ETV Bharat / entertainment

'ಬ್ಯಾಟೆಮರ' ಕಥಾಸಂಕಲನ ಬಿಡುಗಡೆಗೊಳಿಸಿದ ರಾಜ್ ಬಿ.ಶೆಟ್ಟಿ

'ಬ್ಯಾಟೆಮರ' ಕಥಾಸಂಕಲನವನ್ನು ರಾಜ್ ಬಿ.ಶೆಟ್ಟಿ ರಿಲೀಸ್ ಮಾಡಿದ್ದಾರೆ.

Byatemara book released by actor Raj b shetty
'ಬ್ಯಾಟೆಮರ' ಕಥಾಸಂಕಲನ ಅನಾವರಣ ಕಾರ್ಯಕ್ರಮ
author img

By ETV Bharat Karnataka Team

Published : Nov 3, 2023, 11:49 AM IST

ಬರಹಗಾರ ಎ.ಎಸ್.ಜಿ ಅವರ ಮೊದಲ ಕಥಾಸಂಕಲನ 'ಬ್ಯಾಟೆಮರ'ವನ್ನು ಕೋಟಿಗಾನಹಳ್ಳಿ ರಾಮಯ್ಯ ಮತ್ತು ನಟ-ನಿರ್ದೇಶಕ ರಾಜ್ ಬಿ.ಶೆಟ್ಟಿ ಬಿಡುಗಡೆ ಮಾಡಿದರು. ಇತ್ತೀಚೆಗೆ ಬೆಂಗಳೂರಿನ ಕಲಾಗ್ರಾಮದ ಸಂಭಾಗಣದಲ್ಲಿ ನಡೆದ ಕಥಾಸಂಕಲನ ಅನಾವರಣ ಕಾರ್ಯಕ್ರಮದಲ್ಲಿ ನಟರಾಜ್ ಬುದಾಳ್, ಜಯತೀರ್ಥ ಹಾಗೂ ದಯಾ ಗಂಗನಘಟ್ಟ ವಿಶೇಷ ಅತಿಥಿಗಳಾಗಿ ಆಗಮಿಸಿ ಎ.ಎಸ್.ಜಿ ಅವರಿಗೆ ಜೊತೆಯಾದರು.

Byatemara book released by actor Raj b shetty
'ಬ್ಯಾಟೆಮರ' ಕಥಾಸಂಕಲನ ಬಿಡುಗಡೆ ಸಮಾರಂಭ

ಪುಸ್ತಕ ಬಿಡುಗಡೆ ಬಳಿಕ ಮಾತನಾಡಿದ ರಾಜ್ ಬಿ.ಶೆಟ್ಟಿ, ಎ.ಎಸ್.ಜಿ ಅವರು ಹಳ್ಳಿಗಾಡಿನ ಸಂಸ್ಕೃತಿಯನ್ನು ಬಿಂಬಿಸುವ ಕೆಲಸ ಮಾಡುತ್ತಿದ್ದಾರೆ. ಹಲವು ಸಿನಿಮಾಗಳಿಗೆ ಬರಹಗಾರರಾಗಿ ಗಮನ ಸೆಳೆದಿರುವ ಎ.ಎಸ್.ಜಿ ಅವರಿಗೆ ಒಳ್ಳೆಯ ಭವಿಷ್ಯ ಇದೆ ಎಂದರು.

ಮೂಲತಃ ಹಾಸನ ಜಿಲ್ಲೆಯ ಅರಸೀಕೆರೆ ತಾಲೂಕಿನ ಆಲದಹಳ್ಳಿಯವರಾದ ಎ.ಎಸ್.ಜಿ ತಮ್ಮ ಸುತ್ತಮುತ್ತಲಿನ ಕಥೆಗಳನ್ನು ಅಕ್ಷರ ರೂಪಕ್ಕಿಳಿಸಿ ತಯಾರಿಸಿರುವ ಗ್ರಾಮೀಣ ಸೊಗಡಿನ ಕಥೆಗಳ ಗುಚ್ಛವೇ 'ಬ್ಯಾಟೆಮರ'. ಎ.ಎಸ್.ಜಿ ಅವರ ಈ ಪುಸ್ತಕ ಪ್ರೀತಿಗೆ ಕಾರಣ ಸಿನಿಮಾರಂಗ. ಸಿನಿಮಾವನ್ನೇ ಉಸಿರಾಗಿಸಿಕೊಂಡು ಸಿನಿಮಾಕ್ಕಾಗಿ ತುಡಿಯುತ್ತಿರುವ ಎ.ಎಸ್.ಜಿ ನಿರ್ದೇಶಕರಾಗಿ ಕನ್ನಡ ಚಿತ್ರರಂಗಕಕ್ಕೆ ಹೆಜ್ಜೆ ಇಡುವ ಹುಮ್ಮಸ್ಸಿನಲ್ಲಿದ್ದಾರೆ. ಅದಕ್ಕಾಗಿ ಪ್ರಸ್ತುತ ತಮ್ಮಲ್ಲಿನ ಪುಸ್ತಕ ಪ್ರೀತಿಯನ್ನು ತೆರೆದಿಟ್ಟಿದ್ದಾರೆ. ಸಾಹೇಬ, ತೂತುಮಡಿಕೆ, ಒಂದ್ ಕಥೆ ಹೇಳ್ಲಾ ಸಿನಿಮಾಗಳಿಗೆ ಬರಹಗಾರರಾಗಿ ಕೆಲಸ ಮಾಡಿರುವ ಎ ಎಸ್ ಜಿ ಡೈರೆಕ್ಟರ್ ಕ್ಯಾಪ್ ತೊಡಲಿದ್ದಾರೆ. ಈಗಾಗಲೇ ಕಥೆ ಸಿದ್ಧ ಮಾಡಿಕೊಂಡು ನಿರ್ಮಾಪಕರ ಹುಡುಕಾಟದಲ್ಲಿ ತೊಡಗಿದ್ದಾರೆ. ಕಳೆದ ಏಳೆಂಟು ವರ್ಷಗಳಿಂದ ಬರಹಗಾರನಾಗಿ ಅನುಭವವಿರುವ ಎ.ಎಸ್.ಜಿ ತಮ್ಮ ಇಷ್ಟು ವರ್ಷದ ಪರಿಶ್ರಮವೆಲ್ಲವನ್ನೂ ಹಾಕಿ ಸಿನಿಮಾ ನಿರ್ದೇಶನಕ್ಕಿಳಿಯುತ್ತಿದ್ದಾರೆ.

