಹ್ಯಾಮ್​ ​ಅರಮನೆಗೆ ಮರಳಿದ ರಾಣಿ ಎಲಿಜಬೆತ್ II - ಕೊರೊನಾ ವೈರಸ್​

ಕೊರೊನಾ ವೈರಸ್​ ಭೀತಿಯಿಂದ ಯುಕೆ ರಾಣಿ ಎಲಿಜಬೆತ್​​ II ಅವರು ಬಕಿಂಗ್​​​​​​ಹ್ಯಾಮ್​ ​ ಅರಮನೆಗೆ ತೊರೆದಿದ್ದಾರೆ ಎಂಬ ವದಂತಿಗಳು ಹಬ್ಬಿದ್ದವು. ಆದ್ರೆ ರಾಣಿ ಇಂದು ಅರಮನೆಗೆ ವಾಪಸ್​ ಆಗಿದ್ದಾರೆ.

Buckingham Palace
ರಾಣಿ ಎಲಿಜಬೆತ್ II
author img

By

Published : Mar 16, 2020, 7:53 PM IST

ಲಂಡನ್: ಯುಕೆ ರಾಣಿ ಎಲಿಜಬೆತ್ II ಅವರು ಮರಳಿ ಬಕಿಂಗ್​​​ಹ್ಯಾಮ್​ ​ಅರಮನೆಗೆ ಬಂದಿದ್ದಾರೆ. ಕೊರೊನಾ ವೈರಸ್​​ ತಗಲದಂತೆ ಕಾಪಾಡಲು ರಾಜನನ್ನು ವಿಂಡ್ಸರ್​​​ ಕ್ಯಾಸ್ಟಲ್​​ಗೆ ಕರೆದೊಯ್ಯಲಾಗಿತ್ತು.

ರಾಣಿ ಅರಮನೆಯಲ್ಲಿ ಇಲ್ಲದಿರುವುದಕ್ಕೆ ಹಲವಾರು ವದಂತಿಗಳು ಹಬ್ಬಿದ್ದವು. ಕೊರೊನಾ ವೈರಸ್​​ ಭಯದಿಂದ ರಾಣಿ ಬಕಿಂಗ್​ಹ್ಯಾಮ್​ ಅರಮನೆಯನ್ನು ತೊರೆದಿದ್ದಾರೆ ಎಂಬ ವದಂತಿಯೂ ಹಬ್ಬಿತ್ತು. ಆದ್ರೆ ಇದನ್ನು ಹಿರಿಯ ಸಹಾಯಕರೊಬ್ಬರು ನಿರಾಕರಿಸಿದ್ದಾರೆ.

ರಾಣಿ ತನ್ನ ಅಧಿಕೃತ ರಾಜಮನೆತನವನ್ನು ತೊರೆದು, ವಿಂಡ್ಸರ್ ಕ್ಯಾಸಲ್‌ಗೆ ತೆರಳಿದ್ದಾರೆ ಎಂದು ಶನಿವಾರ ಪತ್ರಿಕೆಯೊಂದು ವರದಿ ಮಾಡಿದ ನಂತರ ಈ ಬೆಳವಣಿಗೆ ಕಂಡು ಬಂದಿದೆ.

ಎರಡು ವಾರಗಳಿಂದ ಅರಮನೆಗೆ ಯಾವುದೇ ಅಧಿಕಾರಿಗಳು ಬಂದಾಗ ರಾಣಿ ಗ್ಲೋವ್ಸ್​​ ಧರಿಸುತ್ತಾರೆ. ಮತ್ತು ಶೇಕ್​​ ಹ್ಯಾಂಡ್​​ ಕೊಡುವುದನ್ನು ಕಡಿಮೆ ಮಾಡಿರುವುದು ಕಂಡುಬಂದಿದೆ. ಅಲ್ಲದೇ ಕೊರೊನಾ ವೈರಸ್​​ ಅರಮನೆ ಸುತ್ತಾಮುತ್ತಾ ಹರಡದಂತೆ ಕ್ರಮಕೈಗೊಳ್ಳಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಸರ್ಕಾರದ ಸಲಹೆಯ ಮೇರೆಗೆ ವೇಲ್ಸ್ ರಾಜಕುಮಾರ ಮತ್ತು ಡಚ್ಚಸ್​​ ಆಫ್ ಕಾರ್ನ್‌ವಾಲ್ ಈ ವಾರದ ಬೋಸ್ನಿಯಾ, ಸೈಪ್ರಸ್ ಮತ್ತು ಜೋರ್ಡಾನ್‌ ಪ್ರವಾಸವನ್ನು ರದ್ದುಗೊಳಿಸಿದ್ದಾರೆ. ಯುಕೆಯಲ್ಲಿ ಕೊರೊನಾ ವೈರಸ್ ಪ್ರಕರಣಗಳ ಸಂಖ್ಯೆ ಒಂದು ದಿನದಲ್ಲಿ 232 ರಷ್ಟು ಏರಿಕೆಯಾಗಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.