ETV Bharat / entertainment

ಬಾಲಿವುಡ್​ಗೆ ಹಾರಲು​ ಸಜ್ಜಾದ ಕೀರ್ತಿ ಸುರೇಶ್.. ವರುಣ್​ ಧವನ್​ ಜೊತೆ ನಟನೆ - ತನ್ನ ಅಮೋಜ್ಞ ನಟನೆಯಿಂದಲೇ ಅಭಿಮಾನಿ

ತನ್ನ ಅದ್ಬುತ ಪ್ರತಿಭೆ, ನಟನೆಯಿಂದ ಗುರುತಿಸಿಕೊಂಡಿರುವ ನಟಿ ಇದೀಗ ಪ್ಯಾನ್​ ಇಂಡಿಯಾ ಮಟ್ಟದಲ್ಲಿ ಮಿಂಚಲು ಸಜ್ಜಾಗಿದ್ದಾರೆ.

Keerthy Suresh joins forces with Varun Dhawan and Atlee for much-awaited Bollywood debut

author img

By

Published : Jul 18, 2023, 5:29 PM IST

ಬೆಂಗಳೂರು: ರಾಷ್ಟ್ರೀಯ ಪ್ರಶಸ್ತಿ ವಿಜೇತ ನಟಿ ಕೀರ್ತಿ ಸುರೇಶ್​ ಇದೀಗ ಬಾಲಿವುಡ್​ ಅಂಗಳದಲ್ಲಿ ಸದ್ದು ಮಾಡಲು ಮುಂದಾಗಿದ್ದಾರೆ. ಮಹಾನಟಿ, ಮಿಸ್​ ಇಂಡಿಯಾ, ರಂಗ್​​ ದೇ, ದಸರಾ ಸಿನಿಮಾದಲ್ಲಿ ಅದ್ಬುತವಾಗಿ ನಟಿಸಿದ್ದ ಈ ನಟಿ ತನ್ನ ಅಮೋಜ್ಞ ನಟನೆಯಿಂದಲೇ ಅಭಿಮಾನಿಗಳನ್ನು ಸಂಪಾದಿಸಿದ್ದಾರೆ. ತಮಿಳು, ತೆಲುಗು ಚಿತ್ರದಲ್ಲಿ ಚಾಪು ಮೂಡಿಸಿದ್ದ ಈ ಬೆಡಗಿ ಬಾಲಿವುಡ್​ನ ಸರಿಯಾದ ಅವಕಾಶಕ್ಕಾಗಿ ನೋಡುತ್ತಿದ್ದರು. ಇದೀಗ ಈ ಕಾಲ ಕೂಡಿ ಬಂದಿದೆ. ಇದೀಗ ಅಂತಿಮವಾಗಿ ಬಾಲಿವುಡ್​ ಪ್ರವೇಶ ಮಾಡಲು ಸಜ್ಜಾಗಿದ್ದು, ವರುಣ್​ ಧವನ್​ ಜೊತೆಗೆ ಮೊದಲ ಬಾರಿ ತೆರೆ ಹಂಚಿಕೊಳ್ಳಲು ಸಜ್ಜಾಗಿದ್ದಾರೆ.

ಹೆಸರಿಡದ ಈ ಪ್ರಾಜೆಕ್ಟ್​​ ಅನ್ನು ತಮಿಳು ಚಿತ್ರ ನಿರ್ದೇಶಕ ಕಲೇಸ್ ನಿರ್ದೇಶಿಸಲಿದ್ದಾರೆ. ಇದೊಂದು ಆ್ಯಕ್ಷನ್​ ಚಿತ್ರವಾಗಿದ್ದು, ಚಿತ್ರದಲ್ಲಿ ಕೀರ್ತಿ ಸುರೇಶ್​ ಪ್ರಧಾನ ಮತ್ತು ಗ್ಲಾಮರಸ್​ ಪಾತ್ರದಲ್ಲಿ ಮಿಂಚಲಿದ್ದಾರೆ ಎನ್ನಲಾಗಿದೆ. ಈ ಚಿತ್ರ ಕೀರ್ತಿಯ ಬಾಲಿವುಡ್​ ಪ್ರವೇಶಕ್ಕೆ ಸರಿಯಾದ ವೇದಿಯಕೆಯಾಗಲಿದ್ದು, ತಮ್ಮ ನಟನೆ ಪ್ರದರ್ಶನಕ್ಕೂ ಇಲ್ಲಿ ಅವಕಾಶ ಇದೆ ಎಂದು ವರದಿಗಳು ತಿಳಿಸಿವೆ. ಈ ಚಿತ್ರವೂ ಭಾವನಾತ್ಮಕ, ಡ್ರಾಮ ಮತ್ತು ಆ್ಯಕ್ಷನ್​ ಮತ್ತು ಸಿಕ್ವೇನ್ಸ್​​ಗಳಿಂದ ಕೂಡಿರಲಿದ್ದು, ಜನರನ್ನು ಹಿಡಿದಿಡಲು ಬೇಕಾದ ಎಲ್ಲಾ ಅಂಶಗಳು ಇದರಲ್ಲಿದೆ. ​​

