ETV Bharat / headlines

ಮನಸ್ತಾಪದಿಂದ ತಾಯಿ ಮನೆಯಲ್ಲೇ ಉಳಿದ ಪತ್ನಿ: ನಾದಿನಿ‌ಯ ಜೊತೆ ಗಂಡ ಪರಾರಿ - beltangadi news

ಬೆಳ್ತಂಗಡಿ ತಾಲೂಕು ಕನ್ಯಾಡಿ ಗ್ರಾಮದ ಕೈಕಂಬ ಬಳಿಯ ಮಹಮ್ಮದ್ ಎಂಬವರ ಪುತ್ರಿ ಸೌಧ ಎಂಬಾಕೆಯನ್ನು ಸುಮಾರು 9 ತಿಂಗಳ ಹಿಂದೆ ಮುಸ್ತಾಫ ಎಂಬಾತನಿಗೆ ವಿವಾಹ ಮಾಡಿಕೊಡಲಾಗಿತ್ತು. ಆದರೆ ಮುಸ್ತಾಫ ತನ್ನ ಹೆಂಡತಿಯ ತಂಗಿಯನ್ನೇ ಪ್ರೀತಿಸಿ ಪರಾರಿಯಾಗಿದ್ದಾನೆ.

 A man loves with his wife's sister in belthangady

author img

By

Published : Jul 10, 2021, 2:02 AM IST

ಬೆಳ್ತಂಗಡಿ : ಮದುವೆಯಾಗಿ 9 ತಿಂಗಳಲ್ಲೇ ಪತ್ನಿಯೊಂದಿಗೆ ಮನಸ್ತಾಪ ಬಂದು ಆಕೆಯನ್ನು ತವರು ಮನೆಯಲ್ಲಿ‌ ಬಿಟ್ಟ ಅಳಿಯ, ಇದೀಗ ಪತ್ನಿಯ ತಂಗಿಯನ್ನು‌ ಕರೆದುಕೊಂಡು ಹೋಗಿರುವ ಘಟನೆ ಜು.8ರಂದು ಗುರುವಾರ ಬೆಳಗ್ಗೆ ನಡೆದಿದೆ.

ಬೆಳ್ತಂಗಡಿ ತಾಲೂಕು ಗ್ರಾಮದವೊಂದರ ಮಹಮ್ಮದ್ ಎಂಬುವರ ಪುತ್ರಿ ಸೌಧ ಎಂಬಾಕೆಯನ್ನು ಸುಮಾರು 9 ತಿಂಗಳ ಹಿಂದೆ ಮುಸ್ತಾಫ ಎಂಬಾತನಿಗೆ ವಿವಾಹ ಮಾಡಿಕೊಡಲಾಗಿತ್ತು. ಮಗಳು, ಅಳಿಯ ಮನೆಗೆ ಬಂದು ಹೋಗುತ್ತಿದ್ದ ಸಂದರ್ಭ ಮಹಮ್ಮದ್ ಅವರ ಕಿರಿಯ ಮಗಳ ಜೊತೆ ಮುಸ್ತಾಫ ಸಲುಗೆ ಬೆಳೆಸಿಕೊಂಡಿದ್ದಾನೆ.

ಇತ್ತೀಚೆಗೆ ಸೌಧ ಹಾಗೂ ಮುಸ್ತಫಾ ‌ಅವರಿಗೆ ಮನಸ್ತಾಪ ಉಂಟಾಗಿ‌ ಸೌಧ ತಮ್ಮ ತವರು ಮನೆಯಲ್ಲಿಯೇ ಉಳಿದುಕೊಂಡಿದ್ದರು. ಜು.8ರಂದು‌ ಬೆಳಗ್ಗೆ 6-45 ಗಂಟೆ ಸುಮಾರಿಗೆ ಮುಸ್ತಫಾ ತನ್ನ ತಾಯಿ ಜೊತೆ ಮಹಮ್ಮದ್ ಅವರ ಮನೆ ಬಳಿಗೆ ಆಗಮಿಸಿದ್ದು, ಈ ಸಂದರ್ಭದಲ್ಲಿ ಮಹಮ್ಮದ್ ಅವರ ಕಿರಿಯ ಪುತ್ರಿ ತನ್ನ ಮನೆಯಲ್ಲಿ ಯಾರಿಗೂ ತಿಳಿಸದೆ ಬ್ಯಾಗ್ ಜೊತೆ ಮುಸ್ತಫಾ ಜೊತೆ ಕಾರಿನಲ್ಲಿ ತೆರಳಿದ್ದಾರೆ.

ಆಕೆ ಮನೆಗೂ ಬಂದಿಲ್ಲ, ಮುಸ್ತಫಾ ಮನೆಗೂ ತೆರಳಿಲ್ಲ, ಆಕೆಯನ್ನು ಹುಡುಕಿ ಕೊಡಿ ಎಂದು ಆಕೆಯ ತಂದೆ ಮಹಮ್ಮದ್ ದೂರಿನಲ್ಲಿ ತಿಳಿಸಿದ್ದಾರೆ. ಬೆಳ್ತಂಗಡಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ‌

ETV Bharat Logo

Copyright © 2025 Ushodaya Enterprises Pvt. Ltd., All Rights Reserved.