ETV Bharat / international

ಎಂಥಾ ಘಟಿವಾಣಿ ಈ ಈಜ್ಜಿ.. ಹೃದಯ ಎಲ್ಲಿರಬೇಕೋ ಅಲ್ಲಿರದಿದ್ರೂ 99 ವರ್ಷ ಬದುಕಿದಳು!

ವೈದ್ಯಲೋಕಕ್ಕೆ ಅಚ್ಚರಿ, ವೈದ್ಯರಿಗೇ ಇದೊಂದು ಸವಾಲು. ಹೃದಯ ಎದೆಯ ಎಡಕ್ಕೆ ಇರುವ ಜಾಗದಲ್ಲಿರಲಿಲ್ಲ. ಆದರೂ ಅಜ್ಜಿ 99 ವರ್ಷ ಬದುಕಿದ್ದಳು.

ಸಾಂದರ್ಭಿಕ ಚಿತ್ರ: ಕೃಪೆ ಟ್ವಿಟರ್
author img

By

Published : Apr 11, 2019, 4:58 PM IST

ಮೊಲಲ್ಲಾ, (ಅಮೆರಿಕ) : ತಂತ್ರಜ್ಞಾನ ಎಷ್ಟೇ ಮುಂದುವರೆದಿದ್ದರೂ ಈಗಲೂ ವೈದ್ಯಲೋಕವೇ ಅಚ್ಚರಿಗೊಳ್ಳುವಂತ ಸಂಗತಿಗಳು ಆಗಾಗ ಬೆಳಕಿಗೆ ಬರ್ತಿರುತ್ತವೆ. ಇಲ್ಲೊಬ್ಬ ಅಜ್ಜಿಗೆ ಹೃದಯ ಇರುವ ಜಾಗದಲ್ಲಿರದಿದ್ರೂ ಭರ್ತಿ 99 ವರ್ಷ ಬದುಕಿ ಇಡೀ ವೈದ್ಯಲೋಕವೇ ಅಚ್ಚರಿಗೊಳ್ಳುವಂತೆ ಮಾಡಿದ್ದಾಳೆ.

ರೋಸ್‌ ಮರಿಯಾ ಬೆಂಟ್ಲೇ. ಅಮೆರಿಕಾದ ದಕ್ಷಿಣ ಪೋರ್ಟಲ್ಯಾಂಡ್‌ನಿಂದ 40 ಕಿ.ಮೀ ದೂರದ ಮೊಲಲ್ಲಾ ನಿವಾಸಿಯಾಗಿದ್ದರು. ಅಜ್ಜಿ ಶತಕಕ್ಕೆ ಇನ್ನೊಂದು ವರ್ಷ ಬಾಕಿಯಿತ್ತು. ಆದರೆ, ಅಷ್ಟೊತ್ತಿಗಾಗಲೇ ದೇವರ ಪಾದ ಸೇರಿದ್ದಳು. ಇರುವರೆಗೂ ಜಮ್‌ ಅಂತಾ ಬದುಕಿದ್ದಳು ಬೆಂಟ್ಲೇ. ಬಾಲ್ಯದಲ್ಲಿ ನೀರು ಕಂಡ್ರೇ ಸಾಕು ಈಜುತಿದ್ದಳಂತೆ. ಊಟಬಿಟ್ಟರೂ ಘಾಟಿ ಮುದುಕಿ ಈಜು ಬಿಡ್ತಿರಲಿಲ್ವಂತೆ. ಈಕೆ ಸತ್ತ ಮೇಲೆ ದೇಹವನ್ನ ವೈದ್ಯಕೀಯ ಕಾಲೇಜಿಗೆ ಹಸ್ತಾಂತರಿಸಲಾಗಿತ್ತು.

ಎಲ್ಲ ಅಂಗ ಸರಿಯಿದ್ದವು, ಹೃದಯ ಆ ಜಾಗದಲ್ಲಿರಲಿಲ್ಲ:

