ETV Bharat / entertainment

OMG 2: ಅಕ್ಷಯ್​ ಕುಮಾರ್ ಸಿನಿಮಾಗೆ ಸಂಕಷ್ಟ.. 'OMG 2' ಬಿಡುಗಡೆಗೆ ಸೆನ್ಸಾರ್​ ಮಂಡಳಿ ತಡೆ - ಈಟಿವಿ ಭಾರತ ಕನ್ನಡ

ಅಕ್ಷಯ್​ ಕುಮಾರ್ ನಟನೆಯ 'OMG 2' ಚಿತ್ರದ ಬಿಡುಗಡೆಗೆ ಸೆನ್ಸಾರ್​ ಮಂಡಳಿ ಪ್ರಮಾಣಪತ್ರ ನೀಡಲು ನಿರಾಕರಿಸಿದೆ.

Akshay Kumar
ಅಕ್ಷಯ್​ ಕುಮಾರ್​
author img

By

Published : Jul 13, 2023, 6:24 PM IST

2023ರ ಬಹುನಿರೀಕ್ಷಿತ ಚಿತ್ರಗಳ ಪೈಕಿ ಬಾಲಿವುಡ್​ ಕಿಲಾಡಿ ಅಕ್ಷಯ್​ ಕುಮಾರ್ ಮುಖ್ಯಭೂಮಿಕೆಯ 'OMG 2' ಕೂಡ ಒಂದು. 2011ರ ಸೂಪರ್​ ಹಿಟ್ ಚಿತ್ರ 'ಓ ಮೈ ಗಾಡ್​​'ನ ಮುಂದುವರಿದ ಭಾಗ ಇದು. ಆಗಸ್ಟ್ ತಿಂಗಳಲ್ಲಿ ಚಿತ್ರಮಂದಿರಗಳಲ್ಲಿ ತೆರೆಗಪ್ಪಳಿಸಲು ಸಜ್ಜಾಗಿರುವ ಈ ಚಿತ್ರದ ಟೀಸರ್​ ಇತ್ತೀಚೆಗಷ್ಟೇ ಬಿಡುಗಡೆಗೊಂಡಿದೆ. ಗೆಲುವಿನ ಹವಣಿಕೆಯಲ್ಲಿರುವ ಈ ಚಿತ್ರಕ್ಕೆ ಇದೀಗ ಸಂಕಷ್ಟ ಎದುರಾಗಿದೆ.

ಸೆನ್ಸಾರ್ ಬೋರ್ಡ್ ಆಫ್ ಫಿಲ್ಮ್ ಸರ್ಟಿಫಿಕೇಶನ್ (CFBC) ಚಿತ್ರ ಬಿಡುಗಡೆಗೆ ಪ್ರಮಾಣಪತ್ರ ನೀಡಲು ನಿರಾಕರಿಸಿದೆ. ಸದ್ಯ ಚಿತ್ರವನ್ನು ವಿಮರ್ಶಾ ಸಮಿತಿಗೆ ಕಳುಹಿಸಲಾಗಿದೆ. ಹೀಗಾಗಿ ಓ ಮೈ ಗಾಡ್​ ಬಿಡುಗಡೆ ತಡವಾಗಬಹುದು ಅನ್ನುತ್ತಿದ್ದಾರೆ ನೆಟ್ಟಿಗರು. ಇನ್ನು, ಈ ಸಿನಿಮಾದಲ್ಲಿ ಅಕ್ಷಯ್​ ಕುಮಾರ್​ ಶಿವನ ವೇಷಧಾರಿಯಾಗಿ ನಟಿಸಿದ್ದಾರೆ. ಈಗಾಗಲೇ ಬಿಡುಗಡೆಯಾಗಿರುವ ಟೀಸರ್​ಗೆ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ.

ಭಗವಾನ್ ಶಿವನು ರೈಲ್ವೇಯಿಂದ ಬರುವ ನೀರಿನಿಂದ ಅಭಿಷೇಕಿಸಲ್ಪಟ್ಟಿರುವುದಾಗಿ ಟೀಸರ್​ನಲ್ಲಿ ತೋರಿಸಲಾಗಿದೆ. ಈ ದೃಶ್ಯದಿಂದ ತಮ್ಮ ಭಾವನೆಗಳಿಗೆ ಧಕ್ಕೆಯಾಗಿದೆ ಎಂದು ಸಾಮಾಜಿಕ ಜಾಲತಾಣ ಬಳಕೆದಾರರು ತಮ್ಮ ಆಕ್ರೋಶ ಹೊರಹಾಕಿದ್ದಾರೆ. ಚಿತ್ರವು ಭಾರತೀಯ ಶಾಲೆಗಳಲ್ಲಿನ ಲೈಂಗಿಕ ಶಿಕ್ಷಣದ ವಿಷಯದ ಸುತ್ತ ಸುತ್ತುತ್ತದೆ ಎಂದು ವರದಿಯಾಗಿದೆ. ಸೆನ್ಸಾರ್​ ಮಂಡಳಿ ಯಾವ ಕಾರಣಕ್ಕಾಗಿ ಓ ಮೈ ಗಾಡ್​ ಸಿನಿಮಾಗೆ ತಡ್ಡೆವೊಡ್ಡಿದ್ದಾರೆ ಎಂಬುದು ಸ್ಪಷ್ಟವಾಗಿಲ್ಲ.

