ETV Bharat / international

ಮೋದಿ, ಟ್ರಂಪ್​, ಶಿಂಜೊ ನಡುವೆ ಮಾತುಕತೆ... ನಮೋ ಗೆಲುವಿಗೆ ನಾಯಕರ ಅಭಿನಂದನೆ - ಅಮೆರಿಕ

ಜಪಾನ್​​ನ ಒಸಾಕಾದಲ್ಲಿ ಜಿ-20 ಶೃಂಗಸಭೆ ನಡೆಯುತ್ತಿದ್ದು, ಪ್ರಧಾನಿ ನರೇಂದ್ರ ಮೋದಿ ಭಾಗಿಯಾಗಿದ್ದಾರೆ. ಈ ಮಧ್ಯೆ ಮೋದಿಯವರು ಅಮೆರಿಕ ಅಧ್ಯಕ್ಷ ಡೊನಾಲ್ಡ್​ ಟ್ರಂಪ್​, ಜಪಾನ್​ ಪ್ರಧಾನಿ ಶಿಂಜೊ ಅಬೆ ಅವರೊಂದಿಗೆ ಮಾತುಕತೆ ನಡೆಸಿದ್ರು.

ಮೋದಿ,ಟ್ರಂಪ್​,ಶಿಂಜೊ ನಡುವೆ ತ್ರಿಪಕ್ಷೀಯ ಮಾತು
author img

By

Published : Jun 28, 2019, 7:13 AM IST

Updated : Jun 28, 2019, 1:21 PM IST

ಒಸಾಕಾ(ಜಪಾನ್​): ಜಿ-20 ಶೃಂಗ ಸಭೆಯಲ್ಲಿ ಪಾಲ್ಗೊಳ್ಳಲು ಜಪಾನ್‌ ತಲುಪಿರುವ ಪ್ರಧಾನಿ ನರೇಂದ್ರ ಮೋದಿ ಅಮೆರಿಕ ಅಧ್ಯಕ್ಷ ಡೊನಾಲ್ಡ್​ ಟ್ರಂಪ್​, ಜಪಾನ್​ ಪ್ರಧಾನಿ ಶಿಂಜೊ ಅಬೆ ಜತೆ ಮಹತ್ವದ ಮಾತುಕತೆ ನಡೆಸಿದರು.

ಮೂವರು ಮುಖಂಡರು ಸೇರಿ ತ್ರಿಪಕ್ಷೀಯ ಮಾತುಕತೆ ನಡೆಸಿದ್ದು, ಪ್ರಮುಖವಾಗಿ ಇರಾನ್​, ದ್ವಿಪಕ್ಷೀಯ ಸಂಬಂಧ, ಇಂಧನ, ರಕ್ಷಣಾ ಕ್ಷೇತ್ರ ಸೇರಿದಂತೆ ಹಲವು ವಿಷಯಗಳ ಕುರಿತು ಮಾತನಾಡಿದ್ದಾರೆ. ಇದಕ್ಕೂ ಮುಂಚೆ ಲೋಕಸಭಾ ಚುನಾವಣೆಯಲ್ಲಿ ಅಭೂತಪೂರ್ವ ಗೆಲುವು ದಾಖಲಿಸಿರುವ ಪ್ರಧಾನಿ ಮೋದಿಗೆ ಉಭಯ ದೇಶದ ನಾಯಕರು ಅಭಿನಂದನೆ ಸಲ್ಲಿಸಿದರು.

ಮೋದಿ-ಟ್ರಂಪ್ ಮಾತುಕತೆ

ಈ ವೇಳೆ ತಾವು ಇರಾನ್​ ವಿಷಯ, 5ಜಿ, ದ್ವಿಪಕ್ಷೀಯ ಸಂಬಂಧ ಮತ್ತು ರಕ್ಷಣಾ ಸಂಬಂಧದ ಕುರಿತು ಟ್ರಂಪ್​ ಜೊತೆ ಮಾತನಾಡಿರುವುದಾಗಿ ತಿಳಿಸಿದ್ದಾರೆ.

