ನ್ಯೂಯಾರ್ಕ್(ಅಮೆರಿಕ): ಔಷಧ ಕಂಪನಿಗಳಾದ ಫೈಜರ್ ಮತ್ತು ಬಯೋ-ಎನ್‌ಟೆಕ್, ಆರು ತಿಂಗಳಿಂದ ನಾಲ್ಕು ವರ್ಷದೊಳಗಿನ ಮಕ್ಕಳಿಗೆ COVID-19 ಲಸಿಕೆ ನೀಡಲು ತುರ್ತು ಅನುಮತಿ ಕೋರಿ ಅರ್ಜಿ ಸಲ್ಲಿವೆ.
ಅಮೆರಿಕದ ಫುಡ್ ಅಂಡ್ ಡ್ರಗ್ ಅಡ್ಮಿನಿಸ್ಟ್ರೇಷನ್ (ಎಫ್‌ಡಿಎ)ಯ ವಿನಂತಿ ಮೆರೆಗೆ ಫೈಜರ್ - ಬಯೋಎನ್‌ಟೆಕ್ ಕಂಪನಿಗಳು COVID-19 ಲಸಿಕೆಯ ತುರ್ತು ಬಳಕೆಯ ಅಧಿಕಾರ (ಇಯುಎ) ಪಡೆಯಲು ಬೇಕಾದ ಪ್ರಕ್ರಿಯೆಯನ್ನು ಪ್ರಾರಂಭಿಸಿವೆ.
ಒಂದೊಮ್ಮೆ ಅಮೆರಿಕದ ಔಷಧ ನಿಯಂತ್ರಣ ಮಂಡಳಿ ದೃಢೀಕರಣ ನೀಡಿದರೆ, ಫೈಜರ್- ಬಯೋ ಎನ್‌ಟೆಕ್ ಲಸಿಕೆಯು 5 ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳಿಗೆ ನೀಡಲು ಸಿದ್ಧವಾದ ಮೊದಲ COVID-19 ಲಸಿಕೆಯಾಗಲಿದೆ. ಮುಂದಿನ ದಿನಗಳಲ್ಲಿ EUA ಸಲ್ಲಿಕೆ ಪೂರ್ಣಗೊಳ್ಳುವ ನಿರೀಕ್ಷೆಯಿದೆ ಎಂದು ಫೈಜರ್ ಮತ್ತು ಬಯೋಎನ್‌ಟೆಕ್ ಹೇಳಿಕೊಂಡಿವೆ.
ಆಸ್ಪತ್ರೆ ಸೇರುವ ಮಕ್ಕಳ ಸಂಖ್ಯೆಯಲ್ಲಿ ಹೆಚ್ಚಳ
COVID-19 ಕಾರಣದಿಂದಾಗಿ 5 ವರ್ಷದೊಳಗಿನ ಮಕ್ಕಳು ಆಸ್ಪತ್ರೆಗೆ ದಾಖಲು ಹೆಚ್ಚಾಗುತ್ತಿದ್ದು, ಮಕ್ಕಳ ರಕ್ಷಣೆ ದೊಡ್ಡ ಸಮಸ್ಯೆಯಾಗಿ ಪರಿಣಮಿಸಿದೆ. ವೈರಸ್ನಿಂದ ಮಕ್ಕಳನ್ನ ಕಾಪಾಡಿಕೊಳ್ಳಲು ತುರ್ತಾಗಿ ಲಸಿಕೆ ಅಗತ್ಯವಾಗಿರುವ ಹಿನ್ನೆಲೆಯಲ್ಲಿ ಈ ಲಸಿಕೆಗೆ ಅನುಮತಿ ಪಡೆದುಕೊಳ್ಳುವುದು ಸದ್ಯದ ಅಗತ್ಯತೆ ಆಗಿದೆ ಎಂದು ಫೈಜರ್ನ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಆಲ್ಬರ್ಟ್ ಬೌರ್ಲಾ ಹೇಳಿದ್ದಾರೆ.
ಮೂರು ಡೋಸ್ಗಳು ಅಗತ್ಯ
ಸಂಭಾವ್ಯ ರೂಪಾಂತರಿಗಳ ವಿರುದ್ಧ ಹೋರಾಡಲು ಮಕ್ಕಳಿಗೆ ಮೂರು ಡೋಸ್ಗಳ ಅಗತ್ಯತೆ ಇದೆ ಎಂದು ಬೌರ್ಲಾ ಪ್ರತಿಪಾದಿಸಿದ್ದಾರೆ. ಹೀಗಾಗಿ ಮಕ್ಕಳಿಗೆ ಲಸಿಕೆ ಹಾಕಲು ಔಷಧ ಮಂಡಳಿಯಿಂದ ಅನುಮತಿ ಸಿಕ್ಕರೆ ಲಸಿಕಾ ಸರಣಿ ಮುಂದುವರಿಸಲು ಅನುಕೂಲವಾಗುತ್ತದೆ ಎಂದು ಫೈಜರ್ ಸಂಸ್ಥೆ ಹೇಳಿಕೊಂಡಿದೆ.
ಮಕ್ಕಳ ಲಸಿಕೆ ಪ್ರಯೋಗ ಯಶಸ್ವಿ
ಬಯೋ-ಎನ್‌ಟೆಕ್‌ನ ಸಿಇಒ ಮತ್ತು ಸಹ-ಸಂಸ್ಥಾಪಕರಾದ ಉಗುರ್ ಸಾಹಿನ್ ಮಾತನಾಡಿ, ಲಸಿಕೆಯು ಈಗಾಗಲೇ 5 ವರ್ಷದಿಂದ ಪ್ರಾರಂಭವಾಗುವ ಎಲ್ಲಾ ವಯೋಮಾನದವರಿಗೆ ಬಹು ಕ್ಲಿನಿಕಲ್ ಪ್ರಯೋಗಗಳು, ಲಸಿಕೆ ಅತ್ಯಂತ ಸುರಕ್ಷಿತ ಹಾಗೂ ಪರಿಣಾಕಾರಿಯಾಗಿ ಕೆಲಸ ಮಾಡಿದೆ ಎಂಬದನ್ನು ಸಾಬೀತು ಮಾಡಿದೆ ಎಂದು ಹೇಳಿದ್ದಾರೆ.
ಇದನ್ನು ಓದಿ:ಉಕ್ರೇನ್ ಬಿಕ್ಕಟ್ಟು: ವಿಶ್ವಸಂಸ್ಥೆಗೆ ಪತ್ರ ಬರೆದ ಕ್ರೆಮ್ಲಿನ್..ಅಮೆರಿಕ ಪ್ರಸ್ತಾಪಕ್ಕೆ ರಷ್ಯಾ ಪ್ರತಿಕ್ರಿಯೆ ಏನು?.