ಇದನ್ನೂ ಓದಿ: ಸಿಟಾಡೆಲ್​ ಶೂಟಿಂಗ್​ ಕಂಪ್ಲೀಟ್​​: ಸಿನಿಮಾಗಳಿಂದ ಬ್ರೇಕ್​ ಪಡೆದು ಚಿಕಿತ್ಸೆಗೆ ತೆರಳುವರಾ ಸಮಂತಾ?

2023ರ ಬಹುನಿರೀಕ್ಷಿತ ಚಿತ್ರ 'OMG 2': ಓ ಮೈ ಗಾಡ್ 2 ಟೀಸರ್ ಜುಲೈ 11ರಂದು ಬಿಡುಗಡೆಯಾಯಿತು. ಅಕ್ಷಯ್ ಕುಮಾರ್​ ಭಗವಾನ್ ಶಿವನ ವೇಷಧಾರಿಯಾಗಿ ಕಾಣಿಸಿಕೊಂಡರೆ, ಪಂಕಜ್ ತ್ರಿಪಾಠಿ ಪರಮ ಶಿವಭಕ್ತನ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಟೀಸರ್​ನ ಹಿನ್ನೆಲೆಯಲ್ಲಿ 'ಹರ್ ಹರ್ ಮಹಾದೇವ್' ಸಂಗೀತ ಕೇಳುತ್ತದೆ. ಅಮಿತ್ ರೈ ನಿರ್ದೇಶನದಲ್ಲಿ ಈ ಚಿತ್ರ ಮೂಡಿಬರುತ್ತಿದೆ.

ಸಿನಿಮಾದಲ್ಲಿ ಪರೇಶ್ ರಾವಲ್, ಪಂಕಜ್ ತ್ರಿಪಾಠಿ, ಯಾಮಿ ಗೌತಮ್ ಮತ್ತು ಅರುಣ್ ಗೋವಿಲ್ ಪ್ರಮುಖ ಪಾತ್ರಗಳಲ್ಲಿದ್ದಾರೆ. ಆಗಸ್ಟ್ 11 ರಂದು ಈ ಚಿತ್ರ ಥಿಯೇಟರ್​ಗಳಲ್ಲಿ ಬಿಡುಗಡೆ ಆಗಲಿದೆ. ಅದೇ ದಿನ ಮತ್ತು ಆಗಸ್ಟ್​​ ತಿಂಗಳಲ್ಲಿ ಕೆಲ ಸಿನಿಮಾಗಳು ರಿಲೀಸ್ ಆಗಲಿದ್ದು, ಬಾಕ್ಸ್ ಆಫೀಸ್​ನಲ್ಲಿ ಸ್ಪರ್ಧೆ ಏರ್ಪಡಲಿದೆ.

ಸನ್ನಿ ಡಿಯೋಲ್ ಮತ್ತು ಅಮೀಶಾ ಪಟೇಲ್ ನಟನೆಯ ಬಹುನಿರೀಕ್ಷಿತ ಚಿತ್ರ ಗದರ್ 2 ಕೂಡ ಆಗಸ್ಟ್ 11 ರಂದು ಬಿಡುಗಡೆ ಅಗಲಿದೆ. ಹಾಗಾಗಿ ಈ ಎರಡೂ ಸಿನಿಮಾಗಳು ಪೈಪೋಟಿ ನಡೆಸಲಿದ್ದು, ಪ್ರೇಕ್ಷಕರು ಯಾವ ಸಿನಿಮಾ ಸ್ವೀಕರಿಸಲಿದ್ದಾರೆ ಎಂಬುದನ್ನು ಕಾದು ನೋಡಬೇಕಿದೆ. ಇತ್ತೀಚಿನ ದಿನಗಳಲ್ಲಿ ಬಾಲಿವುಡ್​ ಕಿಲಾಡಿಯ ಸಿನಿಮಾಗಳು ಸೋತಿದ್ದು, ಅವರ ಮುಂದಿನ ಸಿನಿಮಾಗಳ ಬಗ್ಗೆ ಅಭಿಮಾನಿಗಳ ನಿರೀಕ್ಷೆ ಹೆಚ್ಚಾಗಿದೆ.

ಕೆಲ ದಿನಗಳ ಹಿಂದೆ 'ಹೌಸ್‌ಫುಲ್'ನ ಮತ್ತೊಂದು ಭಾಗ ನಿರ್ಮಾಣವಾಗಲಿದೆ ಎಂದು ಘೋಷಿಸಿದ ಅಕ್ಷಯ್​ ಕುಮಾರ್​​ ಸಿನಿಮಾ ಬಿಡುಗಡೆ ದಿನಾಂಕವನ್ನೂ ಪ್ರಕಟಿಸಿದ್ದಾರೆ. ಸಾಜಿದ್ ನಾಡಿಯಾಡ್ವಾಲಾ ನಿರ್ಮಾಣದ ಈ ಸಿನಿಮಾಗೆ ನಿರ್ದೇಶಕ ತರುಣ್ ಮನ್ಸುಖಾನಿ ಆ್ಯಕ್ಷನ್​ ಕಟ್​ ಹೇಳಲಿದ್ದಾರೆ. ಮುಂಬರುವ ದೀಪಾವಳಿ ಸಂದರ್ಭ ಚಿತ್ರಮಂದಿರಗಳಲ್ಲಿ ಹೌಸ್​ಫುಲ್​ 5 ತೆರೆಕಾಣಲಿದೆ.

ಇದನ್ನೂ ಓದಿ: ನಟಿ ಪರಿಣಿತಿ ಚೋಪ್ರಾ ಮನೆ ಬಳಿ ಕಾಣಿಸಿಕೊಂಡ ಭಾವಿ ಪತಿ ರಾಘವ್ ಚಡ್ಡಾ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.