ETV Bharat / entertainment

ರಾಜಮೌಳಿಯ 'ಛತ್ರಪತಿ' ಹಿಂದಿಗೆ ರೀಮೇಕ್​​: ಬಿಡುಗಡೆಗೆ ಮುಹೂರ್ತ ಫಿಕ್ಸ್ - ರಾಜಮೌಳಿ

ಹಿಂದಿ ಆವೃತ್ತಿಯ ಛತ್ರಪತಿ ಬಿಡುಗಡೆಗೆ ಮುಹೂರ್ತ ಫಿಕ್ಸ್ ಆಗಿದ್ದು, ಇಂದು ಟೀಸರ್ ರಿಲೀಸ್ ಆಗಿದೆ.

Chatrapathi Teaser release
ಛತ್ರಪತಿ ಟೀಸರ್ ರಿಲೀಸ್
author img

By

Published : Mar 30, 2023, 8:32 PM IST

ಆರ್​ಆರ್​ಆರ್​ ಮೂಲಕ ಜನಪ್ರಿಯತೆ ಹೆಚ್ಚಿಸಿಕೊಂಡಿರುವ ರಾಜಮೌಳಿ ಅವರ 2005ರ ತೆಲುಗು ಬ್ಲಾಕ್‌ ಬಸ್ಟರ್ 'ಛತ್ರಪತಿ' ಸಿನಿಮಾದ ಅಧಿಕೃತ ಹಿಂದಿ ರೀಮೇಕ್ ಬಿಡುಗಡೆಗೆ ಮುಹೂರ್ತ ನಿಗದಿ ಆಗಿದೆ. ಇದು ತೆಲುಗು ನಟ ಶ್ರೀನಿವಾಸ್ ಬೆಲ್ಲಂಕೊಂಡ ಅವರ ಪ್ರಮುಖ ಬಾಲಿವುಡ್ ಚೊಚ್ಚಲ ಚಿತ್ರ. 'ಛತ್ರಪತಿ' ಸಿನಿಮಾ ಮೇ 12ರಂದು ಪ್ಯಾನ್ ಇಂಡಿಯಾ ಮಟ್ಟದಲ್ಲಿ ಬಿಡುಗಡೆ ಆಗಲಿದೆ. ಚಿತ್ರತಂಡ ಇಂದು ರಿಲೀಸ್​ ಡೇಟ್ ಅನೌನ್ಸ್ ಮಾಡಿದ್ದಲ್ಲದೇ, ಚಿತ್ರದ ಟೀಸರ್​ ಅನ್ನೂ ಬಿಡುಗಡೆ ಮಾಡಿದೆ.

ಯೂಟ್ಯೂಬ್‌ನಲ್ಲಿ 'ಛತ್ರಪತಿ' ಹಿಂದಿ ಆವೃತ್ತಿಯ ಟೀಸರ್ ಬಿಡುಗಡೆ ಆದ ಕೂಡಲೇ ನಟ ಶ್ರೀನಿವಾಸ್ ಬೆಲ್ಲಂಕೊಂಡ ಅವರ ಅಭಿಮಾನಿಗಳು ಕಾಮೆಂಟ್ ವಿಭಾಗದಲ್ಲಿ ತಮ್ಮ ಉತ್ಸಾಹ ವ್ಯಕ್ತಪಡಿಸಿದ್ದಾರೆ. ಟೀಸರ್‌ಗೆ ಪ್ರತಿಕ್ರಿಯಿಸಿದ ಸಾಮಾಜಿಕ ಮಾಧ್ಯಮ ಬಳಕೆದಾರರು, ಬೆಲ್ಲಂಕೊಂಡ ಸಾಯಿ ಶ್ರೀನಿವಾಸ್ ಅಭಿಮಾನಿಗಳ ಪರವಾಗಿ ನಾವು ಈ ಚಿತ್ರ ಬ್ಲಾಕ್ ಬಸ್ಟರ್ ಆಗಬೇಕೆಂದು ಬಯಸುತ್ತೇವೆ ಎಂದು ಬರೆದಿದ್ದಾರೆ. ಮತ್ತೊಬ್ಬರು ಬಾಲಿವುಡ್ ಜನರು ಥಿಯೇಟರ್‌ನಲ್ಲಿ ಈ ಮಾಸ್ಟರ್‌ಪೀಸ್ ಅನ್ನು ಪ್ರೋತ್ಸಾಹಿಸುತ್ತಾರೆ ಎಂದು ನಾನು ಭಾವಿಸುತ್ತೇನೆ ಎಂದು ಕಾಮೆಂಟ್​ ಮಾಡಿದ್ದಾರೆ. ಉಳಿದಂತೆ ಅಭಿಮಾನಿಗಳು ಫೈಯರ್, ಹಾರ್ಟ್ ಎಮೋಜಿ ಮೂಲಕ ತಮ್ಮ ಮೆಚ್ಚಿನ ನಟನ ಸಿನಿಮಾಗೆ ಪ್ರೋತ್ಸಾಹಿಸುತ್ತಿದ್ದಾರೆ.

