ETV Bharat / entertainment

Bengaluru Boys: 'ನನ್ನ ಯೌವ್ವನ‌ ಟಪಾಸ್' ಅಂತಿದ್ದಾರೆ ನಟ ಚಿಕ್ಕಣ್ಣ..ಸಾಂಗ್​ನಿಂದಲೇ ಸೌಂಡ್​ ಮಾಡುತ್ತಿದೆ 'ಬೆಂಗಳೂರು ಬಾಯ್ಸ್'

author img

By

Published : Jun 26, 2023, 12:36 PM IST

'ಬೆಂಗಳೂರು ಬಾಯ್ಸ್' ಚಿತ್ರದ ಯೌವ್ವನ ಎಂಬ ಹಾಡು ದೊಡ್ಡ ಮಟ್ಟದಲ್ಲಿ ಸಕ್ಸಸ್​ ಆಗುತ್ತಿದೆ. ಚಿತ್ರ ತಂಡ ಇದೇ ಖುಷಿಯಲ್ಲಿ ಪಾರ್ಟಿ ಮಾಡಿದೆ.

ಬೆಂಗಳೂರು ಬಾಯ್ಸ್
ಬೆಂಗಳೂರು ಬಾಯ್ಸ್

ಬೆಂಗಳೂರು: 'ಬೆಂಗಳೂರು ಬಾಯ್ಸ್' ಹಾಡುಗಳು ಹಾಗು ಟ್ರೈಲರ್​ನಿಂದಲೇ ಸೌತ್ ಸಿನಿಮಾ ಇಂಡಸ್ಟ್ರಿಯಲ್ಲಿ ಟಾಕ್ ಆಗುತ್ತಿರುವ ಚಿತ್ರ. ಅಭಿಷೇಕ್ ದಾಸ್, ಸಚಿನ್ ಚೆಲುವರಾಯಸ್ವಾಮಿ, ಚಂದನ್ ಆಚಾರ್ ಹಾಗು ರೋಹಿತ್ ಮುಖ್ಯಭೂಮಿಕೆಯಲ್ಲಿರೋ ಬೆಂಗಳೂರು ಬಾಯ್ಸ್ ಚಿತ್ರದ ನನ್ನ ಯೌವನ ಎಂಬ ಹಾಡು ಹಿಟ್ ಆಗಿದ್ದು, ಚಿತ್ರಕ್ಕೆ ದೊಡ್ಡ ಮಟ್ಟದ ಪ್ಲಸ್ ಪಾಯಿಂಟ್ ಆಗಿದೆ.

ಈ ಹಾಡಿನಲ್ಲಿ ಕಾಮಿಡಿ ಕಿಂಗ್ ಚಿಕ್ಕಣ್ಣ ಧ್ವನಿಯಾಗಿರುವುದರ ಜೊತೆಗೆ ಸಖತ್ ಆಗಿಯೇ ಅಭಿನಯಿಸಿದ್ದಾರೆ. ಸದ್ಯ ಟಪಾಸ್ ಹಾಡು ಈಗ ಭಾರೀ ಸದ್ದು ಮಾಡುತ್ತಿದೆ. ಸಾಫ್ಟ್‌ವೇರ್​ಗಳ ಪಾಡು ವಿವರಿಸುವ ಹಾಡು ಇದಾಗಿದ್ದು, ಧರ್ಮವಿಷ್ ಅವರ ಸಂಗೀತ, ಅರಸು ಅಂಥರೆ ಅವರ ಸಾಹಿತ್ಯವಿದೆ. ಸಾಂಗ್​ನ ಸಕ್ಸಸ್​ನ ಸಂಭ್ರಮದಲ್ಲಿರುವ ಬೆಂಗಳೂರು ಬಾಯ್ಸ್ ಚಿತ್ರತಂಡ ಪಾರ್ಟಿ ಮಾಡುವ ಮೂಲಕ ಸೆಲೆಬ್ರೆಟ್ ಮಾಡುತ್ತಿದೆ.

ವೇಸ್ಟ್ ಎನಿಸಿಕೊಳ್ಳುವ ಲಾಸ್ಟ್ ಬೆಂಚ್ ಸ್ಟೂಡೆಂಟ್ ಬದುಕಿನಲ್ಲಿ ಸಾಧನೆಯ ಗುರಿಮುಟ್ಟಿದ ಸಾಕಷ್ಟು ಉದಾಹರಣೆಗಳಿವೆ. ಅಂತಹದ್ದೇ ಕಥಾಹಂದರ ಹೊಂದಿರುವ ಸಿನಿಮಾ ಬೆಂಗಳೂರು ಬಾಯ್ಸ್. 90ರ ದಶಕದಲ್ಲಿ ಸೂಪರ್ ಹಿಟ್ ಸಿನಿಮಾಗಳಾದ ರಣಧೀರ, ಅಂತ, ಓಂ ಹಾಗೂ ಎ ಚಿತ್ರಗಳ ಪಾತ್ರದಲ್ಲಿ ಅಭಿಷೇಕ್ ದಾಸ್, ಸಚಿನ್ ಚೆಲುವರಾಯಸ್ವಾಮಿ, ಚಂದನ್ ಆಚಾರ್, ರೋಹಿತ್ ಮಿಂಚಿದ್ದಾರೆ.

