ಭಾರತೀಯ ಚಿತ್ರರಂಗ ಕಂಡ ಶ್ರೇಷ್ಠ ನಟಿ ಶ್ರೀದೇವಿ ಅವರ ಜೀವನ ಚರಿತ್ರೆ ಪುಸ್ತಕ ರೂಪದಲ್ಲಿ ಬರಲಿದೆ. ಚಲನಚಿತ್ರ ನಿರ್ಮಾಪಕ, ನಟಿಯ ಪತಿ ಬೋನಿ ಕಪೂರ್ ಅವರು ಈ ವಿಷಯವನ್ನು ಸಾಮಾಜಿಕ ಜಾಲತಾಣದಲ್ಲಿ ತಿಳಿಸಿದ್ದಾರೆ. ಪುಸ್ತಕಕ್ಕೆ 'ಶ್ರೀದೇವಿ ದಿ ಲೈಫ್ ಆಫ್ ಎ ಲೆಜೆಂಡ್' ('SRIDEVI The Life of a Legend') ಎಂದು ಶೀರ್ಷಿಕೆ ನೀಡಲಾಗಿದೆ.
ಸೋಶಿಯಲ್ ಮೀಡಿಯಾದಲ್ಲಿ 'ಶ್ರೀದೇವಿ ದಿ ಲೈಫ್ ಆಫ್ ಎ ಲೆಜೆಂಡ್' ಬಗ್ಗೆ ಮಾಹಿತಿ ಹಂಚಿಕೊಂಡಿರುವ ಬೋನಿ ಕಪೂರ್, "ಶ್ರೀದೇವಿ ಪ್ರಕೃತಿಯ ಶಕ್ತಿ ಆಗಿದ್ದರು. ಅವರು ತಮ್ಮ ಪ್ರತಿಭೆಯನ್ನು ಪರದೆಯ ಮೂಲಕ ಪ್ರದರ್ಶಿಸಿ, ಅಭಿಮಾನಿಗಳೊಂದಿಗೆ ಹಂಚಿಕೊಂಡು ಖುಷಿಪಡುತ್ತಿದ್ದರು. ಆದರೆ ಖಾಸಗಿ ವ್ಯಕ್ತಿಯಾಗಿಯೇ ಉಳಿದುಬಿಡುತ್ತಿದ್ದರು. ಜೀವನಚರಿತ್ರೆಯನ್ನು ಧೀರಜ್ ಕುಮಾರ್ ಬರೆಯುತ್ತಿದ್ದಾರೆ. ಧೀರಜ್ ಕುಮಾರ್ ಅವರನ್ನು ಶ್ರೀದೇವಿ ತಮ್ಮ ಕುಟುಂಬದವರೆಂದೇ ಪರಿಗಣಿಸಿದ್ದರು. ಇವರು ಸಂಶೋಧಕರು, ಬರಹಗಾರರು ಮತ್ತು ಅಂಕಣಕಾರರಾಗಿದ್ದಾರೆ" ಎಂದು ತಿಳಿಸಿದ್ದಾರೆ.
-
Announcement @SrideviBKapoor @AuthorDhiraj @WestlandBooks @karthikavk @Blind_glass @LabyrinthAgency @SrideviMemoir pic.twitter.com/86NP6L5DXF
— Boney Kapoor (@BoneyKapoor) February 8, 2023 " class="align-text-top noRightClick twitterSection" data="
">Announcement @SrideviBKapoor @AuthorDhiraj @WestlandBooks @karthikavk @Blind_glass @LabyrinthAgency @SrideviMemoir pic.twitter.com/86NP6L5DXF
— Boney Kapoor (@BoneyKapoor) February 8, 2023Announcement @SrideviBKapoor @AuthorDhiraj @WestlandBooks @karthikavk @Blind_glass @LabyrinthAgency @SrideviMemoir pic.twitter.com/86NP6L5DXF
— Boney Kapoor (@BoneyKapoor) February 8, 2023
50 ವರ್ಷ, 300ಕ್ಕೂ ಹೆಚ್ಚು ಸಿನಿಮಾ: 'ಅತಿಲೋಕ ಸುಂದರಿ' ಎಂದೇ ಖ್ಯಾತಿ ಗಳಿಸಿದ್ದ ಶ್ರೀದೇವಿ ಇಂದು ನಮ್ಮೊಂದಿಗಿಲ್ಲ. ಆದರೆ ಸಿನಿಮಾ ಸಾಧನೆಯ ಮೂಲಕ ಅಭಿಮಾನಿಗಳ ಮನದಲ್ಲಿ ಅಚ್ಚಳಿಯದೇ ಉಳಿದಿದ್ದಾರೆ. ಬಾಲನಟಿಯಾಗಿ ಅಭಿನಯ ಆರಂಭಿಸಿದ್ದ ಅವರು ಸುಮಾರು 50 ವರ್ಷಗಳಲ್ಲಿ 300ಕ್ಕೂ ಹೆಚ್ಚು ಚಿತ್ರಗಳಲ್ಲಿ ನಟಿಸಿದ್ದಾರೆ. ಬಾಲಿವುಡ್, ಕಾಲಿವುಡ್, ಮಾಲಿವುಡ್, ಟಾಲಿವುಡ್ ಹಾಗು ಸ್ಯಾಂಡಲ್ವುಡ್ ಸಿನಿಮಾ ಇಂಡಸ್ಟ್ರಿಯಲ್ಲಿ ಅಭಿನಯಿಸಿದ್ದ ಪಾತ್ರಗಳಿಗೆ ಜೀವ ತುಂಬಿದ್ದರು. ಅಮೋಘ ಅಭಿನಯದಿಂದ ಮೇರು ನಟಿಯಾಗಿ ಬಹುಕಾಲ ಸಿನಿಮಾ ರಂಗವನ್ನು ಆಳಿದ್ದರು. ಅವರ ಪ್ರತೀ ಪಾತ್ರವೂ ಮನೋಜ್ಞವಾಗಿ ಮೂಡಿಬಂದಿದೆ. ಪದ್ಮಶ್ರೀ ಪ್ರಶಸ್ತಿ, ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಗಳು, ರಾಜ್ಯ ಸರ್ಕಾರದ ಪ್ರಶಸ್ತಿಗಳು ಮತ್ತು ಅಂತಾರಾಷ್ಟ್ರೀಯ ಪ್ರಶಸ್ತಿಗಳನ್ನು ಶ್ರೀದೇವಿ ಮುಡಿಗೇರಿಸಿಕೊಂಡಿದ್ದರು.
