ETV Bharat / international

ಗಡಿಗೆ ಬಂದ ಪಾಕಿಸ್ತಾನದ ಡ್ರೋನ್‌: ಗುಂಡಿನ ದಾಳಿ ನಡೆಸಿ ಹಿಮ್ಮೆಟ್ಟಿಸಿದ ಭದ್ರತಾ ಪಡೆ - ಭಾರತ-ಪಾಕಿಸ್ತಾನ ಗಡಿ

ಗಡಿಯಲ್ಲಿ ಪಾಕ್‌ ಪುಂಡಾಟ ಮುಂದುವರೆದಿದ್ದು, ಪಾಕಿಸ್ತಾನಕ್ಕೆ ಸೇರಿದ ಡ್ರೋನ್ ಭಾರತದ ವಾಯುಪ್ರದೇಶವನ್ನು ಪ್ರವೇಶಿಸಿರುವ ಘಟನೆ ಪಂಜಾಬ್‌ನ ಅಮೃತಸರ ಜಿಲ್ಲೆಯಲ್ಲಿ ನಡೆದಿದೆ. ಕೂಡಲೇ ಭದ್ರತಾ ಪಡೆಗಳು ಗುಂಡಿನ ದಾಳಿ ಮೂಲಕ ಡ್ರೋನ್‌ ಅನ್ನು ಹಿಮ್ಮೆಟ್ಟಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

another pakistani drone spotted in amritsar punjab
ಭಾರತದ ಗಡಿಗೆ ಬಂದ ಪಾಕಿಸ್ತಾನದ ಡ್ರೋನ್‌; ಗುಂಡಿನ ದಾಳಿ ನಡೆಸಿ ಹಿಮ್ಮೆಟ್ಟಿಸಿದ ಭದ್ರತಾ ಪಡೆ
author img

By

Published : Nov 18, 2021, 6:17 AM IST

ಅಮೃತಸರ: ಭಾರತದ ಗಡಿ ನಿಯಂತ್ರಣ ರೇಖೆ ಬಳಿ (India-Pak border) ಬಂದಿದ್ದ ಪಾಕಿಸ್ತಾನಕ್ಕೆ ಸೇರಿದ ಡ್ರೋನ್‌ ಅನ್ನು ಗುಂಡಿನ ದಾಳಿ ಮೂಲಕ ಭದ್ರತಾ ಪಡೆಗಳು ಹಿಮ್ಮೆಟ್ಟಿಸಿರುವ ಘಟನೆ ಪಂಜಾಬ್‌ನ ಅಮೃತಸರ ಜಿಲ್ಲೆಯಲ್ಲಿ ನಡೆದಿದೆ.

ಭಾರತ - ಪಾಕ್‌ ಗಡಿಯಲ್ಲಿ ಡ್ರೋನ್‌ ಕಾಣಿಸಿಕೊಳ್ಳುತ್ತಿದ್ದಂತೆ (drone spotted) ಭದ್ರತಾ ಸಿಬ್ಬಂದಿ ಗುಂಡು ಹಾರಿಸಿದ್ದಾರೆ. ಆಗ ಪಾಕಿಸ್ತಾನದತ್ತ ಡ್ರೋನ್‌ ವಾಪಸ್‌ ಹೋಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಅಮೃತಸರ ಜಿಲ್ಲೆಯ ಬಿಂದಿ ಸೈದನ್ ಗ್ರಾಮದಲ್ಲಿ ಭದ್ರತಾ ಸಿಬ್ಬಂದಿ ಈ ಡ್ರೋನ್ ಅನ್ನು ಗುರುತಿಸಿದ್ದಾರೆ. ಭಾರತದ ಭೂಪ್ರದೇಶಕ್ಕೆ ಪ್ರವೇಶಿಸಿದ್ದ ಡ್ರೋನ್ ಸ್ಫೋಟಕಗಳನ್ನು ನೆಲಕ್ಕೆ ಹಾಕಿದೆಯೇ ಎಂದು ಪಂಜಾಬ್ ಪೊಲೀಸರು ಮತ್ತು ಭದ್ರತಾ ಸಿಬ್ಬಂದಿ ಪರಿಶೀಲನೆ ನಡೆಸಿದ್ದಾರೆ.

ಈ ಹಿಂದೆ ಪಂಜಾಬ್‌ನ ಭಾರತ - ಪಾಕಿಸ್ತಾನ ಗಡಿಯಲ್ಲಿ (Ind Pak border) ಡ್ರೋನ್‌ಗಳು ಪತ್ತೆಯಾಗಿದ್ದವು. ಕಳೆದ ಕೆಲವು ತಿಂಗಳುಗಳಿಂದ ಗಡಿಯಾದ್ಯಂತ ಡ್ರೋನ್ ದಾಳಿಗಳ ಕುರಿತು ಅಧಿಕಾರಿಗಳು ಹೈ ಅಲರ್ಟ್ ಘೋಷಿಸಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.