ETV Bharat / international

ಬೆಂಕಿಯಿಂದ ಪ್ರಾಣ ರಕ್ಷಣೆಗೆ 3ನೇ ಮಹಡಿಯಿಂದ ಜಿಗಿದ ಸಹೋದರರು! ಮುಂದೇನಾಯ್ತು? ನೋಡಿ.. - 4ನೇ ಅಂತಸ್ತಿನ ಕಟ್ಟಡ

ಫ್ರಾನ್ಸ್‌ನ ಅಪಾರ್ಟ್​ಮೆಂಟ್‌ವೊಂದರ 3ನೇ ಅಂತಸ್ತಿನಿಂದ ಇಬ್ಬರು ಮಕ್ಕಳು ಕೆಳಗೆ ಜಿಗಿದರು. ಈ ವೇಳೆ, ಪವಾಡ ಸದೃಶ ರೀತಿಯಲ್ಲಿ ಅವರ ಪ್ರಾಣ ರಕ್ಷಣೆ ಮಾಡುವಲ್ಲಿ ನೆರೆಹೊರೆಯವರು ಯಶಸ್ವಿಯಾಗಿದ್ದಾರೆ.

Two children
Two children
author img

By

Published : Jul 23, 2020, 4:19 PM IST

ಫ್ರಾನ್ಸ್​​: ಧಗಧಗನೆ ಹೊತ್ತಿ ಉರಿಯುತ್ತಿದ್ದ ಕಟ್ಟಡದ 3ನೇ ಮಹಡಿಯ ಕಿಟಕಿಯಿಂದ​ ಇಬ್ಬರು ಸಹೋದರರು ಕೆಳಗೆ ಜಿಗಿದಿದ್ದು, ಈ ವೇಳೆ ಕೆಳಗೆ ನಿಂತಿದ್ದ ಕೆಲವರು ಅವರನ್ನು ಕ್ಯಾಚ್​ ಮಾಡಿ ಪ್ರಾಣ ರಕ್ಷಣೆ ಮಾಡಿದ್ದಾರೆ. ಈ ಘಟನೆ ಫ್ರಾನ್ಸ್‌ನ ಗ್ರೆನೋಬಲ್‌ನಲ್ಲಿ ನಡೆದಿದೆ.

  • Two brothers, ages 3 & 10 were saved from an apartment fire on Tuesday in the southeastern French city of Grenoble when they were dropped 33 feet & caught by their neighbors.
    They only suffered from some smoke inhalation.

    Now that's neighborly love! ❤ pic.twitter.com/sgN0erFFW5

    — ~Marietta✌ (@_MariettaDavis) July 23, 2020 " class="align-text-top noRightClick twitterSection" data=" ">

ಪೋಷಕರು ಇಬ್ಬರು ಮಕ್ಕಳನ್ನು ಅಪಾರ್ಟ್​ಮೆಂಟ್‌ನ ರೂಮ್​​ನಲ್ಲಿರಿಸಿ ಹೊರಗಡೆ ಹೋಗಿದ್ದರು. ಈ ವೇಳೆ ಕಟ್ಟಡಕ್ಕೆ ಬೆಂಕಿ ಹೊತ್ತಿಕೊಂಡಿದೆ. ತಕ್ಷಣವೇ ಇಬ್ಬರು ಮಕ್ಕಳು ಕಿಟಕಿ ಮೂಲಕ ಕೆಳಗೆ ಜಿಗಿದಿದ್ದಾರೆ. ಈ ವೇಳೆ ಅಪಾರ್ಟ್‌ಮೆಂಟ್‌ನ ಅಕ್ಕಪಕ್ಕದವರು ಕೆಳಗೆ ನಿಂತು ಕೆಳಕ್ಕೆ ಹಾರಿದ ಬಾಲಕರನ್ನು ಕ್ಯಾಚ್​ ಮಾಡಿ ಪ್ರಾಣಾಪಾಯದಿಂದ ಪಾರು ಮಾಡಿದ್ದಾರೆ.

ಹೀಗೆ ಜಿಗಿದ ಮಕ್ಕಳ ವಯಸ್ಸು ಕ್ರಮವಾಗಿ 3 ಮತ್ತು 10 ಎಂದು ತಿಳಿದು ಬಂದಿದೆ. ಇಬ್ಬರಿಗೂ ಸಣ್ಣ-ಪುಟ್ಟ ಗಾಯಗಳಾಗಿದ್ದು ಆಸ್ಪತ್ರೆಗೆ ದಾಖಲಿಸಲಾಗಿದೆ. ನೆರೆಹೊರೆಯವರ ಸಮಯಪ್ರಜ್ಞೆ, ಸಕಾಲದ ನೆರವಿನಿಂದ ಮಕ್ಕಳ ಪ್ರಾಣ ಉಳಿಯಿತು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.