ETV Bharat / entertainment

ಸ್ತ್ರೀ ಕುಲಕ್ಕೆ ಧೈರ್ಯ ತುಂಬಿದ ಶಿವಣ್ಣನ 'ವೇದ' ಸಿನಿಮಾ

ಇಂದು ಕನ್ನಡ, ತೆಲುಗು ಹಾಗು ತಮಿಳು ಭಾಷೆಯಲ್ಲಿ ಶಿವಣ್ಣನ ವೇದ ಸಿನಿಮಾ ಬಿಡುಗಡೆಯಾಗಿದೆ.

veda movie
ಶಿವಣ್ಣನ ವೇದ ಸಿನಿಮಾ
author img

By

Published : Dec 23, 2022, 5:00 PM IST

ವೇದ ಸಿನಿಮಾ ಬಿಡುಗಡೆ ಸಂಭ್ರಮಾಚರಣೆ

ಹ್ಯಾಟ್ರಿಕ್ ಹೀರೋ ಶಿವರಾಜ್​ಕುಮಾರ್ ಅಭಿನಯದ ವೇದಾ ಸಿನಿಮಾ ಇಂದು ಕನ್ನಡ, ತೆಲುಗು ಹಾಗು ತಮಿಳು ಭಾಷೆಯಲ್ಲಿ ತೆರೆ ಕಂಡಿದೆ. ಶಿವಣ್ಣನ 125ನೇ ಸಿನಿಮಾ ಎಂಬ ಕಾರಣಕ್ಕೆ ರಾಜವಂಶದ ಅಭಿಮಾನಿಗಳಲ್ಲಿ ದೊಡ್ಡ ಮಟ್ಟದ ನಿರೀಕ್ಷೆಯಿತ್ತು. ಆ ನಿರೀಕ್ಷೆಯನ್ನು ಸಿನಿಮಾ ನನಸು ಮಾಡಿದೆ ಎನ್ನುತ್ತಿದ್ದಾರೆ ಅಭಿಮಾನಿಗಳು.

ಹೆಣ್ಣು ಮಕ್ಕಳ ಮೇಲೆ ನಡೆಯುವ ಅನ್ಯಾಯಕ್ಕೆ ಸೇಡು ತೀರಿಸಿಕೊಳ್ಳುವ ಕಥೆಯೇ 'ವೇದ'. ಈಗಾಗಲೇ ಈ ರೀತಿಯ ಕಥಾಹಂದರವಿರುವ ಸಾಕಷ್ಟು ಸಿನಿಮಾಗಳಲ್ಲಿ ಬಂದಿವೆ. ಆದರೆ ನಿರ್ದೇಶಕ ಎ ಹರ್ಷ ಈ ಕಥೆಯನ್ನು 1960 ಹಾಗು 1980ರ ಕಾಲಘಟ್ಟಕ್ಕೆ ತಕ್ಕಂತೆ ಹೆಣೆದಿರೋದು ವಿಶೇಷ. ಮಹಿಳೆಯರು ಅನ್ಯಾಯ ಆದ ಕ್ಷಣವೇ ಆ ಅನ್ಯಾಯದ ವಿರುದ್ಧ ಸಿಡಿದು ನಿಲ್ಲಬೇಕು ಎಂಬುದೇ ವೇದದ ಸಂದೇಶ.

ಇಡೀ ಚಿತ್ರದಲ್ಲಿ ಶಿವರಾಜ್​ಕುಮಾರ್​ ಮತ್ತು ಅದಿತಿ ಸಾಗರ್ ಕಾಂಬಿನೇಷನ್​ ಹೈಲೈಟ್ ಆಗಿದೆ.​ ಅಪ್ಪ ಮಗಳ ಪಾತ್ರದಲ್ಲಿ ಇವರಿಬ್ಬರೂ ಅತ್ಯುತ್ತಮವಾಗಿ ಅಭಿನಯಿಸಿದ್ದಾರೆ. ಶಿವರಾಜ್​ಕುಮಾರ್ ಸಿನಿಮಾ ಕೆರಿಯರ್​ನಲ್ಲಿ ಎಲ್ಲಾ ಬಗೆಯ ಕಾಸ್ಟೂಮ್‌ಗಳನ್ನು ಹಾಕಿ ಅಭಿನಯಿಸಿದ್ದಾರೆ. ಆದರೆ ವೇದದಲ್ಲಿ ಹೆಚ್ಚಾಗಿ ಬ್ಲ್ಯಾಕ್ ಶರ್ಟ್ ಹಾಗು ಸಿಂಪಲ್ ಲುಂಗಿಯಲ್ಲಿ ಕಾಣಿಸಿಕೊಂಡಿದ್ದಾರೆ. ಕಣ್ಣಿನಲ್ಲೇ ಎಲ್ಲವನ್ನೇ ಹೇಳುವ ಎಕ್ಸ್​ಪ್ರೆಶನ್​​ ಎಂಥವರಲ್ಲಿಯೂ ಭಯ ಮೂಡಿಸುವಂತಿದೆ. ಅದಿತಿ ಸಾಗರ್ ಭವಿಷ್ಯದ ನಾಯಕಿ ಅನ್ನೋ ಸುಳಿವನ್ನು ವೇದ ತೋರಿಸಿಕೊಟ್ಟಿದೆ.

