ETV Bharat / entertainment

ಪೂಜಾ ಹೆಗ್ಡೆ ಸಹೋದರನ ಮದುವೆಗೆ ಮಂಗಳೂರಿಗೆ ಬಂದಿದ್ರು ಸಲ್ಮಾನ್​ ಖಾನ್​ - ಕಿಸಿ ಕಾ ಭಾಯ್ ಕಿಸಿ ಕಿ ಜಾನ್

ಇತ್ತೀಚೆಗೆ ನಡೆದ ಪೂಜಾ ಹೆಗ್ಡೆ ಸಹೋದರ ರಿಷಬ್ ಹೆಗ್ಡೆ ಮದುವೆ ಕಾರ್ಯಕ್ರಮದಲ್ಲಿ ಸಲ್ಮಾನ್​ ಖಾನ್​ ಭಾಗಿಯಾಗಿದ್ದರು.

Salman Khan attends Pooja Hegde brother marriage
ರಿಷಬ್ ಹೆಗ್ಡೆ ಮದುವೆ ಕಾರ್ಯಕ್ರಮದಲ್ಲಿ ಸಲ್ಮಾನ್​ ಖಾನ್​
author img

By

Published : Feb 3, 2023, 3:14 PM IST

ಬಾಲಿವುಡ್ ಮತ್ತು ದಕ್ಷಿಣ ಚಿತ್ರರಂಗದ ಬೇಡಿಕೆಯ ನಟಿ ಪೂಜಾ ಹೆಗ್ಡೆ ಅವರ ಸಹೋದರ ರಿಷಬ್ ಹೆಗ್ಡೆ- ಶಿವಾನಿ ಶೆಟ್ಟಿ ಅವರ ಮದುವೆ ಜನವರಿ 30ರಂದು ಮಂಗಳೂರಿನಲ್ಲಿ ನಡೆದಿತ್ತು. ಈಗಾಗಲೇ ಪೂಜಾ ಹೆಗ್ಡೆ ಸಾಮಾಜಿಕ ಜಾಲತಾಣದಲ್ಲಿ ಸಹೋದರನ ಮದುವೆಯ ಫೋಟೋಗಳನ್ನು ಹಂಚಿಕೊಂಡಿದ್ದಾರೆ. ವಿವಾಹ ಸಮಾರಂಭದ ಅನೇಕ ಚಿತ್ರಗಳೀಗ ವೈರಲ್ ಆಗುತ್ತಿವೆ. ವೈರಲ್ ಚಿತ್ರಗಳಲ್ಲಿ, ಬಾಲಿವುಡ್ ನಟ ಸಲ್ಮಾನ್ ಖಾನ್ ಕೂಡಾ ಸಮಾರಂಭಕ್ಕೆ ಆಗಮಿಸಿದ್ದನ್ನು ನೋಡಬಹುದು.

Salman Khan attends Pooja Hegde brother marriage
ರಿಷಬ್ ಹೆಗ್ಡೆ ಮದುವೆ ಕಾರ್ಯಕ್ರಮದಲ್ಲಿ ಸಲ್ಮಾನ್​ ಖಾನ್​

ಸಲ್ಮಾನ್ ಖಾನ್ ಕಪ್ಪು ಶರ್ಟ್ ಮತ್ತು ಮ್ಯಾಚಿಂಗ್ ಪ್ಯಾಂಟ್‌ ಧರಿಸಿದ್ದರು. ವೈರಲ್ ವಿಡಿಯೋವೊಂದರಲ್ಲಿ, ಪೂಜಾ ಹೆಗ್ಡೆ ಅವರು ಸಲ್ಮಾನ್ ಖಾನ್​ ಅವರ 'ಛೋಟೆ ಛೋಟೆ ಭೈಯೋನ್​ ಕೆ ಬಡೇ ಭಯ್ಯಾ' ಹಾಡಿಗೆ ನೃತ್ಯ ಮಾಡುತ್ತಿರುವುದು ಕಂಡುಬಂದಿದೆ. ಫ್ಯಾಮಿಲಿ ಎಂಟರ್​ಟೈನ್​ಮೆಂಟ್​ ಚಿತ್ರ 'ಕಿಸಿ ಕಾ ಭಾಯ್ ಕಿಸಿ ಕಿ ಜಾನ್' ನಲ್ಲಿ ಸಲ್ಮಾನ್ ಖಾನ್ ಮತ್ತು ನಟಿ ಪೂಜಾ ಹೆಗ್ಡೆ ಮೊದಲ ಬಾರಿಗೆ ಸ್ಕ್ರೀನ್ ಶೇರ್ ಮಾಡಿಕೊಂಡಿದ್ದಾರೆ. ನಿರ್ಮಾಪಕರು ಇತ್ತೀಚೆಗೆ ಚಿತ್ರದ ಅಧಿಕೃತ ಟೀಸರ್ ಬಿಡುಗಡೆ ಮಾಡಿದ್ದು, ಪ್ರೇಕ್ಷಕರಿಂದ ಉತ್ತಮ ಪ್ರತಿಕ್ರಿಯೆ ಪಡೆದುಕೊಂಡಿದೆ. ಚಿತ್ರವನ್ನು ಫರ್ಹಾದ್ ಸಾಮ್ಜಿ ನಿರ್ದೇಶಿಸುತ್ತಿದ್ದಾರೆ. ಈದ್ ಸಂದರ್ಭದಲ್ಲಿ ಬಿಡುಗಡೆ ಮಾಡಲು ತಯಾರಿ ನಡೆಯುತ್ತಿದೆ. ಇನ್ನು, ಶಾರುಖ್ ಖಾನ್ ಅವರ ಆ್ಯಕ್ಷನ್ ಥ್ರಿಲ್ಲರ್ 'ಪಠಾಣ್' ಅದ್ಭುತ ಯಶಸ್ಸು ಕಂಡಿದ್ದು, ಅತಿಥಿ ಪಾತ್ರದ ಮೂಲಕ ಸಲ್ಮಾನ್ ಪ್ರೇಕ್ಷಕರ ಗಮನ ಸೆಳೆದಿದ್ದಾರೆ.

