ETV Bharat / international

ತನ್ನ ದೇಶದ ಮೇಲೆಯೇ ಯುದ್ಧಕ್ಕೆ ಬಂದು ಬಳಲಿದ ರಷ್ಯಾ ಯೋಧನ ಸಂತೈಸಿದ ಉಕ್ರೇನ್​ ಮಹಾತಾಯಿ!!

author img

By

Published : Mar 3, 2022, 10:44 AM IST

Updated : Mar 3, 2022, 12:00 PM IST

ತನ್ನ ದೇಶದ ಮೇಲೆಯೇ ರಷ್ಯಾದ ಯೋಧ ಯುದ್ಧ ಸಾರಿ ಬಂದು ಸೆರೆಸಿಕ್ಕರೂ ಉಕ್ರೇನ್​ ಮಹಿಳೆ ಆತನನ್ನು ಸಂತೈಸಿ ಅಕ್ಕರೆ ತೋರಿದ ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಇದನ್ನು ಯುದ್ಧಕಾಲದಲ್ಲಿ ಮಾನವ ಸಹಾನುಭೂತಿಗೆ ಹಿಡಿದ ಕನ್ನಡಿ ಎಂದು ಬಣ್ಣಿಸಲಾಗಿದೆ.

captive-soldiers
ಉಕ್ರೇನ್​ ಮಹಿಳೆ

ಕೀವ್​: ಅವನು ರಷ್ಯಾದ ಯೋಧ. ಉಕ್ರೇನ್​ ಮೇಲೆ ದಂಡೆತ್ತಿ ಬಂದು ಸೈನಿಕರ ಕೈಗೆ ಸಿಕ್ಕಿ ಯುದ್ಧ ಖೈದಿಯಾದ. ಊಟ, ನಿದ್ದೆ ಬಿಟ್ಟು ರಣಾಂಗಣದಲ್ಲಿ ಹೋರಾಡಿ ಹಸಿವಿನಿಂದ ಬಳಲಿದ್ದ ಯೋಧನಿಗೆ ಮಹಿಳೆ ಚಹಾ ಮತ್ತು ಬ್ರೆಡ್​ ನೀಡಿ ಸಂತೈಸಿದಳು. ತಲೆ ನೇವರಿಸಿ 'ಚಿಂತಿಸಬೇಡ' ಎಂದು ತಾಯಿ ಮಮತೆ ತೋರಿದಳು.

ಬಳಿಕ ಆ ಖೈದಿಯ ಕುಟುಂಬಸ್ಥರಿಗೆ ವಿಡಿಯೋ ಕಾಲ್​ ಮಾಡಿ ಅವನ ತಾಯಿ ಜೊತೆ ಮಾತನಾಡಿಸಿದರು. ಎಲ್ಲವೂ ಸರಿಯಿದೆ, ದೇವರು ನಿಮ್ಮೊಂದಿಗಿದ್ದಾನೆ. ನಿಮ್ಮ ಮಗ ಜೀವಂತವಾಗಿದ್ದಾನೆ, ಹೆದರಬೇಡಿ ಎಂದು ಆ ಮಹಿಳೆ ಹೇಳುತ್ತಿದ್ದಾಗ ತಾಯಿ ಮತ್ತು ಯೋಧನ ಕಣ್ಣಲ್ಲಿ ನೀರು ಜಿನುಗಿದವು.

ತನ್ನ ದೇಶದ ಮೇಲೆಯೇ ಯುದ್ಧಕ್ಕೆ ಬಂದು ಬಳಲಿದ ರಷ್ಯಾ ಯೋಧನ ಸಂತೈಸಿದ ಉಕ್ರೇನ್​ ಮಹಾತಾಯಿ

ಇದು ತನ್ನ ದೇಶದ ಮೇಲೆಯೇ ರಷ್ಯಾದ ಯೋಧ ಯುದ್ಧ ಸಾರಿ ಬಂದು ಸೆರೆಸಿಕ್ಕರೂ ಉಕ್ರೇನ್​ ಮಹಿಳೆ ಆತನನ್ನು ಸಂತೈಸಿ ಅಕ್ಕರೆ ತೋರಿದ ಪರಿ. ಈ ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಇದನ್ನು ಯುದ್ಧಕಾಲದಲ್ಲಿ ಮಾನವ ಸಹಾನುಭೂತಿಗೆ ಹಿಡಿದ ಕನ್ನಡಿ ಎಂದು ಬಣ್ಣಿಸಲಾಗಿದೆ.

