ಕಾಬೂಲ್ (ಅಫ್ಘಾನಿಸ್ತಾನ): ಘಜ್ನಿ ನಗರದ ನಾ ಅಬಾದ್ ಪ್ರದೇಶದಲ್ಲಿ ಮೂರು ಶೆಲ್ಗಳು ಸಿಡಿದಿದ್ದು, ಎಂಟು ನಾಗರಿಕರು ಸಾವನ್ನಪ್ಪಿ, ಏಳು ಮಂದಿ ಗಾಯಗೊಂಡಿದ್ದಾರೆ ಎಂದು ಅಲ್ಲಿನ ಸುದ್ದಿ ಸಂಸ್ಥೆ ವರದಿ ಮಾಡಿದೆ.
ಈ ಕುರಿತು ಪ್ರಾಂತೀಯ ಪೊಲೀಸ್ ವಕ್ತಾರ ವಾಹಿದುಲ್ಲಾ ಜುಮಾ ಮಾಹಿತಿ ನೀಡಿದ್ದಾರೆ ಎಂದು ವರದಿಯಾಗಿದೆ. ಇದಕ್ಕೂ ಮೊದಲು ಬಡ್ಘೀಸ್ ಪ್ರಾಂತ್ಯದಲ್ಲಿ ಬಾಂಬ್ ಸ್ಫೋಟ ಸಂಭವಿಸಿದ್ದು, ಇಬ್ಬರು ನಾಗರಿಕರು ಸಾವನ್ನಪ್ಪಿದ್ದಾರೆ ಎಂದು ವರದಿಯಾಗಿತ್ತು.
ಅದಾದ ನಂತರ ಕಂದಹಾರ್‌ನ ಭದ್ರತಾ ಹೊರಠಾಣೆ ಬಳಿ ಕಾರ್ ಬಾಂಬ್ ಸ್ಫೋಟ ಸಂಭವಿಸಿತ್ತು. ಈ ವೇಳೆ ಯಾವುದೇ ಸಾವು ನೋವಿನ ವರದಿಯಾಗಿಲ್ಲ.