ಥೆಹ್ರಾನ್ : ವಿದೇಶಾಂಗ ವ್ಯವಹಾಕಗಳ ಸಚಿವ ಎಸ್ ಜೈಶಂಕರ್ ಇಂದು ಇರಾನ್ ನಿಯೋಗದ ಜಾವೇದ್ ಜರೀಫ್ ಅವರನ್ನು ಥೆಹ್ರಾನ್‌ನಲ್ಲಿ ಭೇಟಿ ಮಾಡಿ ಮಾತುಕತೆ ನಡೆಸಿದ್ದಾರೆ.
ಶಾಂಘೈ ಸಹಕಾರ ಸಂಘಟನೆ(ಎಸ್‌ಸಿಒ)ಯ ಸಭೆಯಲ್ಲಿ ಭಾಗವಹಿಸಲು ಇಎಂಎ ಜೈಶಂಕರ್ ರಷ್ಯಾಗೆ ಪ್ರಮಾಣ ಬೆಳೆಸಿದ್ದರು. ನಿನ್ನೆಯಷ್ಟೇ ರಾಜನಾಥ್ ಸಿಂಗ್ ಅನಿರೀಕ್ಷಿತವಾಗಿ ಇಲ್ಲಿಗೆ ಭೇಟಿ ನೀಡಿದ್ದರು.
ರಷ್ಯಾ ಮುಂದಾಳತ್ವದಲ್ಲಿ ಎಸ್‌ಸಿಒ ಸಭೆ ಸೆಪ್ಟೆಂಬರ್ 9 ಮತ್ತು 10 ರಂದು ನಡೆಯಲಿದೆ. ವಿಶ್ವಸಂಸ್ಥೆಯ 75ನೇ ವಾರ್ಷಿಕೋತ್ಸವದ ಅಂಗವಾಗಿ ಅಂತಾರಾಷ್ಟ್ರೀಯ ಮತ್ತು ಪ್ರಾದೇಶಿಕ ವಿಷಯಗಳ ಬಗ್ಗೆ ಚರ್ಚೆ ನಡೆಸಲಿದ್ದಾರೆ.
ಕೋವಿಡ್-19ನಿಂದಾಗಿ ಉಂಟಾಗಿರುವ ಸಾಮಾಜಿಕ-ಆರ್ಥಿಕತೆ ಸ್ಥಿತಿ ಹಾಗೂ ಜಾಗತಿಕ ರಾಜಕೀಯ ಬಗ್ಗೆಯೂ ಮಾತುಕತೆ ಬರುವ ಸಾಧ್ಯತೆ ಇದೆ. 2020ರ ಕೊನೆಯ ವೇಳೆಗೆ ರಾಜ್ಯ ಮಂಡಳಿಗಳ ಸಭೆ ನಡೆಯಲಿದ್ದು, ಈ ಕುರಿತು ಅಂತಿಮ ತೀರ್ಮಾನ ಕೈಗೊಳ್ಳಲಿದ್ದಾರೆ.