ಇವರಿಗೆ ಜೋಡಿಯಾಗಿ ಪ್ರಗ್ಯ ನಯನ, ವೈನಿಧಿ ಜಗದೀಶ್, ಜಯಶ್ರೀ ಆಚಾರ್ ಹಾಗೂ ಸೋನಿ ನಟಿಸಿದ್ದಾರೆ. ಇದರ ಜೊತೆಗೆ ಕಾಮಿಡಿ ಕಿಂಗ್ ಚಿಕ್ಕಣ್ಣ ಪ್ರಮುಖ ಪಾತ್ರವೊಂದರಲ್ಲಿ ನಟಿಸಿದ್ದು, ಐಟಿಬಿಟಿ ಉದ್ಯೋಗಿಯಾಗಿ ಕಾಣಿಸಿಕೊಂಡಿದ್ದಾರೆ. ಉಮೇಶ್, ಪಿಡಿ ಸತೀಶ್, ಮೋಹನ್ ಜೂನೇಜಾ ಸೇರಿದಂತೆ ಹಿರಿಯ ಕಲಾವಿದರ ದಂಡು ಚಿತ್ರದಲ್ಲಿದೆ.

ಇದನ್ನೂ ಓದಿ: Guntur Kaaram: ಪೂಜಾ ಹೆಗ್ಡೆ ಸ್ಥಾನಕ್ಕೆ ಶ್ರೀಲೀಲಾ - 'ಗುಂಟೂರು ಕಾರಂ'ಗೆ ಮೀನಾಕ್ಷಿ ಛೌಧರಿ ಹೊಸ ಎಂಟ್ರಿ

ಬೆಂಗಳೂರು ಬಾಯ್ಸ್ ಸಿನಿಮಾಗೆ 'ಅಂಬಿ ನಿಂಗೆ ವಯಸ್ಸಾಯ್ತೋ' ಸಿನಿಮಾ ಖ್ಯಾತಿಯ ಗುರುದತ್‌ ಗಾಣಿಗ ಕ್ರಿಯೇಟಿವ್‌ ನಿರ್ದೇಶಕರಾಗಿ ಕೆಲಸ ಮಾಡಿದ್ದು, ರವಿ ಶ್ರೀರಾಮ್ ಕೋ ಡೈರೆಕ್ಟರ್ ಆಗಿ, ಡಿ ಆರ್ ಶ್ರೀನಿವಾಸ್ ಅಸೋಸಿಯೇಟ್ ಡೈರೆಕ್ಟರ್ ಆಗಿ ಕೆಲಸ ನಿರ್ವಹಿಸಿದ್ದಾರೆ. ರಿಜೋ ಪಿ ಜಾನ್ ಛಾಯಾಗ್ರಹಣ, ಧರ್ಮ ವಿಶ್ ಟ್ಯೂನ್ ಹಾಕಿದ್ದಾರೆ.

ಸಿನಿಮಾ ಆಸಕ್ತಿ ಹೊಂದಿರುವ ತೆಲುಗು ಮೂಲದ ವಿಕ್ರಮ್‌ ಕೆ ವೈ ಚಿತ್ರವನ್ನು ನಿರ್ಮಾಣ ಮಾಡಿದ್ದು, ಪ್ರಶಾಂತ್ ರಾವ್ ಪುರಂ ಸಹ ನಿರ್ಮಾಣದ ಜವಾಬ್ದಾರಿ ಹೊತ್ತಿದ್ದಾರೆ. ವಿ ಮೇಕರ್ಸ್ ನಿರ್ಮಾಣದಲ್ಲಿ ಮೂಡಿಬಂದಿರುವ ಬೆಂಗಳೂರು ಬಾಯ್ಸ್ ಸಿನಿಮಾದ ಇದೇ 30ರಂದು ರಾಜ್ಯಾದ್ಯಂತ ಚಿತ್ರ ರಿಲೀಸ್ ಆಗಲಿದೆ.

ಇದನ್ನೂ ಓದಿ: ನಿವೇಶನ ಮಾರಾಟ ಹೆಸರಿನಲ್ಲಿ ನಟ ಮಾಸ್ಟರ್ ಆನಂದ್​ಗೆ ವಂಚನೆ - ದೂರು ದಾಖಲು

ಇದನ್ನೂ ಓದಿ:Project K: ಪ್ರಭಾಸ್​, ದೀಪಿಕಾ, ಬಿಗ್​ ಬಿ ಜೊತೆ ನಟಿಸಲಿರುವ ಕಮಲ್ ಹಾಸನ್

ETV Bharat Logo

Copyright © 2024 Ushodaya Enterprises Pvt. Ltd., All Rights Reserved.