ETV Bharat / international

ಬಿಡುಗಡೆಗೂ ಮುನ್ನ 16 ಇಂಚಿನ ಮ್ಯಾಕ್​ಬುಕ್​ ಅಡಾಪ್ಟರ್ ಚಿತ್ರ ಲೀಕ್​... ಏನಿದರ ವಿಶೇಷ?

ಆ್ಯಪಲ್​ ಸಂಸ್ಥೆಯು ತನ್ನ ಬಹುಬೇಡಿಕೆಯ ಮ್ಯಾಕ್​​ಬುಕ್​ ಹಲವು ಶ್ರೇಣಿಗಳ ಉತ್ಪನ್ನಗಳನ್ನು ಈಗಾಗಲೇ ಮಾರುಕಟ್ಟೆಗೆ ಪರಿಚಯಿಸಿದ್ದು, ಇದೇ ಶ್ರೇಣಿಯಡಿ 16 ಇಂಚಿನ್​ ಗ್ಯಾಜೆಟ್​​ ಬಿಡುಗಡೆ ಸಿದ್ಧತೆ ನಡೆಸುತ್ತಿತ್ತು. ಎ2166 ಸಂಖ್ಯೆಯ ಅಡಾಪ್ಟರ್​ ಫೋಟೋ ಇಂಟರ್​ನೆಟ್​ನಲ್ಲಿ ಹರಿದಾಡುತ್ತಿದೆ.

apple
author img

By

Published : Oct 8, 2019, 12:00 PM IST

ಸ್ಯಾನ್​​ಫ್ರಾನ್ಸಿಸ್ಕೋ: ಆ್ಯಪಲ್​ನ ಬಹುನಿರೀಕ್ಷಿತ 16 ಇಂಚಿನ​ ಮ್ಯಾಕ್​ಬುಕ್​ ಪ್ರೋ ಗ್ಯಾಜೆಟ್​ನ ಅಡಾಪ್ಟರ್​​ ಸೋರಿಕೆಯಾಗಿರುವ ಚಿತ್ರ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ಆ್ಯಪಲ್​ ಸಂಸ್ಥೆಯು ತನ್ನ ಬಹುಬೇಡಿಕೆಯ ಮ್ಯಾಕ್​​ಬುಕ್​ ಹಲವು ಶ್ರೇಣಿಗಳ ಉತ್ಪನ್ನಗಳನ್ನು ಈಗಾಗಲೇ ಮಾರುಕಟ್ಟೆಗೆ ಪರಿಚಯಿಸಿದ್ದು, ಇದೇ ಶ್ರೇಣಿಯಡಿ 16 ಇಂಚಿನ ಗ್ಯಾಜೆಟ್​​ ಬಿಡುಗಡೆ ಸಿದ್ಧತೆ ನಡೆಸುತ್ತಿತ್ತು. ಎ2166 ಸಂಖ್ಯೆಯ ಅಡಾಪ್ಟರ್​ ಫೋಟೋ ಇಂಟರ್​ನೆಟ್​ನಲ್ಲಿ ಹರಿದಾಡುತ್ತಿದೆ.

ಫೋಟೋದಲ್ಲಿ 15 ಇಂಚಿನ ಮ್ಯಾಕ್‌ಬುಕ್ ಪ್ರೊಗಾಗಿ ಬಳಸಿದ ಅಡಾಪ್ಟರ್​ನ ಗಾತ್ರ 87W ಆಗಿದೆ ಎಂದು ಆ್ಯಪಲ್ ಇನ್​ಸೈಡರ್ ವರದಿ ಮಾಡಿದೆ. ಮುಂಬರಲಿರುವ ಎಕ್ಸ್​ಡಿಆರ್ ಚಾರ್ಜರ್​ 96W ಪಾಸ್-ಥ್ರೂ ಚಾರ್ಜಿಂಗ್ ಸಾಮರ್ಥ್ಯ ಹೊಂದಿರಲಿದೆ ಎಂದು ಆ್ಯಪಲ್ ಧೃಡಪಡಿಸಿತ್ತು. ಇದು ಇಂಟೆಲ್‌ನ ಕಾಫಿ ಲೇಕ್-ಎಚ್ ಮೊಬೈಲ್ ಪ್ರೋಸೆಸರ್ ಸರಣಿಯ ರಿಫ್ರೆಶರ್​ನಿಂದ ನಿಯಂತ್ರಿಸಲ್ಪಡುತ್ತದೆ ಎಂದು ತಿಳಿಸಿತ್ತು.

ಇದಲ್ಲದೆ 15 ಇಂಚಿನ ಮ್ಯಾಕ್‌ಬುಕ್ ಪ್ರೊ ನಷ್ಟೆ ಗಾತ್ರದ್ದಾಗಿರುತ್ತದೆ ಎಂಬ ವದಂತಿ ಸಹ ಹಬ್ಬಿದೆ. ಆದರೆ, ಇದು 3072 X 1920 ರೆಸಲ್ಯೂಶನ್​ ಹೊಂದಿದೆ ಎನ್ನಲಾಗಿದೆ. 13 ಇಂಚಿನ ಮ್ಯಾಕ್‌ಬುಕ್ ಪ್ರೊ 61W ಯುಎಸ್‌ಬಿ-ಸಿ ಅಡಾಪ್ಟರ್ ಹೊಂದಿದ್ದರೆ 15 ಇಂಚಿನ 87W ಸಾಮರ್ಥ್ಯದ ಅಡಾಪ್ಟರ್ ಹೊಂದಿದೆ.

Intro:Body:

appale

Conclusion:
ETV Bharat Logo

Copyright © 2024 Ushodaya Enterprises Pvt. Ltd., All Rights Reserved.