ಬಳಿಕ ಮಾತನಾಡಿದ ಅಮೆರಿಕ ಅಧ್ಯಕ್ಷ ಡೊನಾಲ್ಡ್​​ ಟ್ರಂಪ್​ ಅವರು ಮೋದಿ ಗೆಲುವಿಗೆ ಅಭಿನಂದನೆ ಸಲ್ಲಿಸಿದ್ರು. ನೀವೂ ಈ ಗೆಲುವಿಗೆ ಅರ್ಹರು. ನಾವು ಯಾವಾಗಲೂ ನಿಮಗೆ ಉತ್ತಮ ಗೆಳೆಯರು. ಮುಂದಿನ ದಿನಗಳಲ್ಲಿ ಒಟ್ಟಾಗಿ ಕೆಲಸ ಮಾಡೋಣ ಎಂದು ಹೇಳಿದ್ದಾರೆ.

ಇದೇ ವೇಳೆ ಜಪಾನ್​ ಪ್ರಧಾನಿ ಶಿಂಜೊ ಅಬೆ ಅವರು ಸಹ ಮೋದಿ ಅಭೂತಪೂರ್ವ ಗೆಲುವಿಗೆ ಅಭಿನಂದನೆ ಸಲ್ಲಿಸಿದ್ದಾರೆ.

Intro:Body:

ಮೋದಿ,ಟ್ರಂಪ್​,ಶಿಂಜೊ ನಡುವೆ ತ್ರಿಪಕ್ಷೀಯ ಮಾತು... ನಮೋ ಗೆಲುವಿಗೆ ಅಭಿನಂದನೆ ಸಲ್ಲಿಸಿದ ನಾಯಕರು! 

ಒಸಾಕಾ(ಜಪಾನ್​): ಜಿ-20 ಶೃಂಗ ಸಭೆಯಲ್ಲಿ ಪಾಲ್ಗೊಳ್ಳಲು ಜಪಾನ್‌ಗೆ ಆಗಮಿಸಿರುವ ಪ್ರಧಾನಿ ನರೇಂದ್ರ ಮೋದಿ ಇಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್​ ಟ್ರಂಪ್​, ಜಪಾನ್​ ಪ್ರಧಾನಿ ಶಿಂಜೊ ಅಬೆ ಜತೆ ಮಾತುಕತೆ ನಡೆಸಿದರು. 

ಮೂವರು ಮುಖಂಡರು ಸೇರಿ ತ್ರಿಪಕ್ಷೀಯ ಮಾತುಕತೆ ನಡೆಸಿದ್ದು, ಪ್ರಮುಖವಾಗಿ ಇರಾನ್​,ದ್ವಿಪಕ್ಷೀಯ ಸಂಬಂಧ,ಇಂಧನ,ರಕ್ಷಣಾ ಕ್ಷೇತ್ರ ಸೇರಿದಂತೆ ಹಲವು ವಿಷಯಗಳ ಕುರಿತು ಮಾತನಾಡಿದ್ದಾರೆ. ಇದಕ್ಕೂ ಮುಂಚೆ ಲೋಕಸಭೆ ಚುನಾವಣೆಯಲ್ಲಿ ಅಭೂತಪೂರ್ವ ಗೆಲುವು ದಾಖಲು ಮಾಡಿರುವ ಪ್ರಧಾನಿ ಮೋದಿಗೆ ಉಭಯ ನಾಯಕರು ಅಭಿನಂದನೆ ಸಲ್ಲಿಕೆ ಮಾಡಿದರು. 

ಈ ವೇಳೆ ಮಾತನಾಡಿರುವ ಪ್ರಧಾನಿ ಮೋದಿ ತಾವು ಇರಾನ್​,5ಜಿ, ದ್ವಿಪಕ್ಷೀಯ ಸಂಬಂಧ ಹಾಗೂ ರಕ್ಷಣಾ ಸಂಬಂಧದ ಬಗ್ಗೆ ಮಾತನಾಡಿರುವುದಾಗಿ ತಿಳಿಸಿದ್ದಾರೆ. 

ಮೋದಿ ಗೆಲುವಿಗೆ ಅಭಿನಂದನೆ ಸಲ್ಲಿಕೆ ಮಾಡಿದ ಟ್ರಂಪ್​, ನೀವೂ ಈ ಗೆಲುವಿಗೆ ಅರ್ಹರು. ನಾವು ಯಾವಾಗಲೂ ಉತ್ತಮ ಗೆಳೆಯರು. ಮುಂದಿನ ದಿನಗಳಲ್ಲಿ ಒಟ್ಟಾಗಿ ಕೆಲಸ ಮಾಡೋಣ ಎಂದು ಹೇಳಿದ್ದಾರೆ. 

Conclusion:
Last Updated : Jun 28, 2019, 1:21 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.