  • " class="align-text-top noRightClick twitterSection" data="">

ಛತ್ರಪತಿ ಪ್ರಾಜೆಕ್ಟ್ ಕುರಿತು ನಟ ಬೆಲ್ಲಂಕೊಂಡ ತಮ್ಮ ಉತ್ಸಾಹ ವ್ಯಕ್ತಪಡಿಸಿದ್ದಾರೆ. 'ಬಾಲಿವುಡ್‌ಗೆ ಪಾದಾರ್ಪಣೆ ಮಾಡಲು ನಾನು ವಿಶೇಷ ಚಲನಚಿತ್ರ, ರೋಮಾಂಚಕ ಮತ್ತು ಮನರಂಜನೆಯ ಮಾಸ್ ಆಕ್ಷನ್ ಕಾಮಿಡಿ ಸಿನಿಮಾ ಛತ್ರಪತಿಯೊಂದಿಗೆ ಉತ್ಸುಕನಾಗಿದ್ದೇನೆ. ಈ ಚಿತ್ರವನ್ನು ಭಾರತದಾದ್ಯಂತ ಪ್ರೇಕ್ಷಕರಿಗೆ ತಲುಪಿಸಲು ನಾವು ಸಂತೋಷಪಡುತ್ತೇವೆ. ಏಕೆಂದರೆ ಸಿನಿಮಾ ಮಾಡಿದ ಪ್ರತಿಯೊಂದು ಕ್ಷಣವೂ ರೋಮಾಂಚನಕಾರಿ ಮತ್ತು ಕಷ್ಟಕರವಾಗಿತ್ತು ಎಂದು ತಿಳಿಸಿದ್ದಾರೆ.

ಆಸ್ಕರ್ ವಿಜೇತ ಆರ್​ಆರ್​ಆರ್​, ಬಾಹುಬಲಿ ಅಂತಹ ಚಲನಚಿತ್ರಗಳಲ್ಲಿನ ಕೆಲಸಕ್ಕಾಗಿ ಹೆಸರುವಾಸಿಯಾದ ನಿರ್ದೇಶಕ ಎಸ್ಎಸ್ ರಾಜಮೌಳಿ ಅವರ ತಂದೆ, ಹಿರಿಯ ಬರಹಗಾರ ವಿ. ವಿಜಯೇಂದ್ರ ಪ್ರಸಾದ್ ಅವರು ಚಿತ್ರಕಥೆಯನ್ನು ಬರೆದಿದ್ದಾರೆ. ಚಲನಚಿತ್ರ ನಿರ್ಮಾಣ ಸಂಸ್ಥೆಯಾದ ಪೆನ್ ಸ್ಟುಡಿಯೋಸ್​ನ ಜಯಂತಿಲಾಲ್ ಗಡ ಮತ್ತು ನಿರ್ದೇಶಕ ವಿ.ವಿ. ವಿನಾಯಕ್ ಈ ಬಿಗ್-ಬಜೆಟ್ ಆ್ಯಕ್ಷನ್ ಕಾಮಿಡಿ ಸಿನಿಮಾದಲ್ಲಿ ಕೆಲಸ ಮಾಡಿದ್ದಾರೆ.

