ETV Bharat / entertainment

ಭಾರತದ ಶ್ರೀಮಂತ ಸೆಲೆಬ್ರಿಟಿಗಳು: ವಿರಾಟ್ ಕೊಹ್ಲಿಯನ್ನು ಹಿಂದಿಕ್ಕಿದ ರಣ್​​ವೀರ್ ಸಿಂಗ್

author img

By

Published : Mar 22, 2023, 7:29 PM IST

ಭಾರತದ ಶ್ರೀಮಂತ ಸೆಲೆಬ್ರಿಟಿಗಳ ಪಟ್ಟಿ ಬಿಡುಗಡೆ ಆಗಿದೆ.

India's most valued celebrity list
ಭಾರತದ ಶ್ರೀಮಂತ ಸೆಲೆಬ್ರಿಟಿಗಳು

ಕಾರ್ಪೊರೇಟ್ ಇನ್​ವೆಸ್ಟಿಗೇಶನ್​ ರಿಸ್ಕ್ ಕನ್ಸಲ್ಟಿಂಗ್ ಕ್ರೋಲ್‌ನ 'ಸೆಲೆಬ್ರಿಟಿ ಬ್ರ್ಯಾಂಡ್ ವ್ಯಾಲ್ಯೂಯೇಶನ್​​' ವರದಿ ಪ್ರಕಾರ, ಬಾಲಿವುಡ್ ನಟ ರಣ್​​ವೀರ್ ಸಿಂಗ್ ಹೆಚ್ಚು ಮೌಲ್ಯಯುತ ಅಥವಾ ಶ್ರೀಮಂತ ಸೆಲೆಬ್ರಿಟಿಯಾಗಿದ್ದಾರೆ. 'ಬಿಯಾಂಡ್ ದಿ ಮೈನ್‌ಸ್ಟ್ರೀಮ್' ಎಂಬ ಅಧ್ಯಯನದ ಎಂಟನೇ ಆವೃತ್ತಿಯ ಪ್ರಕಾರ, ನಟ ರಣ್​​ವೀರ್ ಸಿಂಗ್ ಭಾರತೀಯ ಶ್ರೇಷ್ಠ ಕ್ರಿಕೆಟಿಗ ವಿರಾಟ್ ಕೊಹ್ಲಿ ಅವರನ್ನು ಹಿಂದಿಕ್ಕಿ '2022ನೇ ಸಾಲಿನ ಅತ್ಯಂತ ಮೌಲ್ಯಯುತ ಭಾರತೀಯ ಸೆಲೆಬ್ರಿಟಿ' ಎನಿಸಿಕೊಂಡಿದ್ದಾರೆ. ಸತತ ಐದು ವರ್ಷಗಳಿಂದ ಈ ಪಟ್ಟಿಯಲ್ಲಿ ಕ್ರಿಕೆಟಿಗ ವಿರಾಟ್​ ಕೊಹ್ಲಿ ಅಗ್ರಸ್ಥಾನದಲ್ಲಿದ್ದರು.

2022ರಲ್ಲಿ ಕ್ರಿಕೆಟಿಗ ವಿರಾಟ್ ಕೊಹ್ಲಿ ಅವರ ಕ್ರಿಕೆಟ್​ ಮೈದಾನದಲ್ಲಿನ ಪ್ರಶ್ನಾರ್ಹ ಪ್ರದರ್ಶನವು ಅವರ ಬ್ರ್ಯಾಂಡ್ ಮೌಲ್ಯವನ್ನು ಹಾನಿಗೊಳಿಸಿದೆ ಎಂದು ತೋರುತ್ತದೆ. ಬ್ಯಾಟ್ಸ್‌ಮನ್‌ ವಿರಾಟ್ ಕೊಹ್ಲಿ ಅವರ ಸಂಪೂರ್ಣ ಬ್ರ್ಯಾಂಡ್​ ಮೌಲ್ಯವು 2020ರಲ್ಲಿ 1,965 ಕೋಟಿ ರೂ. ($ 237.7 ಮಿಲಿಯನ್​), 2021ರಲ್ಲಿ 1,535 ಕೋಟಿ ರೂ. ($ 185.7 ಮಿಲಿಯನ್) ಇತ್ತು. ಅಗ್ರಸ್ಥಾನದಲ್ಲಿದ್ದ ವಿರಾಟ್ ಕೊಹ್ಲಿ ಅವರ ಐದು ವರ್ಷಗಳ ಆಳ್ವಿಕೆಯು ಅಂತ್ಯಗೊಂಡಿದೆ. ಅದರ ಕ್ರೆಡಿಟ್ ಸಿಂಬಾ ಸ್ಟಾರ್‌ ರಣ್​ವೀರ್​ ಸಿಂಗ್​ ಅವರಿಗೆ ಸಲ್ಲುತ್ತದೆ.

