ನವದೆಹಲಿ: ವಿಶ್ವ ಪ್ರಸಿದ್ಧ ಅಮೆರಿಕದ ಪಾಪ್ ಸಿಂಗರ್ ಮಡೋನಾಗೆ ಕೊರೊನಾ ಸೋಂಕು ಇರುವುದು ಕನ್ಫರ್ಮ್ ಆಗಿದ್ದರೂ ಆಕೆ ಸಾಮಾಜಿಕ ಅಂತರ ಕಾಯ್ದುಕೊಳ್ಳದೇ ಪಾರ್ಟಿವೊಂದರಲ್ಲಿ ಭಾಗಿಯಾಗಿರುವುದು ಇದೀಗ ಬೆಳಕಿಗೆ ಬಂದಿದೆ.
ತಮಗೆ ಕೊರೊನಾ ಇರುವುದಾಗಿ ಕಳೆದ ಕೆಲ ದಿನಗಳ ಹಿಂದೆ ಸಿಂಗರ್ ಮಡೋನಾ ಹೇಳಿಕೊಂಡಿದ್ದರು. ಇದರ ಮಧ್ಯೆ ಕೂಡಾ ಸೆಲಿಬ್ರಿಟಿ ಫೋಟೋಗ್ರಾಪರ್ ಸ್ವಿವಿನ್ ಕ್ಲೈನ್ ಹುಟ್ಟುಹಬ್ಬದಲ್ಲಿ ಭಾಗಿಯಾಗಿರುವ ವಿಡಿಯೋ ವೈರಲ್ ಆಗಿದೆ. 61 ವರ್ಷದ ಸಿಂಗರ್ ಯಾವುದೇ ಸಾಮಾಜಿಕ ಅಂತರ ಕಾಯ್ದುಕೊಳ್ಳದೇ ಪಾರ್ಟಿಯಲ್ಲಿ ಭಾಗಿಯಾಗಿರುವುದು ಕೋವಿಡ್-19 ಹರಡಲು ಕಾರಣವಾಗಬಹುದು ಎಂದು ಕೆಲವರು ಮಾತನಾಡಿಕೊಳ್ಳುತ್ತಿದ್ದಾರೆ.
- " class="align-text-top noRightClick twitterSection" data="
">
ಕ್ವಾರಂಟೈನ್ನಲ್ಲಿರುವಂತೆ ವೈದ್ಯರು ಸಲಹೆ ನೀಡಿದ್ರೂ ಸಾಮಾಜಿಕ ಅಂತರ ಕಾಯ್ದುಕೊಳ್ಳದೇ ಪಾರ್ಟಿಯಲ್ಲಿ ಭಾಗಿಯಾಗಿರುವ ಪಾಪ್ ಸಿಂಗರ್ ಮಡೋನಾ ವಿರುದ್ಧ ಇದೀಗ ವ್ಯಾಪಕ ಆಕ್ರೋಶ ವ್ಯಕ್ತವಾಗುತ್ತಿದೆ. ಕಳೆದ ವಾರ ವಿಡಿಯೋ ಹರಿಬಿಟ್ಟಿದ್ದ ಮಡೋನಾ ತನಗೆ ಕೊರೊನಾ ಇದೇ ಎಂದು ಬಹಿರಂಗವಾಗಿ ಹೇಳಿಕೊಂಡಿದ್ದಳು. ಜತೆಗೆ ಅದಕ್ಕೆ ಔಷಧಿ ಕೂಡ ತೆಗೆದುಕೊಳ್ಳುತ್ತಿರುವುದಾಗಿ ಹೇಳಿಕೊಂಡಿದ್ದರು.