ಕೀವ್: ರಷ್ಯಾದ ಪಡೆಗಳು ಉಕ್ರೇನ್ ಮೇಲಿನ ಯುದ್ಧ ಮುಂದುವರೆಸಿದ್ದು, ಸೋಮವಾರ ಉಕ್ರೇನ್‌ನ ಎರಡನೇ ಅತಿದೊಡ್ಡ ನಗರದ ಮೇಲೆ ಭೀಕರ ಶೆಲ್ ದಾಳಿ ಮಾಡಿವೆ.
ಶೆಲ್ ದಾಳಿಯಿಂದಾಗಿ ವಸತಿ ಪ್ರದೇಶದ ಸಮೀಪದಲ್ಲಿ ರಷ್ಯಾ ಪಡೆಗಳು ಭಾರಿ ಹಾನಿ ಮಾಡಿವೆ. ನಿನ್ನೆ ನಡೆದಿದ್ದ ಸಂಧಾನ ಮಾತುಕತೆ ವಿಫಲವಾಗುತ್ತಿದ್ದಂತೆ ಉಕ್ರೇನ್ ರಾಜಧಾನಿ ಕೀವ್‌ನಲ್ಲಿ 40 ಕಿಲೋ ಮೀಟರ್ ಉದಕ್ಕೂ ಬೆಂಗಾವಲು ಪಡೆಗಳು, ನೂರಾರು ಟ್ಯಾಂಕ್‌ಗಳು ಹಾಗೂ ಇತರ ವಾಹನಗಳನ್ನು ನಿಯೋಜಿಸಲಾಗಿದ್ದು, ಮತ್ತಷ್ಟು ದಾಳಿಗೆ ಮುಂದಾಗಿವೆ. ಈ ನಡುವೆ ಖಾರ್ಕೀವ್ ಮತ್ತು ಕೀವ್ ನಡುವಿನ ನಗರವಾದ ಓಖ್ಟಿರ್ಕಾದಲ್ಲಿ ರಷ್ಯಾದ ಫಿರಂಗಿಗಳ ದಾಳಿಯಿಂದ 70 ಕ್ಕೂ ಹೆಚ್ಚು ಉಕ್ರೇನ್ ಸೈನಿಕರು ಮೃತಪಟ್ಟಿದ್ದಾರೆ ಎಂದು ಓಖ್ಟಿರ್ಕಾ ನಗರದ ಮೂಲಗಳು ತಿಳಿಸಿವೆ.
ನಾಲ್ಕು ಅಂತಸ್ತಿನ ಕಟ್ಟಡದ ಸುಟ್ಟಿರುವ ಫೋಟೋಗಳನ್ನು ಜಾಲತಾಣಗಳಲ್ಲಿ ಪೋಸ್ಟ್ ಮಾಡಲಾಗಿದೆ. ಭಾನುವಾರ ನಡೆದಿದ್ದ ಹೋರಾಟದಲ್ಲಿ ಅನೇಕ ರಷ್ಯಾ ಸೈನಿಕರು ಮತ್ತು ಕೆಲವು ಸ್ಥಳೀಯ ನಿವಾಸಿಗಳು ಸಹ ಸಾವನ್ನಪ್ಪಿದ್ದಾರೆ ಎನ್ನಲಾಗಿದೆ.
ಇದನ್ನೂ ಓದಿ: ಒಂದೇ ಕೈಯಲ್ಲಿ ರಷ್ಯಾ ಯುದ್ಧ ಟ್ಯಾಂಕರ್ ನಿಲ್ಲಿಸಿದ ಬಲಶಾಲಿ..ಸಖತ್ ಸದ್ದು ಮಾಡುತ್ತಿದೆ ವೈರಲ್ ವಿಡಿಯೋ!