ವಾಷಿಂಗ್ಟನ್ (ಅಮೆರಿಕ): ಅಮೆರಿಕದಲ್ಲಿ ಹೆಚ್1-ಬಿ ವೀಸಾದಡಿಯಲ್ಲಿ ನೆಲೆಸಿರುವ ಭಾರತೀಯರಿಗೆ ಶುಭಸುದ್ದಿ ಸಿಕ್ಕಿದೆ. ಯುಎಸ್ ಸೆನೆಟ್ ಬುಧವಾರ ಹೈ-ಸ್ಕಿಲ್ಡ್ ಇಮಿಗ್ರಂಟ್ಸ್ ಫಾರ್ ಫೇರ್ನೆಸ್ ಆ್ಯಕ್ಟ್ ಅಥವಾ ಎಸ್.386 ಆ್ಯಕ್ಟ್ ಅನ್ನು ಅಂಗೀಕರಿಸಿದೆ. ಇದರಿಂದಾಗಿ ಐಟಿ ಉದ್ಯೋಗಿಗಳು ಅಮೆರಿಕದಲ್ಲಿ ನೆಲೆಸಲು ಇನ್ನಷ್ಟು ಸೌಲಭ್ಯ ದೊರೆಯಲಿದೆ. ಈ ಕಾಯ್ದೆಯನ್ವಯ ಅಮೆರಿಕದ ಖಾಯಂ ಸದಸ್ಯತ್ವ ಪಡೆಯುವಲ್ಲಿ ಹೊಂದಬೇಕಿದ್ದ ಗ್ರೀನ್ ಕಾರ್ಡ್ ಪಡೆಯುವುದು ಇನ್ನಷ್ಟು ಸುಲಭವಾಗಲಿದೆ.
ಉದ್ಯೋಗ ಆಧಾರಿತ ಗ್ರೀನ್ ಕಾರ್ಡ್ ಮೇಲೆ ದೇಶದ ನಾಗರೀಕತ್ವ ಪಡೆಯುವ ಸೌಲಭ್ಯವನ್ನು ಈ ಕಾಯ್ದೆ ತೆಗೆದುಹಾಕಲಿದೆ. ಈ ಕಾಯ್ದೆಯು ವಲಸೆ ವೀಸಾದಡಿ ಬಂದು ನೆಲೆಸಿರುವ ಕುಟುಂಬಸ್ಥರ ಸಂಖ್ಯೆಯನ್ನು ಶೇ.7ರಿಂದ 15ರಷ್ಟು ಹೆಚ್ಚಿಸಲಿದೆ.
ಅಮೆರಿಕದ ಪೌರತ್ವ ಮತ್ತು ವಲಸೆ ಸೇವೆಗಳ ಅಂಕಿ ಅಂಶದ ಪ್ರಕಾರ ಏಪ್ರಿಲ್ 2020ರ ವರೆಗೆ ಉದ್ಯೋಗ ಆಧಾರಿತ ಹಸಿರು ಕಾರ್ಡ್ ಪಡೆಯಲು 8 ಲಕ್ಷ ಭಾರತೀಯರು ಕಾದಿದ್ದಾರೆ. ಅಲ್ಲದೆ ವಾರ್ಷಿಕವಾಗಿ ಯುಎಸ್ 1,40,000 ಹಸಿರು ಕಾರ್ಡ್ಗಳನ್ನು ವಿತರಿಸುತ್ತಿದೆ.
ಉಭಯ ಸದನಗಳ ಪ್ರತಿನಿಧಿಗಳು ಭಿನ್ನಾಭಿಪ್ರಾಯಗಳನ್ನು ಬಗೆಹರಿಸಿ ಅದನ್ನು ಸಮನ್ವಯಗೊಳಿಸಬೇಕಾಗುತ್ತದೆ ಮತ್ತು ಆಗ ಮಾತ್ರ ಅದನ್ನು ಉಭಯ ಸದನಗಳು ಅಂಗೀಕರಿಸುತ್ತವೆ. ಮಸೂದೆಯ ಅಂತಿಮ ಅನುಮೋದನೆ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಸಹಿ ಮಾಡಬೇಕಿದೆ. ಅಧ್ಯಕ್ಷರು ಮಸೂದೆಗೆ ಸಹಿ ಹಾಕುತ್ತಾರೆಯೇ ಅಥವಾ ವೀಟೋ ಅಧಿಕಾರದ ಮೂಲಕ ಕಾಯ್ದೆ ಅಂಗೀಕರಿಸಲ್ಪಡುತ್ತದೆಯೇ ಎಂಬುದನ್ನು ಶ್ವೇತಭವನ ಇನ್ನೂ ಸ್ಪಷ್ಟಪಡಿಸಿಲ್ಲ.
ಇದಕ್ಕೂ ಮೊದಲು ಅಮೆರಿಕ ಅಧ್ಯಕ್ಷೀಯ ಚುನಾಣೆಯಲ್ಲಿ ಡೆಮಾಕ್ರಟಿಕ್ ಅಭ್ಯರ್ಥಿ ಜೋ ಬೈಡನ್ ಅವರು ಗೆಲುವು ಸಾಧಿಸಿ ಅಧಿಕಾರಕ್ಕೆ ಬಂದರೆ, ಭಾರತೀಯರು ಸುಲಭವಾಗಿ ಅಮೆರಿಕದ ಕಾಯಂ ಸದಸ್ಯತ್ವ ಪಡೆಯಲು ನೆರವಾಗಲಿದ್ದಾರೆ ಎಂದು ವಿಮರ್ಶಿಸಲಾಗಿತ್ತು.
ಹೆಚ್-1ಬಿ ವೀಸಾ ಅಡಿಯಲ್ಲಿ ಅಮೆರಿಕದಲ್ಲಿ ಕಾರ್ಯನಿರ್ವಹಿಸುತ್ತಿರುವ ವೃತ್ತಿಪರರು, 'ಗ್ರೀನ್ ಕಾರ್ಡ್' ಅಥವಾ ಕಾಯಂ ನಿವಾಸಿ ಸ್ಥಾನಮಾನ ಪಡೆಯಬೇಕೆಂದರೆ ದಶಕಗಳ ಕಾಲ ಕಾಯಬೇಕಾಗಿತ್ತು. ಅಲ್ಲದೆ ಡೊನಾಲ್ಡ್ ಟ್ರಂಪ್ ಅಮರಿಕನ್ನರಿಗೆ ಉದ್ಯೋಗವಕಾಶ ಕಲ್ಪಿಸುವ ಉದ್ದೇಶದಿಂದ ಗರಿಷ್ಠ ವೇತನ ನೀತಿ ಜಾರಿ ಮಾಡಿ, ಗರಿಷ್ಠ ವೇತನ ಪಡೆಯುವ ವಲಸಿಗರಿಗೆ ಮಾತ್ರ ಗ್ರೀನ್ ಕಾರ್ಡ್ ಸೌಲಭ್ಯಕ್ಕೆ ಮುಂದಾಗಿದ್ದರು.