ಪೂಜಾ ಹೆಗ್ಡೆ ಕಳೆದ ಅಕ್ಟೋಬರ್​ 13ರಂದು 32ನೇ ಜನ್ಮದಿನ ಆಚರಿಸಿಕೊಂಡಿದ್ದರು. 'ಕಿಸಿ ಕಾ ಭಾಯ್ ಕಿಸಿ ಕಿ ಜಾನ್' ಶೂಟಿಂಗ್​ ಭರದಿಂದ ಸಾಗುತ್ತಿದ್ದ ಕಾರಣ ಹುಟ್ಟುಹಬ್ಬ ಮುಂಬೈನ ಶೂಟಿಂಗ್​​ ಸೆಟ್‌ನಲ್ಲಿಯೇ ನಡೆದಿತ್ತು. ಆ ಸಂದರ್ಭದಲ್ಲೂ ಸಲ್ಮಾನ್​ ಖಾನ್​ ಅವರು ಪೂಜಾ ಹೆಗ್ಡೆ ಜೊತೆಯಲ್ಲಿದ್ದರು. ಇದೀಗ ಸಹೋದರನ ಮದುವೆಯಲ್ಲಿಯೂ ಭಾಗಿಯಾಗಿದ್ದಾರೆ.

ಪೂಜಾ ಹೆಗ್ಡೆ ಕುಟುಂಬ

ಇದನ್ನೂ ಓದಿ: ದಾಂಪತ್ಯ ಜೀವನಕ್ಕೆ ಕಾಲಿಟ್ಟ ಪೂಜಾ ಹೆಗ್ಡೆ ಸಹೋದರ ರಿಷಬ್ ಹೆಗ್ಡೆ: ಫೋಟೋಗಳಿವೆ ನೋಡಿ

ಸಲ್ಮಾನ್ ಖಾನ್ ಅವರ ಮುಂಬರುವ ಚಿತ್ರಗಳನ್ನು ಗಮನಿಸುವುದಾದರೆ, ನಟಿ ಕತ್ರಿನಾ ಕೈಫ್ ಜೊತೆ ಆ್ಯಕ್ಷನ್ ಥ್ರಿಲ್ಲರ್ 'ಟೈಗರ್ 3'ನಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಇದು ದೀಪಾವಳಿ ಸಂದರ್ಭದಲ್ಲಿ ತೆರೆ ಕಾಣಲು ಸಜ್ಜಾಗುತ್ತಿದೆ. ಪೂಜಾ ಹೆಗ್ಡೆ ಇತ್ತೀಚೆಗೆ ರಣ್​ವೀರ್ ಸಿಂಗ್ ಮತ್ತು ಜಾಕ್ವೆಲಿನ್ ಫರ್ನಾಂಡಿಸ್ ಅವರೊಂದಿಗೆ 'ಸರ್ಕಸ್' ಎಂಬ ಹಾಸ್ಯಚಿತ್ರದಲ್ಲಿ ಅಭಿನಯಿಸಿದ್ದರು. ಸಿನಿಮಾ ಪ್ರೇಕ್ಷಕರನ್ನು ಸೆಳೆಯುವಲ್ಲಿ ಹಿನ್ನೆಡೆ ಕಂಡಿತ್ತು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.