ಸದ್ಯ ಚಿತ್ರದಲ್ಲಿ ಕೀರ್ತಿ ಪಾತ್ರ ನಿರ್ವಹಣೆ ಅಂತಿಮವಾಗಿದ್ದು, ಎರಡನೇ ಮಹಿಳಾ ಪ್ರಧಾನ ನಟಿ ಪಾತ್ರಕ್ಕೆ ಆಯ್ಕೆ ಯಾರಾಗಲಿದ್ದಾರೆ ಎಂಬುದು ಖಚಿತವಾಗಿಲ್ಲ. ಮೂರು ತಿಂಗಳ ಕಾಲ ಈ ಚಿತ್ರದ ಶೂಟಿಂಗ್​ ನಡೆಯಲಿದ್ದು, ಮುಂಬೈನಿಂದ ಆರಂಭವಾಗಲಿದೆ. ಈ ಚಿತ್ರ ಎಲ್ಲವೂ ಅಂದುಕೊಂಡಂತೆ ಆದರೆ, ಮುಂದಿನ ವರ್ಷ ಅಂದರೆ 2024 ಮೇ 31ಕ್ಕೆ ತೆರೆಗೆ ಬರಲಿದೆ.

ಸದ್ಯ ಈ ಪ್ರಾಜೆಕ್ಟ್​ ಅನ್ನು ತಾತ್ಕಾಲಿಕವಾಗಿ #VD18 ಎಂದು ಹೆಸರಿಸಲಾಗಿದೆ. ಚಿತ್ರದಲ್ಲಿ ನಟ ವರುಣ್​ ಧವನ್​, ಪೊಲೀಸ್​ ಆಫೀಸರ್​ ಪಾತ್ರದಲ್ಲಿ ಮಿಂಚಲಿದ್ದಾರೆ. ಬೇಡಿಯಾ ಯಶಸ್ಸಿನಲ್ಲಿ ತೇಲುತ್ತಿರುವ ನಟ, ಈ ಚಿತ್ರದ ಬಗ್ಗೆ ಸಾಕಷ್ಟು ಉತ್ಸಾಹ ಹೊಂದಿರುವುದಾಗಿ ತಿಳಿಸಿದ್ದಾರೆ.

ಈ ಚಿತ್ರವನ್ನು ಮುರಾದ್​ ಕೇತನಿಯ ಸಿನೆ1 ಸ್ಟುಡಿಯೋ ಮತ್ತು ಪ್ರಿಯಾ ಆಟ್ಲಿ ಅವರ ಆ್ಯಪಲ್​ ಸ್ಟುಡಿಯೋ ನಿರ್ಮಾಣ ಮಾಡಲಿದ್ದು, ಜವಾನ್​ ಚಿತ್ರ ನಿರ್ಮಾಪಕ ಆಟ್ಲಿ ನಿರ್ದೇಶನದಲ್ಲಿ ಬರಲಿದೆ. ಇನ್ನು ಇದರ ಜೊತೆಗೆ ನಟ ವರುಣ್​ ಧವನ್​ ಜೊತೆಗೆ ಆಟ್ಲಿ ತಮಿಳು ರಿಮೇಕ್​ ಸಿನಿಮಾ ಮಾಡಲಿದ್ದಾರೆ ಎಂಬ ಮಾತು ಕೇಳಿ ಬಂದಿತು. ತಮಿಳಿನ ಸೂಪರ್​ ಹಿಟ್​ ಚಿತ್ರ ತೇರಿಯನ್ನು ಆಟ್ಲಿ ಹಿಂದಿಯಲ್ಲಿ ರಿಮೇಕ್​ ಮಾಡುತ್ತಾರೆ ಎಂಬ ಸುದ್ದಿ ಬಿ ಟೌನ್​ ಗಲ್ಲಿಯಲ್ಲಿ ಕೇಳಿಸಿದರೂ ಈ ಬಗ್ಗೆ ಯಾವುದೇ ಅಧಿಕೃತ ಮಾಹಿತಿ ಲಭ್ಯವಾಗಿಲ್ಲ.

ನಟಿ ಕೀರ್ತಿ ಸುರೇಶ್​ ವೃತ್ತಿ ಜೀವನದಲ್ಲಿ ಬಾಲಿವುಡ್​ ಪ್ರವೇಶವು ಗಮನಾರ್ಹ ಮೈಲಿಗಲ್ಲಾಗಲಿದೆ. ದಕ್ಷಿಣದಲ್ಲಿ ಈಗಾಗಲೇ ಪ್ರತಿಭಾವಂತೆ ಮತ್ತು ಬಹುಮುಖ ನಟಿಯಾಗಿ ಅವರು ಗುರುತಿಸಿಕೊಂಡು ಮೆಚ್ಚುಗೆ ಗಳಿಸಿದ್ದಾರೆ. ಸದ್ಯ ಆಕೆ ಗುರಿ ಪ್ಯಾನ್​ ಇಂಡಿಯಾ ವೇದಿಕೆಯಲ್ಲಿ ಗುರುತಿಸಿಕೊಳ್ಳುವುದಾಗಿದೆ.

ಇದನ್ನೂ ಓದಿ: ಫಿಟ್ನೆಸ್​ ಕಾಪಾಡಿಕೊಳ್ಳುವುದರಲ್ಲಿ ಮಹೇಶ್​ ಬಾಬು ಪರ್ಫೆಕ್ಟ್​: ಅವರ ಬ್ರೇಕ್​ಫಾಸ್ಟ್​ನಲ್ಲಿ ಏನಿರುತ್ತೆ ಗೊತ್ತಾ?

ETV Bharat Logo

Copyright © 2025 Ushodaya Enterprises Pvt. Ltd., All Rights Reserved.