ವಾಷಿಂಗ್ಟನ್ ( ಯುಎಸ್) : ಕೊರೊನಾ ವೈರಸ್ಗೆ ಲಸಿಕೆ ಕಂಡು ಹಿಡಿಯಲು ಪ್ರಸಿದ್ದ ಸಂಸ್ಥೆ ಜಾನ್ಸನ್ ಅಂಡ್ ಜಾನ್ಸನ್ ಸಿದ್ದತೆ ನಡೆಸಿದ್ದು, ಸೆಪ್ಟೆಂಬರ್ ವೇಳೆಗೆ ಮಾನವನ ಮೇಲೆ ಪ್ರಯೋಗ ಮಾಡಲು ಚಿಂತನೆ ನಡೆಸಲಾಗಿದೆ. ಮುಂದಿನ ವರ್ಷದ ಆರಂಭದ ವೇಳೆ ಬಳಕೆಗೆ ಸಿದ್ಧವಾಗಲಿದೆ.
ಈ ಹೊಸ ಪ್ರಯೋಗಕ್ಕೆ ಯುಎಸ್ ಸರ್ಕಾರದ ಬಯೋಮೆಡಿಕಲ್ ಅಡ್ವಾನ್ಸ್ಡ್ ರಿಸರ್ಚ್ ಅಂಡ್ ಡೆವಲಪ್ಮೆಂಟ್ ಅಥಾರಿಟಿಯೊಂದಿಗೆ ಸಂಸ್ಥೆಯು 1 ಬಿಲಿಯನ್ ಯುಎಸ್ ಡಾಲರ್ ಹೂಡಿಕೆ ಮಾಡಲು ಒಪ್ಪಂದಕ್ಕೆ ಸಹಿ ಹಾಕಿದೆ ಎಂದು ಪ್ರಕಟಣೆಯಲ್ಲಿ ತಿಳಿಸಿದೆ.
ಜಾನ್ಸನ್ ಅಂಡ್ ಜಾನ್ಸನ್ ಸಂಸ್ಥೆಯು Ad26 SARS-CoV-2 ಲಸಿಕೆಯನ್ನು ಕಂಡು ಹಿಡಿಯಲು ತಯಾರಿ ನಡೆಸಿದ್ದು, ಎಬೋಲಾ ಸೋಂಕಿಗೆ ಲಸಿಕೆ ಕಂಡು ಹಿಡಿಯಲು ಬಳಸಿದ ತಂತ್ರಜ್ಞಾವನ್ನೇ ಇಲ್ಲೂ ಬಳಸಲು ತೀರ್ಮಾನಿಸಿದೆ.