ETV Bharat / international

ಯುಕೆಯಿಂದ ನವಾಜ್​​ ಷರೀಪ್​​ ಕರೆತರಲು ಮುಂದಾದ ಇಮ್ರಾನ್​ ಖಾನ್​!

ಭ್ರಷ್ಟಾಚಾರ ಪ್ರಕರಣದಲ್ಲಿ ಭಾಗಿಯಾಗಿ ಸದ್ಯ ಲಂಡನ್​​ನಲ್ಲಿ ಚಿಕಿತ್ಸೆ ಪಡೆದುಕೊಳ್ಳುತ್ತಿರುವ ಪಾಕ್​ ಮಾಜಿ ಪ್ರಧಾನಿ ನವಾಜ್​ ಷರೀಪ್​ ಕರೆತರಲು ಇದೀಗ ಇಮ್ರಾನ್​ ಖಾನ್​​ ಯೋಜನೆ ರೂಪಿಸಿದ್ದಾರೆ.

Imran Khan
Imran Khan
author img

By

Published : Sep 30, 2020, 9:18 PM IST

ಇಸ್ಲಾಮಾಬಾದ್​​​: ವೈದ್ಯಕೀಯ ಕಾರಣ ಹೇಳಿ 2019ರಲ್ಲಿ ಲಂಡನ್​​ನಲ್ಲಿ ಉಳಿದುಕೊಂಡಿರುವ ಪಾಕ್​ ಮಾಜಿ ಪ್ರಧಾನಿ ನವಾಜ್​ ಷರೀಫ್​​ ಕರೆತರಲು ಇದೀಗ ಪಾಕ್​ ಪ್ರಧಾನಿ ಇಮ್ರಾನ್​ ಖಾನ್​ ಮುಂದಾಗಿದ್ದಾರೆ.

ಮಾಜಿ ಪ್ರಧಾನಿ ವಿರುದ್ಧ ಭ್ರಷ್ಟಾಚಾರ ಆರೋಪಕ್ಕೆ ಸಂಬಂಧಿಸಿದಂತೆ ವಿವಿಧ ಪ್ರಕರಣ ದಾಖಲಾಗಿರುವ ಕಾರಣ ಈಗಾಗಲೇ ಅಧಿಕಾರಿಗಳ ಜತೆ ಇಮ್ರಾನ್​ ಖಾನ್​ ಮಾತನಾಡಿದ್ದಾಗಿ ತಿಳಿದು ಬಂದಿದೆ.

ಮಂಗಳವಾರ ನಡೆದ ಕ್ಯಾಬಿನೆಟ್​​ ಸಭೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದೆ ಎಂದು ಅಲ್ಲಿನ ಸುದ್ದಿ ಪತ್ರಿಕೆ ವರದಿ ಮಾಡಿದ್ದು, ಹೊಸದಾಗಿ ಬ್ರಿಟಿಷ್​ ಸರ್ಕಾರಕ್ಕೆ ಮನವಿ ಕಳುಹಿಸಲು ಮುಂದಾಗಿದೆ. ಈ ಹಿಂದೆ ನವಾಜ್​ ಷರೀಫ್​ ಅವರನ್ನ ವಾಪಸ್ ಕಳುಹಿಸುವಂತೆ ಮನವಿ ಸಲ್ಲಿಕೆ ಮಾಡಲಾಗಿತ್ತು.

ಸೆಪ್ಟೆಂಬರ್​​ 15ರಂದು ಇಸ್ಲಾಮಾಬಾದ್​ ಹೈಕೋರ್ಟ್​​ ಷರೀಪ್​ಗೆ ಜಾಮೀನು ರಹಿತ ಅರೆಸ್ಟ್​ ವಾರಂಟ್​​​​​​​​ ಹೊರಡಿಸಿದ್ದು, ಅವರು ಕೋರ್ಟ್​​ ಮುಂದೆ ಶರಣಾಗಲು ವಿಫಲರಾಗಿದ್ದಾರೆ. ಭ್ರಷ್ಟಾಚಾರ, ಅಕ್ರಮ ಭೂ ಹಂಚಿಕೆ, ಅಕ್ರಮ ಹಣ ವರ್ಗಾವಣೆ ಸೇರಿ ವಿವಿಧ ಪ್ರಕರಣಗಳಲ್ಲಿ ನವಾಜ್​ ಷರೀಫ್​ ಭಾಗಿಯಾಗಿರುವ ಆರೋಪವಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.