ಇದನ್ನೂ ಓದಿ: ಕಪಿಲ್ ಶರ್ಮಾ ಶೋನಲ್ಲಿ ಗೋಲ್ಡನ್ ಸ್ಟಾರ್ ಗಣೇಶ್: ಪ್ರೇಕ್ಷಕರಿಗೆ ಹಾಸ್ಯದ ರಸದೌತಣ ಪಕ್ಕಾ
ದುಬೈಯಲ್ಲಿ ನಿಧನ: ಆದ್ರೆ ಶ್ರೀದೇವಿ ದುರಂತ ಸಾವು ಕಂಡಿದ್ದರು. 2018ರ ಫೆಬ್ರವರಿ 24 ರಂದು ಪ್ರೇಕ್ಷಕರು, ಚಿತ್ರರಂಗದವರು ವಿಶೇಷವಾಗಿ ಅಭಿಮಾನಿಗಳ ಪಾಲಿಗೆ ಕರಾಳ ದಿನವಾಗಿತ್ತು. ಶ್ರೇಷ್ಠ ನಟಿಯ ಸಾವಿನ ಸುದ್ದಿ ಆಘಾತ ನೀಡಿತ್ತು. ದುಬೈಗೆ ಸಂಬಂಧಿಯೊಬ್ಬರ ಮದುವೆ ಕಾರ್ಯಕ್ರಮಕ್ಕೆಂದು ತೆರಳಿದ್ದ ಅವರು ಅಲ್ಲಿನ ತಾರಾ ಹೋಟೆಲ್ನಲ್ಲಿ ಹೃದಯಾಘಾತದಿಂದ ಮೃತಪಟ್ಟಿದ್ದರು. ಆದರೆ, ಈ ಸಾವಿನ ಹಿಂದೆ ಸಾಕಷ್ಟು ಅನುಮಾನಗಳೂ ವ್ಯಕ್ತವಾಗಿದ್ದು, ಇಂದಿಗೂ ಉತ್ತರ ಸಿಕ್ಕಿಲ್ಲ.
ಇದನ್ನೂ ಓದಿ: ಚಿತ್ರರಂಗದಲ್ಲಿ 'ಕಬ್ಜ' ಹವಾ.. ಸ್ಪೆಷಲ್ ಸಾಂಗ್ಗೆ ಸೊಂಟ ಬಳುಕಿಸಲಿದ್ದಾರೆ ಬಸಣ್ಣಿ ತಾನ್ಯಾ
ಇದೀಗ 'ಶ್ರೀದೇವಿ ದಿ ಲೈಫ್ ಆಫ್ ಎ ಲೆಜೆಂಡ್' ಪುಸ್ತಕ ಸಿದ್ಧಗೊಳ್ಳುತ್ತಿದ್ದು, ಇದೇ ವರ್ಷದಲ್ಲಿ ಬಿಡುಗಡೆ ಆಗಲಿದೆ. ಶ್ರೀದೇವಿಗೆ ಸಂಬಂಧಿಸಿದ ಕುತೂಹಲಕಾರಿ ವಿಷಯಗಳನ್ನು ಲೇಖಕ ಧೀರಜ್ ಕುಮಾರ್ ಈ ಪುಸ್ತಕದಲ್ಲಿ ಉಲ್ಲೇಖಿಸಿದ್ದಾರೆ ಎಂದು ತಿಳಿದುಬಂದಿದೆ.
ಇದನ್ನೂ ಓದಿ: ಕೃಷಿಕನಾದ ಪ್ರಸಿದ್ಧ ಕ್ರಿಕೆಟಿಗ! ಹೊಲದಲ್ಲಿ ಟ್ರ್ಯಾಕ್ಟರ್ ಮೂಲಕ ಉಳುಮೆ ಮಾಡಿದ ಎಂಎಸ್ ಧೋನಿ