ಕಾಬೂಲ್: ಅಫ್ಘಾನಿಸ್ತಾನದ ಅಧ್ಯಕ್ಷರ ಭವನದಲ್ಲಿ ಕಾರ್ಯ ನಿರ್ವಹಿಸುವ ಕನಿಷ್ಠ 20 ಉದ್ಯೋಗಳಲ್ಲಿ ಕೊರೊನಾ ಸೊಂಕು ಪತ್ತೆಯಾಗಿದೆ ಎಂದು ಹೆಸರೇಳಲು ಇಚ್ಛಿಸದ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಅಧ್ಯಕ್ಷ ಅಶ್ರಫ್ ಘನಿ ಅವರು ಯಾವುದಾದರು ಉದ್ಯೋಗಿಗಳೊಂದಿಗೆ ಸಂಪರ್ಕಕ್ಕೆ ಬಂದಿದ್ದರೋ ಅಥವಾ ಸ್ವತಃ ಪರೀಕ್ಷಿಸಲ್ಪಟ್ಟಿದ್ದಾರೆಯೇ ಎಂಬುದು ಸ್ಪಷ್ಟವಾಗಿಲ್ಲ. ಈ ಬಗ್ಗೆ ಪ್ರತಿಕ್ರಿಯಿಸಲು ಅಧ್ಯಕ್ಷೀಯ ಕಚೇರಿ ಅಧಿಕಾರಿಗಳು ನಿರಾಕರಿಸಿದೆ. ಸದ್ಯ ಘನಿ ಸೆಲ್ಫ್ ಕ್ವಾರೆಂಟೈನ್ಗೆ ಒಳಗಾಗಿರುವುದಾಗಿ ವರದಿಯಾಗಿದ್ದು, ಕೆಲ ಹಿರಿಯ ಅಧಿಕಾರಿಗಳನ್ನು ಮಾತ್ರ ಭೆಟಿಯಾಗುತ್ತಿದ್ದಾರೆ. ಕ್ಯಾನ್ಸರ್ನಿಂದ ಬದುಕುಳಿದಿರುವ 70 ವರ್ಷದ ಘನಿ ಆರೋಗ್ಯ ಅಪಾಯದಲ್ಲಿದೆ ಎಂದು ಪರಿಗಣಿಸಲ್ಪಟ್ಟಿದೆ.
ಕಳೆದ ಎರಡು ತಿಂಗಳಲ್ಲಿ 2 ಲಕ್ಷಕ್ಕೂ ಹೆಚ್ಚು ಆಫ್ಘನ್ನರು ಇರಾನ್‌ನಿಂದ ವಾಪಸ್ ಆದ್ದಾರೆ ಎಂದು ನಿರಾಶ್ರಿತರ ಚಲನವಲನವನ್ನು ಮೇಲ್ವಿಚಾರಣೆ ಮಾಡುವ ಅಂತಾರಾಷ್ಟ್ರೀಯ ವಲಸೆ ಕಚೇರಿ ಹೇಳಿದೆ. ಅಫ್ಘಾನಿಸ್ತಾನದಲ್ಲಿ ಇಲ್ಲಿಯವರೆಗೆ 993 ಕೊರೊನಾ ಪ್ರಕರಣಗಳು ವರದಿಯಾಗಿವೆ. ತವರಿಗೆ ಹಿಂದಿರುಗಿದ ಅನೇಕ ನಿರಾಶ್ರಿತರು ಪರೀಕ್ಷೆಯಿಲ್ಲದೆ ಅಫ್ಘಾನಿಸ್ತಾನದಾದ್ಯಂತ ಹರಡಿಕೊಂಡಿದ್ದಾರೆ. ಹೀಗಾಗಿ ಸೋಂಕಿತರ ಸಂಖ್ಯೆ ಹೆಚ್ಛಾಗುವ ಭೀತಿ ಎದುರಾಗಿದೆ.