$ 181.7 ಮಿಲಿಯನ್​ ಬ್ರ್ಯಾಂಡ್ ಮೌಲ್ಯದೊಂದಿಗೆ ನಟ ರಣ್​​​ವೀರ್​ ಸಿಂಗ್​ ಅವರು ಕ್ರಿಕೆಟಿಗ ವಿರಾಟ್​ ಕೊಹ್ಲಿ ಅವರನ್ನು ಹಿಂದಿಕ್ಕಿದ್ದಾರೆ. ಟೀಂ ಇಂಡಿಯಾ ಕ್ರಿಕೆಟ್​ ನಾಯಕ ಸ್ಥಾನದಿಂದ ಹೊರಬಮದ ಬಳಿಕ ವಿರಾಟ್ ಕೊಹ್ಲಿ ಅವರ ಬ್ರ್ಯಾಂಡ್​ ಮೌಲ್ಯ ಕಡಿಮೆ ಆಗಿದೆ. ಸದ್ಯ ವಿರಾಟ್​ ಕೊಹ್ಲಿ ಅವರು 176.9 ಮಿಲಿಯನ್ ಡಾಲರ್​ ಬ್ರ್ಯಾಂಡ್​​ ಮೌಲ್ಯದೊಂದಿಗೆ ದ್ವಿತೀಯ ಸ್ಥಾನದಲ್ಲಿದ್ದಾರೆ. ಇನ್ನೂ ಬಾಲಿವುಡ್​ ಕಿಲಾಡಿ ಅಕ್ಷಯ್​ ಕುಮಾರ್ ($153.6 ಮಿಲಿಯನ್)​ ಮತ್ತು ಆರ್​ಆರ್​ಆರ್​ ಖ್ಯಾತಿಯ ನಟಿ ಆಲಿಯಾ ಭಟ್ ($102.9 ಮಿಲಿಯನ್)​​ ಕ್ರಮವಾಗಿ ಮೂರು ಮತ್ತು ನಾಲ್ಕನೇ ಸ್ಥಾನದಲ್ಲಿದ್ದಾರೆ. ಈ ಹಿಂದೆ ಏಳನೇ ಸ್ಥಾನದಲ್ಲಿದ್ದ ನಟಿ ದೀಪಿಕಾ ಪಡುಕೋಣೆ $ 82.9 ಮಿಲಿಯನ್ ಬ್ರ್ಯಾಂಡ್ ಮೂಲಕ ಐದನೇ ಸ್ಥಾನ ತಲುಪಿದ್ದಾರೆ.

ಇದನ್ನೂ ಓದಿ: 47ನೇ ವಯಸ್ಸಿಗೆ ಹೆಣ್ಣು ಮಗುವಿಗೆ ಜನ್ಮ ನೀಡಿದ ಮಲಯಾಳಂ ನಟಿ ಆರ್ಯ ಪಾರ್ವತಿಯ ತಾಯಿ!

ನಟ ರಣ್​ವೀರ್​ ಸಿಂಗ್ ಬಾಲಿವುಡ್​ಗೆ ಎಂಟ್ರಿ ಕೊಟ್ಟ ಆರಂಭದಲ್ಲಿ ಈ ಮಟ್ಟಕ್ಕೆ ಯಶಸ್ಸು ಸಾಧಿಸುತ್ತಾರೆ ಎಂದು ಎಣಿಸಿರಲಿಲ್ಲವಂತೆ. ಆದರೆ, ಇವರ ನಟನೆ ಬಹುತೇಕ ಪ್ರೇಕ್ಷಕರ ಮನ ಗೆದ್ದಿತ್ತು. ರಾಮ್​ಲೀಲಾ, ಪದ್ಮಾವತ್​, ಗುಂಡೆ, ಸಿಂಬಾ, ಬಾಜಿರಾವ್​ ಮಸ್ತಾನಿ, ಗಲ್ಲಿ ಬಾಯ್​ ಹೀಗೆ ಹಲವಾರು ಸಿನಿಮಾಗಳ ಮೂಲಕ ಬಾಲಿವುಡ್​ನಲ್ಲಿ ತಮ್ಮದೇ ಆದ ಛಾಪು ಮೂಡಿಸಿದ್ದಾರೆ. ಆದ್ರೆ ಇತ್ತೀಚೆಗೆ ಹೇಳುವಷ್ಟು ಹಿಟ್ ಸಿನಿಮಾ ಕೊಟ್ಟಿಲ್ಲ. ಅಭಿನಯಕ್ಕೆ ಹೊರತಾಗಿ ಡ್ರೆಸ್ಸಿಂಗ್​ ಸ್ಟೈಲ್​ ಬಹಳ ವಿಭಿನ್ನವಾಗಿರುತ್ತದೆ. ಚಿತ್ರ ವಿಚಿತ್ರವಾಗಿ ಬಟ್ಟೆ ತೊಟ್ಟು ಸದ್ದು ಮಾಡುತ್ತಿರುತ್ತಾರೆ.

ಇದನ್ನೂ ಓದಿ: ಜನಪ್ರಿಯ ಭಾರತೀಯ ಸೆಲೆಬ್ರಿಟಿಗಳು: ರಾಮ್ ಚರಣ್ ನಂಬರ್​ 1, ಎರಡನೇ ಸ್ಥಾನದಲ್ಲಿ ದೀಪಿಕಾ

ಜಾಗತಿಕವಾಗಿ ಟ್ರೆಂಡಿಂಗ್‌ನಲ್ಲಿರುವ ಭಾರತೀಯ ಸೆಲೆಬ್ರಿಟಿಗಳ ಪಟ್ಟಿಯನ್ನು 'IMDB' ಬಿಡುಗಡೆ ಮಾಡಿತ್ತು. ಈ ವಾರದಲ್ಲಿ ಆರ್​ಆರ್​ಆರ್​ ಸ್ಟಾರ್​ ರಾಮ್ ಚರಣ್ ಜನಪ್ರಿಯ ಭಾರತೀಯ ಸೆಲೆಬ್ರಿಟಿಗಳ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದ್ದರೆ, ನಟ ರಣ್​ವೀರ್​ ಸಿಂಗ್ ಪತ್ನಿ, ಬಾಲಿವುಡ್​ ಬೇಡಿಕೆ ನಟಿ ದೀಪಿಕಾ ಪಡುಕೋಣೆ ಎರಡನೇ ಮತ್ತು ಅಲಿಯಾ ಭಟ್ ಮೂರನೇ ಸ್ಥಾನದಲ್ಲಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.