ಓರೇಗಾನ್ ಆರೋಗ್ಯ ಮತ್ತು ವಿಜ್ಞಾನ ವಿಶ್ವವಿದ್ಯಾಲಯದಲ್ಲಿ ವೈದ್ಯಕೀಯ ವಿದ್ಯಾರ್ಥಿಗಳ ಅಧ್ಯಯನಕ್ಕೆಂದೇ ದೇಹದಾನ ಮಾಡಲಾಗಿತ್ತು. ಒಂದು ದಿನ ಅಜ್ಜಿಯ ಮೃತದೇಹ ಪರೀಕ್ಷೆ ನಡೆಸಿದ್ದ ವೈದ್ಯಕೀಯ ವಿದ್ಯಾರ್ಥಿಗೆ ಅಚ್ಚರಿ ಅಂಶ ಕಾಣಿಸಿತ್ತು. ಆ ದೇಹದಲ್ಲಿ ಎಲ್ಲಾ ಅಂಗಾಂಗಗಳೂ ಸರಿಯಿದ್ದವು. ಆದರೆ, ಹೃದಯ ಎದೆಯ ಎಡಕ್ಕೆ ಇರುವ ಜಾಗದಲ್ಲಿರಲಿಲ್ಲ. ಇಂಟ್ರೆಸ್ಟಿಂಗ್ ಏನ್ ಗೊತ್ತಾ.. ಅಷ್ಟಾದರೂ ಅಜ್ಜಿ 99 ವರ್ಷ ಬದುಕಿದ್ದಳಂತೆ.

ಈ ರೀತಿ ಸಮಸ್ಯೆಯಿರುವ ವ್ಯಕ್ತಿಗೆ ಗಂಭೀರ ಸಮಸ್ಯೆಗಳು :

ಓರೇಗಾನ್ ಆರೋಗ್ಯ ಮತ್ತು ವಿಜ್ಞಾನ ವಿಶ್ವವಿದ್ಯಾಲಯದಲ್ಲಿ ಅಂಗರಚನಾಶಾಸ್ತ್ರಜ್ಞರು(anatomists) ಸಮಾವೇಶ ನಡೀತು. ಇದೇ ವಿಚಾರವಾಗಿ ಸಾಕಷ್ಟು ಚರ್ಚೆ, ಸಂವಾದ ನಡೆದವು. ಅಜ್ಜಿ ಇಷ್ಟೊಂದು ವರ್ಷ ಬದುಕಿದ್ಹೇಗೆ ಅಂತಾ ಅಚ್ಚರಿ ವ್ಯಕ್ತಪಡಿಸಿದರು. ವೈದ್ಯಕೀಯ ಸಂಶೋಧಕರಿಗೆ ಅಜ್ಜಿ ಜೀವನ ಅಚ್ಚರಿ ತರಿಸಿತ್ತು. ಈ ರೀತಿ ಹೃದಯ ಸರಿ ಜಾಗದಲ್ಲಿರದ ಸ್ಥಿತಿಗೆ ಲೆವೊಕಾರ್ಡಿಯಾ ಅಂತಾರೆ. ಇದರಿಂದ ತುಂಬಾ ಗಂಭೀರ ಹೃದಯ ಕಾಯಿಲೆಗಳು ಮತ್ತು ಎಲ್ಲರಿಗಿಂತ ಆ ವ್ಯಕ್ತಿ ಅಸಹಜವಾಗಿರುತ್ತಾರೆ.

ಅಸಮಾನ್ಯ ರಕ್ತನಾಳಗಳೇ ಅಜ್ಜಿಗೆ ಜೀವಿಸಲು ಕಾರಣ :

ಪೋರ್ಟಲ್ಯಾಂಡ್‌ ವಿವಿ ಪ್ರೊ. ಕ್ಯಾಮರೂನ್‌ ವಾಲ್ಕರ್ ಅಜ್ಜಿ ಮೃತದೇಹ ಪರೀಕ್ಷಿಸಿದಾಗ, ತುಂಬಾ ವಿಶಿಷ್ಠ ರಕ್ತನಾಳ ಕಂಡು ಬಂದಿವು. ಕಿಬ್ಬೊಟ್ಟೆ ಕುಳಿ ತೆರೆದಾಗ ಅದು ಹಾನಿಯಾಗಿತ್ತು. ಬೇರೆ ಅಂಗಗಳೂ ತಪ್ಪಾದ ಜಾಗದಲ್ಲಿದ್ದವು. ಆದರೆ, ಅಸಾಮಾನ್ಯ ರಕ್ತನಾಳಗಳು ಹೃದಯ ಕ್ಷಮತೆಯಿಂದಿರಿಸಿದ್ದವು. 'ಇದು ನಿಜಕ್ಕೂ ಕೌತುಕ ಹುಟ್ಟಿಸುವ ವಿಷಯ. ಆಕರ್ಷಣೆಯುಳ್ಳ ಮತ್ತು ವೈದ್ಯಕೀಯ ನಿಗೂಢ ಹೇಳಬಹುದು. ನಮ್ಮ ಮುಂದೆ ನಡೆದ ವೈದ್ಯ ವಿಸ್ಮಯ. ನನಗಾದ ಅನುಭವ ವಿದ್ಯಾರ್ಥಿಗಳ ಜತೆಗೂ ಹಂಚಿಕೊಂಡಿರುವೆ. ಮುಂದೆ ಚಿಕಿತ್ಸೆ ನೀಡುವ ವೈದ್ಯರಿಗಿದು ತುಂಬಾ ಮಹತ್ವದ ಕೇಸ್‌. ಈ ಬಗ್ಗೆ ಮುಂದಿನ ಪೀಳಿಗೆ ವೈದ್ಯರೂ ತಿಳಿಯಲು ಸಹಾಯಕವಾಗಲಿದೆ. ಶರೀರರಚನಾಶಾಸ್ತ್ರದ ಏರಿಳಿತ ಗಮನಿಸಲು ಮತ್ತು ಭವಿಷ್ಯದಲ್ಲಿ ರೋಗಿಗಳಿಗೆ ಚಿಕಿತ್ಸೆ ನೀಡಲು, ಅವರಿಗೆ ತಿಳಿವಳಿಕೆ ಕೊಡಲು ನೆರವಾಗಲಿದೆ ಅಂತಾ ಪ್ರೊ. ವಾಲ್ಕರ್ ಹೇಳಿದ್ದಾರೆ.