ಇದನ್ನೂ ಓದಿ: ವೇದ ರಿಲೀಸ್​: ಕರುನಾಡ ಚಕ್ರವರ್ತಿಯ ಹೊಸ‌ ಅವತಾರ ಮೆಚ್ಚಿದ ಅಭಿಮಾನಿಗಳು

ಶಿವರಾಜ್ ಕುಮಾರ್ ಜೋಡಿಯಾಗಿ ಗಾನವಿ ಲಕ್ಷ್ಮಣ್ ನಟಿಸಿದ್ದಾರೆ. ದಿಟ್ಟ ಮಹಿಳೆಯ ಪಾತ್ರದಲ್ಲಿ ಗಾನವಿ ಲಕ್ಷ್ಮಣ್ ಇಷ್ಟ ಆಗ್ತಾರೆ. ಶ್ವೇತಾ ಚಂಗಪ್ಪ ಫೈಟಿಂಗ್​ ಸೀನ್​​ಗಳು ಪ್ರೇಕ್ಷಕರ ಚಪ್ಪಾಳೆ ಗಿಟ್ಟಿಸಿಕೊಂಡಿದೆ. ಶಿವರಾಜ್​ಕುಮಾರ್ ಅವರ ತಾಯಿ ಪಾತ್ರದಲ್ಲಿ ಉಮಾಶ್ರೀ ಗಮನ ಸೆಳೆಯುತ್ತಾರೆ. ಕ್ಲೈಮಾಕ್ಸ್‌ನಲ್ಲಿ ಕಥೆಗೆ ಟ್ವಿಸ್ಟ್ ಕೊಡುವ ಪಾತ್ರದಲ್ಲಿ ರಘು ಶಿವಮೊಗ್ಗ ಅಭಿನಯಿಸಿದ್ದಾರೆ.

ಇದನ್ನೂ ಓದಿ: ನಾನು ಬಣ್ಣ ಹಚ್ಚಿದರೆ ಸಿನಿ‌ ಕಾರ್ಮಿಕರಿಗೆ ಕೆಲಸ ಸಿಗುತ್ತೆ: ನಟ ಶಿವ ರಾಜ್​ಕುಮಾರ್

ಡಾರ್ಕ್​ ಶೇಡ್​ನಲ್ಲಿ ಕಥೆ ಕಟ್ಟಿಕೊಡಲು ನಿರ್ದೇಶಕ ಹರ್ಷ ಪ್ರಯತ್ನಿಸಿದ್ದಾರೆ. ಇವರ ಕಥೆಯನ್ನು ಕ್ಯಾಮರಾಮ್ಯಾನ್ ಸ್ವಾಮಿ ಜೆ ಗೌಡ ಅದ್ಭುತವಾಗಿ ತೆರೆ ಮೇಲೆ ತರುವ ಪ್ರಯತ್ನ ಮಾಡಿದ್ದಾರೆ. ಆದರೆ ಸಿನಿಮಾದ ಅವಧಿ ಕೊಂಚ ಹೆಚ್ಚಾದಂತಿದೆ. ಕಲಾ ನಿರ್ದೇಶಕ ರವಿ ಸಂತೆಹಕ್ಲು ಅವರ ಅದ್ಧೂರಿ ಸೆಟ್​ಗಳು ಗಮನ ಸೆಳೆದಿವೆ. ಸಂಗೀತ ನಿರ್ದೇಶಕ ಅರ್ಜುನ್ ಜನ್ಯ ಹಾಡುಗಳು ಖುಷಿ ಕೊಡುತ್ತವೆ. ಆದರೆ ಹಿನ್ನಲೆ ಸಂಗೀತದಲ್ಲಿ ನಿರೀಕ್ಷಿಸಿದಷ್ಟು ಹೊಸತನ ಇಲ್ಲವೆನಿಸುತ್ತದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.