ವಾಷಿಂಗ್ಟನ್ (ಯುಎಸ್): ಕೊರೊನಾ ಚೇತರಿಕೆಗಾಗಿ ಭಾರತಕ್ಕೆ ಎಲ್ಲಾ ರೀತಿಯ ಸಹಾಯವನ್ನು ಮಾಡಲು ಅಮೆರಿಕಾ ಮುಂದಾಗಲಿದೆ ಎಂದು ಯುಎಸ್ ಅಧ್ಯಕ್ಷ ಜೋ ಬೈಡನ್ ಹೇಳಿದ್ದಾರೆ.
ಕೊರೊನಾ ಸಂಬಂಧ ಮಾತನಾಡಿದ ಅವರು, ಸಾಂಕ್ರಾಮಿಕ ರೋಗದ ಆರಂಭದಲ್ಲಿ ಭಾರತವು ಯುನೈಟೆಡ್ ಸ್ಟೇಟ್ಸ್ಗೆ ಸಹಾಯ ಮಾಡಿತ್ತು ಎಂದು ಭಾರತದ ಸಹಾಯವನ್ನು ಸ್ಮರಿಸಿದರು.
ನಾನು ಪ್ರಧಾನಿ ಮೋದಿಯವರೊಂದಿಗೆ ಮಾತನಾಡಿದ್ದೇನೆ, ತಕ್ಷಣವೇ ಭಾರತಕ್ಕೆ ಅಗತ್ಯವಿರುವ ಸಂಪೂರ್ಣ ಸಹಾಯವನ್ನು ನಾವು ಮಾಡುತ್ತೇವೆ. ಇದರಲ್ಲಿ ರೆಮ್ಡಿಸಿವಿರ್ ಮತ್ತು ಇತರ ಔಷಧಿಗಳನ್ನು ಒದಗಿಸಲಾಗುತ್ತದೆ. ಈ ಮುಖಾಂತರ ರೋಗವನ್ನು ನಿಭಾಯಿಸಬಹುದು ಮತ್ತು ಚೇತರಿಕೆಗೆ ಸಹಾಯ ಮಾಡಬಹುದು ಎಂದು ಬೈಡನ್ ಹೇಳಿದರು.
ಕೋವಿಶೀಲ್ಡ್ ಲಸಿಕೆ ತಯಾರಿಕೆಗೆ ಅಗತ್ಯವಾದ ಕಚ್ಚಾ ಸಾಮಗ್ರಿ ಪೂರೈಸುವ ಭರವಸೆ ನೀಡಿರುವ ಅವರು, ಈ ಸಂಬಂಧ ಮೋದಿ ಜೊತೆ ಸುಧೀರ್ಘ ಮಾತುಕತೆ ನಡೆಸಲಾಗಿದೆ ಎಂದಿದ್ದಾರೆ.