ಕೋಲ್ಕತ್ತಾ: ಕರ್ನಾಟಕ ಶಾಸ್ತ್ರೀಯ ಸಂಗೀತ ವಿದ್ವಾಂಸರಾದ ಟಿವಿ ರಾಮ್ಪ್ರಸಾದ್ ದೇಶದ 12 ಪ್ರಾದೇಶಿಕ ಭಾಷೆಗಳಲ್ಲಿ ಮ್ಯೂಸಿಕ್ ವಿಡಿಯೋ ಆಲ್ಬಂ ಮಾಡಲಿದ್ದಾರೆ. ಇದಕ್ಕೆ 'The Faith Project' ಎಂದು ಹೆಸರಿಡಲಾಗಿದೆ. ಭಾರತದಾದ್ಯಂತ 12 ಪ್ರಾದೇಶಿಕ ಭಾಷೆಗಳಲ್ಲಿ ಭಕ್ತಿಗೀತೆಗಳನ್ನು ಒಳಗೊಂಡಿದೆ. ಹಾಡು ಬಂಗಾಳದ ಶ್ಯಾಮ ಸಂಗೀತದಿಂದ ಪ್ರಾರಂಭವಾಗುತ್ತದೆ.
ರಾಮ್ಪ್ರಸಾದ್ ಕರ್ನಾಟಕ ಶಾಸ್ತ್ರೀಯ ಪ್ರಕಾರದಲ್ಲಿ ಕೇಳಿ ಬರುವ ಪ್ರಮುಖ ಹೆಸರು. ಸುಮಾರು 40 ವರ್ಷಗಳಿಂದ ಸಂಗೀತದಲ್ಲಿ ತೊಡಗಿಸಿಕೊಂಡಿದ್ದಾರೆ. ದೇಶ - ವಿದೇಶಗಳಿಂದ ಅವರಿಗೆ ಅನೇಕ ಗೌರವಗಳು ಸಂದಿವೆ. ಭಾರತದ ಮತ್ತು ಬಹುಶಃ ವಿಶ್ವದ ಮೊದಲ ಆನ್‌ಲೈನ್ ಕಲಾ ಕಾಲೇಜು 'ಇ - ಅಂಬಲಂ' ಆರಂಭಿಸಿದ ಸಂಗೀತ ಗುರು ಇವರು.
'ದಿ ಫೇಯ್ತ್ ಪ್ರಾಜೆಕ್ಟ್' ಬಂಗಾಳಿ ಶ್ಯಾಮ ಸಂಗೀತದೊಂದಿಗೆ ಪ್ರಾರಂಭವಾಗುತ್ತದೆ. ಟಿವಿ ರಾಮಪ್ರಸಾದ್ ಅವರು ಶ್ಯಾಮ ಸಂಗೀತ 'ಸೋಕೋಲಿ ತೋಮರಿ ಇಚ್ಚಾ'ವನ್ನು ಸ್ಪಷ್ಟ ಬಂಗಾಳಿಯಲ್ಲಿ, ಸಾಕಷ್ಟು ಭಕ್ತಿಯಿಂದ ಹಾಡಿದ್ದಾರೆ. ಈ ಹಾಡಿನ ಮ್ಯೂಸಿಕ್ ವಿಡಿಯೋವನ್ನು ಶಮಿಕ್ ರಾಯ್ ಚೌಧರಿ ನಿರ್ದೇಶಿಸಿದ್ದಾರೆ. ಬಂಗಾಳದ ನಿರ್ದೇಶಕ ಶಮಿಕ್, ಮುರ್ಷಿದಾಬಾದ್‌ನ ವಿವಿಧ ಸ್ಥಳಗಳಲ್ಲಿ ಸಂಗೀತ ವಿಡಿಯೋವನ್ನು ಚಿತ್ರೀಕರಿಸಿದ್ದಾರೆ. ಇಲ್ಲಿಂದ 'ದಿ ಫೇಯ್ತ್ ಪ್ರಾಜೆಕ್ಟ್' ನ ಹೊಸ ಸಂಗೀತ ಚಳವಳಿ ಆರಂಭವಾಗಲಿದೆ.
ಇದನ್ನೂ ಓದಿ: ಹೆಡ್ ಬುಷ್ ಸಿನಿಮಾ ಪ್ರಚಾರಕ್ಕೆ ಮುಂದಾದ ನಟರಾಕ್ಷಸ: ಬಂಡಿ ಮಹಾಕಾಳಮ್ಮನ ಆರ್ಶೀವಾದ ಪಡೆದ ಡಾಲಿ
ಬೆಂಗಾಲಿ ಶ್ಯಾಮ ಸಂಗೀತವಲ್ಲದೇ, ಮರಾಠಿ, ಗುಜರಾತಿ, ಮಲಯಾಳಂ, ಪಂಜಾಬಿ, ಹಿಂದಿ, ಕನ್ನಡ, ಸಿಕ್ಕಿಮ್, ತೆಲುಗು ಸೇರಿದಂತೆ ಭಾರತದ 12 ಪ್ರಾದೇಶಿಕ ಭಾಷೆಗಳಲ್ಲಿ 'ದಿ ಫೇತ್ ಪ್ರಾಜೆಕ್ಟ್' ಮ್ಯೂಸಿಕ್ ಆಲ್ಬಂ ತಯಾರಾಗಲಿದೆ. ಈ ಮ್ಯೂಸಿಕ್ ಆಲ್ಬಂ ತಯಾರಿಸಲು ಟಿವಿ ರಾಮಪ್ರಸಾದ್ ಅವರಿಗೆ ಬಂಗಾಳಿ ವಿಜ್ಞಾನಿ ಬಿದಿಶಾ ರಾಯ್ ಸಹಾಯ ಮಾಡಿದ್ದಾರೆ. ಶ್ಯಾಮಸಂಗೀತ್ ನಂತರ 'ದಿ ಫೇತ್ ಪ್ರಾಜೆಕ್ಟ್' ನ ಮುಂದಿನ ಹಾಡು ಮರಾಠಿಯಲ್ಲಿ ತಯಾರಾಗಲಿದೆ.