ETV Bharat / international

'ತೈವಾನ್​ನಲ್ಲಿ ರಾಯಭಾರ ಕಚೇರಿ ತೆರೆಯದಂತೆ ಗಯಾನಾಗೆ ಚೀನಾ ಬೆದರಿಕೆ' - ತೈಪೆಯಲ್ಲಿ ರಾಯಭಾರ ಕಚೇರಿ

ತೈವಾನ್ ಚೀನಾದ ಒಂದು ಭಾಗವಾಗಿದೆ. ವಿಶ್ವದಲ್ಲಿ ಕೇವಲ ಒಂದು ಚೀನಾ ಮಾತ್ರವಿದೆ ಎಂದು ತಿರುಗೇಟು ನೀಡಿದ್ದರು. ಸಂಬಂಧಿತ ಪಕ್ಷವು ಒಂದೇ ಚೀನಾ ಎಂಬ ತತ್ವಕ್ಕೆ ಬದ್ಧವಾಗಿರಲಿದೆ ಎಂಬ ವಿಶ್ವಾಸವಿದೆ. ಈ ರೀತಿಯ ಒಪ್ಪಂದ, ವಿನಿಮಯದಿಂದ ದೂರವಿರಲಿದೆ ಎಂದು ತಿಳಿಸಿದ್ದಾರೆ.

taiwan-accuses-china-of-bullying-after-guyana-calls-off-deal
ಕಚೇರಿ ತೆರೆಯದಂತೆ ಗಯಾನಾಗೆ ಚೀನಾ ಬೆದರಿಕೆ ಒಡ್ಡಿದೆ ಎಂದು ಆರೋಪಿಸಿದ ತೈವಾನ್​​​
author img

By

Published : Feb 5, 2021, 5:16 PM IST

ತೈವಾನ್​​: ದಕ್ಷಿಣ ಅಮೆರಿಕಾದ ಪುಟ್ಟ ರಾಷ್ಟ್ರ ಗಯಾನಾ, ತೈಪೆಯಲ್ಲಿ ರಾಯಭಾರ ಕಚೇರಿ ತೆರೆಯಲು ಕುರಿತಾಗಿ ಒಪ್ಪಂದ ಮಾಡಿಕೊಳ್ಳುವ ವಿರುದ್ಧ ಚೀನಾ ಬೆದರಿಕೆ ಒಡ್ಡಿದ್ದು, ಇದೀಗ ಈ ಒಪ್ಪಂದ ಮುರಿದು ಬಿದ್ದಿದೆ ಎಂದು ತೈವಾನ್ ಚೀನಾ ವಿರುದ್ಧ ಆರೋಪಿಸಿದೆ.

ಈ ಕುರಿತು ಪ್ರತಿಕ್ರಿಯಿಸಿದ್ದ ಚೀನಾದ ವಿದೇಶಾಂಗ ವಕ್ತಾರ ವಾಂಗ್​​ ವೆನ್ಬಿನ್, ಗಯಾನಾ ತಮ್ಮ ತಪ್ಪನ್ನು ಸರಿಪಡಿಸಿಕೊಳ್ಳಲು ಕ್ರಮ ತೆಗೆದುಕೊಳ್ಳಬೇಕು ಎಂದು ಉತ್ತಾಯಿಸಿದ್ದರು.

ತೈವಾನ್ ಚೀನಾದ ಒಂದು ಭಾಗವಾಗಿದೆ, ವಿಶ್ವದಲ್ಲಿ ಕೇವಲ ಒಂದು ಚೀನಾ ಮಾತ್ರವಿದೆ ಎಂದು ತಿರುಗೇಟು ನೀಡಿದ್ದರು. ಸಂಬಂಧಿತ ಪಕ್ಷವು ಒಂದೇ ಚೀನಾ ಎಂಬ ತತ್ವಕ್ಕೆ ಬದ್ಧವಾಗಿರಲಿದೆ ಎಂಬ ವಿಶ್ವಾಸವಿದೆ. ಈ ರೀತಿಯ ಒಪ್ಪಂದ, ವಿನಿಮಯದಿಂದ ದೂರವಿರಲಿದೆ ಎಂದು ತಿಳಿಸಿದ್ದಾರೆ.

ಇದಕ್ಕೂ ಮೊದಲು ಗಯಾನಾದ​ನಲ್ಲಿ ಪ್ರತಿನಿಧಿ ಕಚೇರಿ ತೆರೆಯುವುದಾಗಿ ತೈವಾನ್ ಸಹ ಪ್ರಕಟಿಸಿತ್ತು. ಇದಾದ ಕೆಲವೇ ಗಂಟೆಗಳ ಬಳಿಕ ತೈವಾನ್​​​​ನಲ್ಲಿ ಯಾವುದೇ ಕಚೇರಿ ತೆರೆಯುವುದಿಲ್ಲ. ತೈವಾನ್​​​ನೊಂದಿಗೆ ಯಾವುದೇ ರಾಜತಾಂತ್ರಿಕ ಸಂಬಂಧ ಅಥವಾ ಒಪ್ಪಂದ ಸ್ಥಾಪಿಸಿಲ್ಲ ಎಂದು ಗಯಾನಾ ಸರ್ಕಾರ ಸ್ಪಷ್ಟಪಡಿಸಿತ್ತು.

ಈ ಹಠಾತ್ ಬದಲಾವಣೆಗೆ ಚೀನಾವೇ ಕಾರಣವಾಗಿದೆ. ತೈವಾನ್​​ನಲ್ಲಿ ಕಚೇರಿ ತೆರೆಯದಂತೆ ಗಯಾನಾ ಮೇಲೆ ಒತ್ತಡ ಹೇರಿ ಬೆದರಿಕೆ ಒಡ್ಡಿದೆ ಎಂದು ತೈವಾನ್ ಆರೋಪಿಸಿದೆ.

ಇದನ್ನೂ: ನಾರ್ವೆಯಲ್ಲಿ ಕಂಡು ಬಂದಿದ್ದ ರೂಪಾಂತರಿ ಕೊರೊನಾ ವೈರಸ್​ ಈಗ ಹಾಲೆಯಲ್ಲಿ ಪತ್ತೆ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.