ನಿಮ್ಮ ಮಕ್ಕಳು ಉಕ್ರೇನ್​ನಲ್ಲಿ ಯುದ್ಧ ಖೈದಿಗಳಾಗಿ ಬಂಧಿತರಾಗಿದ್ದಾರೆ. ಇದು ದುರದೃಷ್ಟಕರ ಎಂದು ರಷ್ಯಾದ ತಾಯಂದಿರನ್ನು ಉದ್ದೇಶಿಸಿ ಉಕ್ರೇನ್​ ರಕ್ಷಣಾ ಸಚಿವಾಲಯ ಫೇಸ್​ಬುಕ್​, ಟ್ವಿಟ್ಟರ್​ನಲ್ಲಿ ಪೋಸ್ಟ್​ ಹಂಚಿಕೊಂಡಿದೆ.

ನಿಮ್ಮ ಮಕ್ಕಳ ಹಿಂಪಡೆಯಿರಿ: ಇನ್ನು ಉಕ್ರೇನ್​ನಲ್ಲಿ ಸೆರೆಸಿಕ್ಕು ಬಂಧಿತರಾದ ರಷ್ಯಾದ ಯುದ್ಧ ಸೈನಿಕರನ್ನು ತಮ್ಮ ತಾಯಂದಿರು ಕೀವ್​ಗೆ ಬಂದು ತಮ್ಮ ಮಕ್ಕಳನ್ನು ಬಿಡಿಸಿಕೊಂಡು ಹೋಗಬಹುದು ಎಂದು ಉಕ್ರೇನ್​ ಸರ್ಕಾರ ಆಫರ್​ ಮಾಡಿದೆ. ಅಲ್ಲದೇ ಈ ಪ್ರಕ್ರಿಯೆಗಾಗಿ ಇ-ಮೇಲ್​ ಮತ್ತು ಸಹಾಯವಾಣಿಗಳನ್ನು ಆರಂಭಿಸಿದೆ. ತಮ್ಮ ಮಗ ಸೆರೆಯಾದ ಬಗ್ಗೆ ಪುರಾವೆಗಳ ಸಮೇತ ಬಂದಲ್ಲಿ ಅಂಥವರನ್ನು ಬಿಟ್ಟು ಕೊಡಲಾಗುವುದು ಎಂದು ಉಕ್ರೇನ್​ ತಿಳಿಸಿದೆ.

ನಾವು ಉಕ್ರೇನಿಯನ್ನರು, ವ್ಲಾಡಿಮಿರ್​ ಪುಟಿನ್​ರ ಪ್ಯಾಸಿಸ್ಟ್​ಗಳಂತೆ ವರ್ತಿಸುವುದಿಲ್ಲ. ಮತ್ತು ಅಮಾಯಕ ಮಕ್ಕಳು ಮತ್ತು ತಾಯಿಂದಿರ ವಿರುದ್ಧ ನಾವು ಹೋರಾಟ ಮಾಡುವುದಿಲ್ಲ ಎಂದು ಅಲ್ಲಿನ ಸರ್ಕಾರ ಸಾಮಾಜಿಕ ಮಾಧ್ಯಮಗಳಲ್ಲಿ ಪೋಸ್ಟ್​ ಹಂಚಿಕೊಂಡಿದೆ.

ಓದಿ: ಖೆರ್ಸನ್ ನಗರ ವಶಪಡಿಸಿಕೊಂಡ ರಷ್ಯಾ ಸೇನೆ: ಹೋರಾಟ ಮುಂದುವರೆದಿದೆ ಎಂದು ಉಕ್ರೇನ್​ ಅಧ್ಯಕ್ಷ!

Last Updated : Mar 3, 2022, 12:00 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.