ಇದನ್ನೂ ಓದಿ: ಉರ್ಫಿ ಜಾವೇದ್​ರನ್ನು ಕರೆದೊಯ್ದ ಮುಂಬೈ ಪೊಲೀಸರು: ವಿಡಿಯೋ ವೈರಲ್​

ರಾಜ್ ಬಿ.ಶೆಟ್ಟಿ ಸಿನಿಮಾ ವಿಚಾರ ಗಮನಿಸುವುದಾದರೆ, ಆಗಸ್ಟ್ 25ರಂದು ರಾಜ್ಯಾದ್ಯಂತ ಚಿತ್ರಮಂದಿರಗಳಲ್ಲಿ ಟೋಬಿ ಸಿನಿಮಾ ತೆರೆಕಂಡು ಪ್ರೇಕ್ಷಕರನ್ನು ರಂಜಿಸುವಲ್ಲಿ ಯಶ ಕಂಡಿದೆ. ಟಿ.ಕೆ.ದಯಾನಂದ್ ಕಥೆ ಬರೆದಿದ್ದು, ರಾಜ್ ಬಿ.ಶೆಟ್ಟಿ ರಚನೆ ಹಾಗೂ ಬಾಸಿಲ್ ನಿರ್ದೇಶನದಲ್ಲಿ ಈ ಚಿತ್ರ ಮೂಡಿಬಂದಿದೆ. ಸಂಯುಕ್ತ ಹೊರನಾಡು ಮತ್ತು ಚೈತ್ರಾ ಆಚಾರ್ ನಾಯಕಿಯರ ಪಾತ್ರ ವಹಿಸಿದ್ದರು. ಚಿತ್ರವನ್ನು ಲೈಟರ್ ಬುದ್ಧ ಫಿಲ್ಮ್ಸ್​, ಅಗಸ್ತ್ಯ ಫಿಲ್ಮ್ಸ್, ಕಾಫಿ ಗ್ಯಾಂಗ್ ಸ್ಟುಡಿಯೋ ಲಾಂಛನದಲ್ಲಿ ರವಿ ರೈ ಕಳಸ ನಿರ್ಮಿಸಿದ್ದು, ಶಾಮಿಲ್ ಬಂಗೇರ ಕಾರ್ಯಕಾರಿ ನಿರ್ಮಾಪಕರಾಗಿ ಕೆಲಸ ಮಾಡಿದ್ದಾರೆ. ಇನ್ನೂ ಸ್ಯಾಂಡಲ್​ವುಡ್​ನ ಮೋಹಕ ತಾರೆ ರಮ್ಯಾ ನಿರ್ಮಾಣದ 'ಸ್ವಾತಿ ಮುತ್ತಿನ ಮಳೆ ಹನಿಯೇ' ಸಿನಿಮಾದಲ್ಲಿ ರಾಜ್​ ಬಿ.ಶೆಟ್ಟಿ ಪ್ರಮುಖ ಪಾತ್ರ ವಹಿಸಿದ್ದು, ನವೆಂಬರ್ 24 ರಂದು ರಾಜ್ಯಾದ್ಯಂತ ಚಿತ್ರಮಂದಿರಗಳಲ್ಲಿ ತೆರೆಕಾಣಲಿದೆ. ನಟಿ ರಮ್ಯಾ ನಿರ್ಮಾಣದ ಚೊಚ್ಚಲ ಚಿತ್ರದ ಮೇಲೆ ಸಿನಿಪ್ರಿಯರು ಸಾಕಷ್ಟು ನಿರೀಕ್ಷೆ ಇಟ್ಟುಕೊಂಡಿದ್ದಾರೆ.

ಇದನ್ನೂ ಓದಿ: ಅಭಿಮಾನಿಗಳೊಂದಿಗೆ ಕುಣಿದು ಕುಪ್ಪಳಿಸಿದ ಶಾರುಖ್ ಖಾನ್: 'ಡಂಕಿ' ಬಗ್ಗೆ ಮತ್ತಷ್ಟು ಡೀಟೆಲ್ಸ್

ETV Bharat Logo

Copyright © 2024 Ushodaya Enterprises Pvt. Ltd., All Rights Reserved.