26 ವರ್ಷ ಹೆಚ್ಚುವರಿಯಾಗಿ ಬದುಕಿದಳು ಅಮೆರಿಕ ಅಜ್ಜಿ:

ಹೃದಯ ಎದೆಯ ಎಡಭಾಗದಲ್ಲಿರದೇ ಬಲಕ್ಕಿದ್ರೇ ಆ ವ್ಯಕ್ತಿ ಎಷ್ಟು ವರ್ಷ ಬದುಕಲು ಸಾಧ್ಯ ಅನ್ನೋ ಅಧ್ಯಯನ ನಡೆದಿದೆ. ಬೈಂಟ್ಲೇ ರೀತಿ ವ್ಯಕ್ತಿ ಹೆಚ್ಚೆಂದ್ರೇ 73 ವರ್ಷ ಬದುಕಿದ್ದಾರೆ. ಆದರೆ, ಅಜ್ಜಿ ಮಾತ್ರ 26 ವರ್ಷ ಹೆಚ್ಚುವರಿ ಬದುಕಿದ್ದಾರೆ. ದಕ್ಷಿಣ ಪೋರ್ಟಲ್ಯಾಂಡ್‌ನಿಂದ 40 ಕಿ.ಮೀ ದೂರದ ಮೊಲಲ್ಲಾ ಎಂಬಲ್ಲಿ ಅಜ್ಜಿ ವಾಸವಿದ್ದರು. ನನ್ನ ತಾಯಿ ಇರುವಷ್ಟು ದಿನ ತುಂಬಾ ಆರೋಗ್ಯವಾಗಿದ್ದಳು. ಗರ್ಭಾಶಯ ವಿಚ್ಛೇದನ ಶಸ್ತ್ರಚಿಕಿತ್ಸೆಗೊಳಪಟ್ಟಿದ್ದರು. ಸಾವಿನ ಬಳಿಕ ವೈದ್ಯಕೀಯ ಅಧ್ಯಯನಕ್ಕಾಗಿ ದೇಹದಾನ ಮಾಡಲು ಹೇಳಿದ್ದರಂತೆ ಅಜ್ಜಿ. ಇದನ್ನ ಅಜ್ಜಿಯ ಪುತ್ರಿ ಲ್ಯೂಯಿಸ್ ಆಲ್ಲೀ ನೆನಪು ಮಾಡಿಕೊಂಡಿದ್ದಾರೆ. ಬೆಂಟ್ಲೇ ಪತಿ ಜೇಮ್ಸ್‌ 15 ವರ್ಷದ ಹಿಂದೆಯೇ ಕೊನೆಯುಸಿರೆಳೆದಿದ್ದಾರೆ.

Intro:Body:

US Woman Miraculously Lived For 99 Years Despite Having Her Heart On The Wrong Side

Facebook_Top

ವೈದ್ಯಲೋಕಕ್ಕೆ ಅಚ್ಚರಿ, ವೈದ್ಯರಿಗೇ ಇದೊಂದು ಸವಾಲು..

Conclusion:
ETV Bharat Logo

Copyright © 2024 Ushodaya Enterprises Pvt. Ltd., All Rights Reserved.