ಇದನ್ನೂ ಓದಿ: ಪ್ರಧಾನಿ ಮೋದಿ ಭೇಟಿಯಾದ ಆಸ್ಕರ್ ವಿಜೇತ "ದಿ ಎಲಿಫೆಂಟ್ ವಿಸ್ಪರರ್ಸ್" ತಂಡ

ಎಸ್​ಎಸ್​ ರಾಜಮೌಳಿ ಅವರ ಛತ್ರಪತಿ ಸಿನಿಮಾ ಪ್ಯಾನ್ ಇಂಡಿಯಾ ಪ್ರೇಕ್ಷಕರಿಗೆ ಹೊಂದಿಕೊಳ್ಳುವ ಪರಿಪೂರ್ಣ ಯೋಜನೆಯಾಗಿದೆ ಎಂದು ಜಯಂತಿಲಾಲ್ ಗಡ ತಿಳಿಸಿದ್ದಾರೆ. ಈ ಚಲನಚಿತ್ರವು ಮಾಸ್ ಎಂಟರ್‌ಟೈನ್​ಮೆಂಟ್​ಗೆ ಅಗತ್ಯವಾದ ಎಲ್ಲಾ ಅಂಶಗಳನ್ನು ಒಳಗೊಂಡಿದೆ. ಪ್ರತಿಭಾನ್ವಿತ ಶ್ರೀನಿವಾಸ ಬೆಲ್ಲಂಕೊಂಡ ಅವರನ್ನು ಸಂಪೂರ್ಣವಾಗಿ ಹೊಸ ಪ್ರೇಕ್ಷಕರಿಗೆ (ಹಿಂದಿ) ಕರೆತರುವುದರ ಜೊತೆಗೆ, ತೀವ್ರ ಶೋಷಣೆಗೆ ಒಳಗಾಗುವ ವಲಸಿಗರನ್ನು ಉಳಿಸುವ ವ್ಯಕ್ತಿಯ ಕಥೆಯನ್ನು ಛತ್ರಪತಿ ಹೇಳಲಿದೆ ಎಂದು ತಿಳಿಸಿದ್ದಾರೆ.

ಇದನ್ನೂ ಓದಿ: 'ನಿಮ್ಮ ಅಭಿನಯ, ವ್ಯಕ್ತಿತ್ವ ಎರಡೂ ಅದ್ಭುತ': ಅನುಪಮ್​ ಖೇರ್ ಬಗ್ಗೆ ಶಿವಣ್ಣ ಗುಣಗಾನ

ಏಪ್ರಿಲ್​​ 5 ರಂದು ನಟಿ​ ರಶ್ಮಿಕಾ ಮಂದಣ್ಣ ಜನ್ಮ ದಿನ ಆಚರಿಸಿಕೊಳ್ಳಲಿದ್ದಾರೆ. ಆದ್ರೆ ಇತ್ತೀಚೆಗೆ ಮುಂಬೈ ವಿಮಾನ ನಿಲ್ದಾಣದಲ್ಲಿ ಅಭಿಮಾನಿಗಳು ನಟಿಯಿಂದ ಕೇಕ್​ ಕಟ್​ ಮಾಡಿಸಿದ್ದರು. ರಶ್ಮಿಕಾ ಜೊತೆ ನಟ ಶ್ರೀನಿವಾಸ್ ಬೆಲ್ಲಂಕೊಂಡ ಸಹ ಇದ್ದರು. ಬೆಲ್ಲಂಕೊಂಡ ಜೊತೆ ರಶ್ಮಿಕಾ ಮಂದಣ್ಣ ಕಾಣಿಸಿಕೊಂಡಿದ್ದು ಇದೇ ಮೊದಲು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.